ನವದೆಹಲಿ: ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎಚ್‌ಎಐ) ನೂತನ ಅಧ್ಯಕ್ಷರಾಗಿ ಕೆ.ಬಿ.ಕಚ್ರು ಹಾಗೂ ಉಪಾಧ್ಯಕ್ಷರಾಗಿ ರೋಹಿತ್ ಖೋಸ್ಲಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ನವದೆಹಲಿಯ ದಿ ಪಾರ್ಕ್‌ನಲ್ಲಿ 2024ರ ಮಾರ್ಚ್ 18ರಂದು ಆಯೋಜಿಸಿದ್ದ ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ 27ನೇ ವಾರ್ಷಿಕ ಸಾಮಾನ್ಯ ಸಭೆ ನಂತರ ನಡೆದ ಸಂಘದ ಮೈಲಿಗಲ್ಲಾದ ನೂರನೇ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಕೆ.ಬಿ.ಕಚ್ರು ಅವರು ರಾಡಿಸನ್ ಹೋಟೆಲ್ ಗ್ರೂಪ್‌ನ ದಕ್ಷಿಣ ಏಷ್ಯಾ ಅಧ್ಯಕ್ಷರಾಗಿದ್ದು, ಇವರು ನಿರ್ಗಮಿತ ಅಧ್ಯಕ್ಷ ಪುನೀತ್ ಛತ್ವಾಲ್ ಅವರಿಂದ ಅಧಿಕಾರ ಸ್ವೀಕರಿಸಿಕೊಂಡರು. ಈ ಅಧಿಕಾರಾವಧಿ ಎರಡು ವರ್ಷಗಳ ಕಾಲ ಇರಲಿದೆ. ಪುನೀತ್ ಅವರ ಅಧಿಕಾರಾವಧಿ ಮಾ.18ಕ್ಕೆ ಮುಗಿದಿದೆ. ರೋಹಿತ್ ಖೋಸ್ಲಾ ಅವರು ಇಂಡಿಯನ್ ಹೋಟೆಲ್ಸ್ ಕಂಪನಿ ಲಿ. (ಐಎಚ್‌ಸಿಎಲ್) ಇದರ ಕಾರ್ಯಾಚರಣೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.
ಕೋವಿಡ್-19 ಸಮಯದಲ್ಲಿ ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾವು ಉದ್ಯಮದ ಇತರ ಸಂಸ್ಥೆಗಳ ಜೊತೆ ಚರ್ಚಿಸಿ, ಪುರವಣಿ ಹಾಗೂ ಪತ್ರಿಕೆ ಹೊರತರಲು ಆಕ್ರಮಣಕಾರಿಯಾಗಿ ಯೋಜಿಸಿ, ವ್ಯಾಪಕ ಪ್ರಚಾರಕ್ಕಾಗಿ ಮಾಧ್ಯಮಗಳೊಂದಿಗೆ ಸಕ್ರಿಯವಾಗಿ ತೊಡಗಿಕೊಂಡಿತ್ತು ಎಂಬುದನ್ನು ಕೆ.ಬಿ.ಕಚ್ರು ನೆನಪಿಸಿಕೊಂಡರು.
ಛತ್ವಾಲ್ ಅವರ ನೇತೃತ್ವದಲ್ಲಿ ಹೋಟೆಲ್ ಅಸೋಸಿಯೇಷನ್ ಆಫ ಇಂಡಿಯಾವು ಕಳೆದ 2 ವರ್ಷಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ ಇನ್ನಷ್ಟು ಎತ್ತರಕ್ಕೆ ತಲುಪಿದೆ. ಈಗ ಕಚ್ರು ಅವರ ನೇತೃತ್ವದಲ್ಲಿ ಸಂಘವನ್ನುಇನ್ನೊಂದು ಮಜಲಿಗೆ ತಲುಪಿಸಿ ಹೊಸ ಮೈಲಿಗಲ್ಲು ಸ್ಥಾಪಿಸಲು ನಾವು ಮುಂದಾಗಿದ್ದೇವೆ ಎಂದು ಉಪಾಧ್ಯಕ್ಷ ರೋಹಿತ್ ಖೋಸ್ಲಾ ಹೇಳಿದರು.
ಎಚ್‌ಐಎನ ನೂತನ 16 ಸದಸ್ಯರ ಕಾರ್ಯಕಾರಿ ಸಮಿತಿ
ಅಧ್ಯಕ್ಷ: ಕೆ.ಬಿ.ಕಚ್ರು, ರಾಡಿಸನ್ ಗ್ರೂಪ್ ಹೋಟೆಲ್‌ನ ದಕ್ಷಿಣ ಏಷ್ಯಾ ಅಧ್ಯಕ್ಷ.
ಉಪಾಧ್ಯಕ್ಷ: ರೋಹಿತ್ ಖೋಸ್ಲಾ, ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿ. ಕಾರ್ಯಾಚರಣೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ.
ಗೌರವ ಕಾರ್ಯದರ್ಶಿ: ಡಾ.ಜೆ.ಕೆ.ಮೊಹಂತಿ, ಸ್ವೋಸ್ತಿ ಪ್ರೀಮಿಯಂ ಲಿ. ವ್ಯವಸ್ಥಾಪಕ ನಿರ್ದೇಶಕ.
ಗೌರವ ಖಜಾಂಚಿ: ಸಂಜಯ್ ಸೇಥಿ, ಚಾಲೆಟ್ ಹೋಟೆಲ್ಸ್ ಲಿ. ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ.
ಕಾರ್ಪೊರೇಟ್ ಸದಸ್ಯರು
ಪುನೀತ್ ಛತ್ವಾಲ್: ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ, ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್.
ವಿಕ್ರಮ್ ಒಬೆರಾಯ್: ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ, ಈಸ್ಟರ್ನ್ ಇಂಟರ್‌ನ್ಯಾಷನಲ್ ಹೋಟೆಲ್ಸ್ ಲಿಮಿಟೆಡ್ (ಇಐಎಚ್).
ಪ್ರಿಯಾ ಪೌಲ್: ಅಧ್ಯಕ್ಷೆ ಅಪೀಜಯ್ ಸುರೇಂದ್ರ ಪಾರ್ಕ್ ಹೋಟೆಲ್ಸ್ ಲಿಮಿಟೆಡ್
ಡಾ. ಜ್ಯೋತ್ಸ್ನಾ ಸೂರಿ: ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕ, ಭಾರತ್ ಹೋಟೆಲ್ಸ್ ಲಿಮಿಟೆಡ್.
ಪಟು ಕೇಸ್ವಾನಿ: ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಲೆಮನ್ ಟ್ರೀ ಹೋಟೆಲ್ಸ್ ಲಿಮಿಟೆಡ್.
ಅನಿಲ್ ಚಡ್ಡಾ: ವಿಭಾಗೀಯ ಮುಖ್ಯ ಕಾರ್ಯನಿರ್ವಾಹಕ-ಹೋಟೆಲ್ಸ್ ಐಟಿಸಿ ಲಿಮಿಟೆಡ್.
ಅಜಯ್ ಕೆ. ಬಕಯಾ: ವ್ಯವಸ್ಥಾಪಕ ನಿರ್ದೇಶಕ, ಸರೋವರ್ ಹೋಟೆಲ್ಸ್ ಪ್ರೈ. ಲಿಮಿಟೆಡ್.
ಆರ್. ಶಂಕರ್: ಅಧ್ಯಕ್ಷರು – ಕಾರ್ಪೊರೇಟ್ ಮತ್ತು ಕಾನೂನು ವ್ಯವಹಾರ, ಇಐಎಚ್ ಲಿಮಿಟೆಡ್.
ರೂಪಕ್ ಗುಪ್ತಾ: ವ್ಯವಸ್ಥಾಪಕ ನಿರ್ದೇಶಕ, ಯು.ಪಿ. ಹೋಟೆಲ್ಸ್ ಲಿ.
ಶಶಾಂಕ್ ಭಗತ್: ವ್ಯವಸ್ಥಾಪಕ ಪಾಲುದಾರ, ರಾಡಿಸನ್ ಬ್ಲೂ ಮರೀನಾ ಹೋಟೆಲ್.
ಸೋನಾಲಿ ಚೌಹಾನ್: ಜನರಲ್ ಮ್ಯಾನೇಜರ್ (ಆಯ್ಕೆಗಳು) – ಐಎಚ್‌ಸಿಎಲ್ ಆಯ್ಕೆಗಳು.
ಎಂ.ಪಿ. ಬೆಜ್ಬರುವಾ: ಸೆಕ್ರೆಟರಿ ಜನರಲ್, ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ.
1996ರಲ್ಲಿ ಎಚ್‌ಐಎ ಸ್ಥಾಪನೆ
ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ 1996ರಲ್ಲಿ ಸ್ಥಾಪನೆಗೊಂಡಿದ್ದು, ಸಂಯೋಜಿತ ಆತಿಥ್ಯ ಉದ್ಯಮದ ವೇದಿಕೆ ಆಗಿ ಇದು ವಿಕಸನಗೊಂಡಿದೆ. ಪ್ರಮುಖ ಹೋಟೆಲ್ ಸಮೂಹಗಳು ಇದರ ಸದಸ್ಯರಾಗಿವೆ. ಚಿಕ್ಕ ಹೋಟೆಲ್‌ಗಳಿಂದ ಹಿಡಿದು ಬೃಹತ್ ಹೋಟೆಲ್‌ಗಳವರೆಗೂ ಇದರ ಸದಸ್ಯರಿದ್ದಾರೆ.