ಒಳಗೇನಿದೆ!?

ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ: ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಯಾವಾಗ?

Bruhath Bangalore Hotels Association (BBHA)
Bruhath Bangalore Hotels Association (BBHA)

ಬೆಂಗಳೂರು: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ(ಬಿಬಿಎಚ್‌ಎ)ದ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಜುಲೈ 10ರಂದು ನಡೆಯಲಿದೆ. 2024-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಕುರಿತ ಚುನಾವಣೆಗೆ ಅರ್ಜಿ ಸಲ್ಲಿಸುವ ಅವಧಿ ಇಂದು (ಜುಲೈ 2) ಸಂಜೆ 4 ಗಂಟೆಗೆ ಮುಗಿಯಲಿದೆ.

ಸಂಬಂಧಿತ ಸುದ್ದಿ: ಪಿ.ಸಿ.ರಾವ್ @ 70: ಅರಮನೆ ಮೈದಾನದಲ್ಲಿ ಜನ್ಮದಿನದ ಅದ್ಧೂರಿ ಸಂಭ್ರಮ

ನಾಮಪತ್ರ ಸಲ್ಲಿಸಿರುವವರಲ್ಲಿ ಹಿಂದೆಗೆದುಕೊಳ್ಳಲು ಬಯಸುವವರಿಗೆ ಜುಲೈ 4ರ ಗುರುವಾರ ಸಂಜೆ 4ರ ವರೆಗೆ ಅವಕಾಶವಿದೆ. ಅಂದು ಸಂಜೆ ಐದು ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ.  ಅಂತಿಮಗೊಂಡ ನಾಮಪತ್ರಗಳನ್ನು ಜುಲೈ 4ರ ರಾತ್ರಿ 7 ಗಂಟೆಗೆ ಘೋಷಣೆ ಮಾಡಲಾಗುವುದು.

ಸಂಬಂಧಿತ ಸುದ್ದಿ: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ; ಕಿರು ಪರಿಚಯ

ಅದಾಗ್ಯೂ ಕಾರ್ಯಕಾರಿ ಸಮಿತಿಗೆ ಚುನಾವಣೆ ಅವಶ್ಯವಿದ್ದಲ್ಲಿ ಜುಲೈ 10ರಂದು ಸಂಘದ ಕಚೇರಿಯಲ್ಲಿ ಚುನಾವಣೆ ನಡೆಸಲಾಗುವುದು ಎಂದು ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಎನ್.‌ ಕಾಮತ್‌ ತಿಳಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ