ನವದೆಹಲಿ: ಪೊಟ್ಟಣೀಕರಿಸಿದ ಉತ್ಪನ್ನಗಳ ಲೇಬಲ್ ಹಾಗೂ ಜಾಹೀರಾತುಗಳಲ್ಲಿನ ‘100% ಫ್ರೂಟ್ ಜ್ಯೂಸ್’ ಎಂಬುದನ್ನು ಕೂಡಲೇ ತೆಗೆಯಬೇಕು ಎಂದು ಆಹಾರ ಸಂಬಂಧಿತ ಉದ್ಯಮದಾರರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ಆದೇಶ ಹೊರಡಿಸಿದೆ.
ಪುನರ್ ರಚಿಸಿದ ಹಣ್ಣಿನ ರಸಗಳ ಪೊಟ್ಟಣಗಳ ಮೇಲಿನ ಲೇಬಲ್-ಜಾಹೀರಾತುಗಳಲ್ಲಿ ಅದನ್ನು ‘ಶೇ. 100 ಹಣ್ಣಿನ ರಸ’ ಎಂದು ಹೇಳಿ ಆಹಾರ ಸಂಬಂಧಿತ ಉದ್ಯಮದಾರರು ಮಾರುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅಂಥ ಹಣ್ಣಿನ ರಸಗಳ ಲೇಬಲ್-ಜಾಹೀರಾತಿನಲ್ಲಿ ‘ಶೇ. 100 ಹಣ್ಣಿನ ರಸ’ ಅಂತ ಇದ್ದಲ್ಲಿ ಅದನ್ನು ತಕ್ಷಣ ತೆಗೆಸಬೇಕು. ಅಲ್ಲದೆ ಅಸ್ತಿತ್ವದಲ್ಲಿರುವ ಅಂಥ ಹಣ್ಣಿನ ರಸಗಳನ್ನು 2024ರ ಸೆ.1ರ ಒಳಗೆ ತೆರವುಗೊಳಿಸುವಂತೆಯೂ ಎಫ್ಎಸ್ಎಸ್ಎಐ ಸೂಚಿಸಿದೆ.



