ಒಳಗೇನಿದೆ!?

ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ; ಕಿರು ಪರಿಚಯ

Bruhath Bangalore Hotels Association (BBHA)
Bruhath Bangalore Hotels Association (BBHA)

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಎಲ್ಲ ಹೋಟೆಲುಗಳಿಗೆ ಒಂದು ಸಂಘಟಿತ ಶಕ್ತಿ ಒದಗಿಸುವ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆರಂಭವಾಗಿರುವಂಥದ್ದೇ ‘ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ’ (ಬಿಬಿಎಚ್‌ಎ).

ಬೃಹತ್ ಬೆಂಗಳೂರು ಹೊಟೇಲುಗಳ ಸಂಘ(ರಿ.) ​​88 ವರ್ಷಗಳ ಹಳೆಯ ಸಂಸ್ಥೆಯಾಗಿದ್ದು, 1936ರಲ್ಲಿ ಇದರ ಸ್ಥಾಪನೆ ಆಯಿತು. ಬಿ.ಟಿ.ರಾಮಯ್ಯ ಅವರು ಇದರ  ಸ್ಥಾಪಕ ಅಧ್ಯಕ್ಷರು. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ ಹೋಟೆಲ್‌ ಉದ್ಯಮದ ದೊಡ್ಡ ಧ್ವನಿ ಆಗಿರುವ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘವು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹಲವು ಹೋಟೆಲುಗಳ ಸದಸ್ಯತ್ವ ಹೊಂದಿದೆ.

ಬೆಂಗಳೂರಿನ ಹೋಟೆಲುಗಳು, ಆತಿಥೇಯ ಕ್ಷೇತ್ರದ ವಿವಿಧ ಸಂಸ್ಥೆಗಳನ್ನು ಒಳಗೊಂಡಿರುವ ಈ ಸಂಘದಲ್ಲಿ 5 ಸಾವಿರಕ್ಕೂ ಅಧಿಕ ಹೋಟೆಲುಗಳು ನೋಂದಣಿಗೊಂಡಿವೆ. ಹೋಟೆಲ್‌ ಉದ್ಯಮಿಗಳ ಸಂತಸ-ಸಂಕಟ-ಸಮಸ್ಯೆ-ಸಂಭ್ರಮ ಎಲ್ಲದರಲ್ಲಿ ಜೊತೆಯಾಗುತ್ತ ಬಂದಿರುವ ಸಂಘವು ಹೋಟೆಲ್‌ ಕ್ಷೇತ್ರಕ್ಕೆ ಹಲವಾರು ಮಹಾನ್‌ ಕಾರ್ಯಗಳನ್ನು ಕೈಗೊಂಡಿದೆ.

ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಪದಾಧಿಕಾರಿಗಳು

ಫೆಡರೇಷನ್‌ ಆಫ್‌ ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರೀಸ್‌ (ಎಫ್‌ಕೆಸಿಸಿಐ), ಫೆಡರೇಷನ್‌ ಆಫ್‌ ಹೋಟೆಲ್ಸ್‌ ಆ್ಯಂಡ್ ರೆಸ್ಟೋರೆಂಟ್ಸ್‌ ಆಫ್‌ ಇಂಡಿಯಾ (ಎಫ್‌ಎಚ್‌ಆರ್‌ಐ) ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ಸದಸ್ಯತ್ವ ಹೊಂದಿರುವ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘವು ಕರ್ನಾಟಕ ಹಾಗೂ ಭಾರತ ಪ್ರವಾಸೋದ್ಯಮ ಇಲಾಖೆಯೊಂದಿಗೂ ಸಂಪರ್ಕ ಹೊಂದಿಕೊಂಡು ಹೋಟೆಲ್‌ ಉದ್ಯಮಿಗಳಿಗೆ ಹಲವಾರು ಅನುಕೂಲಗಳನ್ನು ಮಾಡಿಕೊಡುತ್ತಲೇ ಬಂದಿದೆ.

ಪ್ರಸ್ತುತ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರಾಗಿ ಪಿ.ಸಿ.ರಾವ್‌ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದಲ್ಲೇ ನೂತನ ಆಡಳಿತ ಮಂಡಳಿಗೆ ಚುನಾವಣೆಯೂ ನಡೆಯಲಿದೆ. ಬೆಂಗಳೂರಿನ ವಿ.ವಿ.ಪುರಂ ಕೆ.ಆರ್‌.ರಸ್ತೆಯ ಶ್ರೇಷ್ಠಭೂಮಿ ಸಂಕೀರ್ಣದ ಮೂರನೇ ಮಹಡಿಯಲ್ಲಿ ಬಿಬಿಎಚ್‌ಎ ಕಚೇರಿ ಇದೆ. ನ್ಯಾಷನಲ್‌ ಕಾಲೇಜು ಮೆಟ್ರೋ ನಿಲ್ಧಾಣವು ಇದಕ್ಕೆ ಸಮೀಪದ್ದಾಗಿದೆ.

ಬಿಬಿಎಚ್‌ಎ ಪದಾಧಿಕಾರಿಗಳ ವಿವರ

  • ಗೌರವಾಧ್ಯಕ್ಷ: ಡಾ.ಆರ್‌.ರವಿಚಂದರ್‌
  • ಅಧ್ಯಕ್ಷ: ಪಿ.ಸಿ.ರಾವ್‌
  • ಉಪಾಧ್ಯಕ್ಷ: ಸುಬ್ರಹ್ಮಣ್ಯ ಹೊಳ್ಳ, ರಾಧಾಕೃಷ್ಣ ಅಡಿಗ
  • ಗೌರವ ಕಾರ್ಯದರ್ಶಿ: ವೀರೇಂದ್ರ ಕಾಮತ್‌
  • ಜಂಟಿ ಕಾರ್ಯದರ್ಶಿ: ಶಕೀರ್‌ ಹಖ್‌, ರಾಕೇಶ್‌ ಎ.ಎಲ್.
  • ಖಜಾಂಚಿ: ಸುಧಾಕರ್‌ ಶೆಟ್ಟಿ ಜಿ.

ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘಕ್ಕೆ ಸದಸ್ಯರಾಗಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ