ಒಳಗೇನಿದೆ!?

ಕೇಂದ್ರ ಬಜೆಟ್‌: ಹೋಟೆಲೋದ್ಯಮಿಗಳ ಬೇಡಿಕೆ ಸಂಬಂಧ ವಿತ್ತ ಸಚಿವರಿಗೆ ಮನವಿ ಪತ್ರ ಸಲ್ಲಿಕೆ

ಬೆಂಗಳೂರು: ಕೇಂದ್ರ ಸರ್ಕಾರ ಸದ್ಯದಲ್ಲೇ ಮಂಡಿಸಲಿರುವ ಆಯವ್ಯಯ ಪತ್ರದಲ್ಲಿ ಈಡೇರಬೇಕಾದ ಹೋಟೆಲೋದ್ಯಮಿಗಳ ಪ್ರಮುಖ ಬೇಡಿಕೆಗಳ ಸಂಬಂಧ ಬಜೆಟ್‌ ಪೂರ್ವಭಾವಿಯಾಗಿ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ (ಬಿಬಿಎಚ್‌ಎ) ಜೂನ್‌ 11ರಂದು ಮನವಿ ಪತ್ರ ಸಲ್ಲಿಸುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಗಮನಕ್ಕೆ ತಂದಿದೆ.

ಹೋಟೆಲ್ ಉದ್ಯಮದ ಪರವಾಗಿ ಬಜೆಟ್‌ಪೂರ್ವ ಪ್ರಾತಿನಿಧ್ಯ ಸಲ್ಲಿಸಿರುವ ಬಿಬಿಎಚ್‌ಎ, ಹೋಟೆಲ್‌ ಉದ್ಯಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿರುವ ಕೆಲವು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದು, ತಕ್ಷಣದ ಕ್ರಮ ಅನಿವಾರ್ಯ ಎಂದು ಒತ್ತಿ ಹೇಳಿದೆ.

ಬಿಬಿಎಚ್‌ಎ ಪ್ರಸ್ತಾಪಿಸಿರುವ ಬೇಡಿಕೆಗಳು
  • ಠೇವಣಿ ವಿಳಂಬವಾದರೆ ಇಪಿಎಫ್‌-ಇಎಸ್‌ಐಸಿ ಕೊಡುಗೆ ನಿರಾಕರಿಸುವ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 36(1) (ವಿಎ)ಗೆ ತಿದ್ದುಪಡಿ.
  • ಹೋಟೆಲ್‌ ಕ್ಷೇತ್ರದ ಎಲ್ಲ ಪರವಾನಗಿಗಳನ್ನು ಏಕಗವಾಕ್ಷಿ ಮೂಲಕ ವಿಲೇವಾರಿ ಮಾಡುವುದು.
  • ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ಪರವಾನಗಿಯನ್ನು ಒಮ್ಮೆ ಶಾಶ್ವತವಾಗಿ ನೀಡುವಂಥ ವ್ಯವಸ್ಥೆ ತರುವುದು.
  • ಸಾರ್ವಜನಿಕ ಕಾರ್ಯಕ್ಷಮತಾ ಪರವಾನಗಿ (Public Performance License) ಎಂಬುದು ಅವೈಜ್ಞಾನಿಕವಾಗಿದ್ದು, ಅಪ್ರಸ್ತುತವೂ ಆಗಿದೆ. ಈ ಪರವಾನಗಿ ರದ್ದುಗೊಳಿಸುವುದು.
  • ಕಾರ್ಮಿಕರ ಭವಿಷ್ಯ ನಿಧಿ(ಇಪಿಎಫ್‌)ಯಲ್ಲಿನ ಆಡಳಿತ ಶುಲ್ಕವನ್ನು ಶೇ. 0.5ರಿಂದ ಶೇ. 0.1ಕ್ಕೆ ಇಳಿಸುವುದು.
  • ಗವರ್ನ್‌ಮೆಂಟ್‌ ಇ-ಮಾರ್ಕೆಟ್‌ಪ್ಲೇಸ್‌ (GeM) ಪೋರ್ಟಲ್‌ನಲ್ಲಿನ ಸೇವಾಶುಲ್ಕವನ್ನು ಶೇ. 0.5ರಿಂದ ಶೇ. 0.1ಕ್ಕೆ ಇಳಿಸುವುದು.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ: ಹೋಟೆಲೋದ್ಯಮದ ಸಮಸ್ಯೆಗಳ ಕುರಿತು ಉಪ ಮುಖ್ಯಮಂತ್ರಿ ಅವರಿಗೆ ಬಿಬಿಎಚ್‌ಎ ಮನವಿ

ಇದೂ ಓದಿ: ಅಬಕಾರಿ ಸಚಿವರಿಗೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಮನವಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ