ಒಳಗೇನಿದೆ!?

ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದಿಂದ ಪ್ರವಾಸೋದ್ಯಮ ಸಚಿವರಿಗೆ ಮಹತ್ವದ ಮನವಿ

P C Rao & H K Patil

ಬೆಂಗಳೂರು: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಪದಾಧಿಕಾರಿಗಳು ಜುಲೈ 2ರಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಅವರನ್ನು ಭೇಟಿಯಾಗಿ ಮಹತ್ವದ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹೋಟೆಲೋದ್ಯಮದ ಕೆಲವು ಅಗತ್ಯಗಳನ್ನು ಪ್ರವಾಸೋದ್ಯಮ ನೀತಿಯಲ್ಲಿ ಪರಿಗಣಿಸುವಂತೆ ಲಿಖಿತ ಮನವಿ ನೀಡುವ ಮೂಲಕ ಅವರು ಕೋರಿಕೊಂಡಿದ್ದಾರೆ.

ಸಂಬಂಧಿತ ಸುದ್ದಿ: ಪಿ.ಸಿ.ರಾವ್ @ 70: ಅರಮನೆ ಮೈದಾನದಲ್ಲಿ ಜನ್ಮದಿನದ ಅದ್ಧೂರಿ ಸಂಭ್ರಮ

ಕರ್ನಾಟಕ ಪ್ರವಾಸೋದ್ಯಮ ನೀತಿಯಲ್ಲಿ ಸಾರ್ವಜನಿಕ ಕಾರ್ಯನಿರ್ವಹಣಾ ಪರವಾನಗಿ (ಪಬ್ಲಿಕ್‌ ಪರ್‌ಫಾರ್ಮೆನ್ಸ್‌ ಲೈಸೆನ್ಸ್-ಪಿಪಿಎಲ್) ಅಗತ್ಯವಿರುವುದಿಲ್ಲ ಎಂದು ಮನವಿ ಮಾಡಿರುವ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ(ಬಿಬಿಎಚ್‌ಎ)ದ ಅಧ್ಯಕ್ಷ ಪಿ.ಸಿ.ರಾವ್‌, ಪಿಪಿಪಿ ರದ್ದುಗೊಳಿಸುವಂತೆ ಕೋರಿಕೊಂಡಿದ್ದಾರೆ.

ಸಂಬಂಧಿತ ಸುದ್ದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಅಲ್ಲದೆ ಬಾರ್‌ & ರೆಸ್ಟೋರೆಂಟ್‌ಗಳನ್ನು ತೆರೆದಿಡಲು ನೀಡಿರುವ ಪ್ರಸ್ತುತ ಅವಧಿಯನ್ನು ರಾತ್ರಿಯಲ್ಲಿ ಇನ್ನೂ ಒಂದು ಗಂಟೆ ವಿಸ್ತರಣೆ ಮಾಡಬೇಕು ಎಂಬುದಾಗಿಯೂ ಅವರು ಮನವಿ ಮಾಡಿಕೊಂಡಿದ್ದಾರೆ.

ಸಂಬಂಧಿತ ಸುದ್ದಿ: ಹೋಟೆಲಿಗರ ಪ್ರಮುಖ ಬೇಡಿಕೆ ಸಂಬಂಧ ವಿತ್ತ ಸಚಿವರ ಪ್ರತಿಕ್ರಿಯೆ ಇದು…

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ