ಒಳಗೇನಿದೆ!?

ಹೋಟೆಲೋದ್ಯಮದ ಸಮಸ್ಯೆಗಳ ಕುರಿತು ಉಪ ಮುಖ್ಯಮಂತ್ರಿ ಅವರಿಗೆ ಬಿಬಿಎಚ್‌ಎ ಮನವಿ

ಬೆಂಗಳೂರು: ಹೋಟೆಲೋದ್ಯಮದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹಾರ ಪಡೆಯುವ ಸಲುವಾಗಿ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ (ಬಿಬಿಎಚ್‌ಎ) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದೆ.

ಹೊಟೇಲೋದ್ಯಮ ಒಂದು ವಿಶೇಷ ಉದ್ಯಮವಾಗಿದ್ದು, ರೈತರು ಬೆಳೆಯುವ ಹಣ್ಣು, ತರಕಾರಿ, ಹಾಲು ಮುಂತಾದವುಗಳನ್ನು ಹೆಚ್ಚು ಖರೀದಿಸಿ ಪ್ರೋತ್ಸಾಹಿಸುವುದರ ಜೊತೆಗೆ ಜನಸಾಮಾನ್ಯರಿಗೆ ಉಚಿತ ಕುಡಿಯುವ ನೀರು ಹಾಗೂ ಶೌಚಗೃಹ ವ್ಯವಸ್ಥೆಯನ್ನೂ ಒದಗಿಸುತ್ತಿದ್ದೇವೆ.

ʼಉದ್ಯಮಿಯಾಗು, ಉದ್ಯೋಗ ಕೊಡುʼ ಎಂಬ ಸರ್ಕಾರದ ನುಡಿಯಂತೆ ನಮ್ಮ ಉದ್ಯಮದಿಂದ ಅತಿ ಹೆಚ್ಚು ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತಿವೆ. ಹೀಗಾಗಿ ನಮ್ಮ ಉದ್ಯಮದ ಬೆಳವಣಿಗೆಗೆ ಸರ್ಕಾರ ಸ್ಪಂದಿಸಬೇಕು ಎಂದು ಬಿಬಿಎಚ್‌ಎ ಮನವಿ ಮಾಡಿಕೊಂಡಿದೆ.

ಬಿಬಿಎಚ್‌ಎ ಬೇಡಿಕೆಗಳು
  • ವ್ಯವಹಾರ ಸರಾಗವಾಗಿಸುವ ನಿಟ್ಟಿನಲ್ಲಿ ಎಲ್ಲ ಪರವಾನಗಿಗಳಿಗೆ ಏಕಗವಾಕ್ಷಿ ವಿಲೇವಾರಿ ಅವಕಾಶ ಕಲ್ಪಿಸಬೇಕು.
  • ಟ್ರೇಡ್‌, ಎಫ್‌ಎಸ್‌ಎಸ್‌ಎಐ ಪರವಾನಗಿಗಳನ್ನು ಒಂದೇ ಬಾರಿ ತೆಗೆದುಕೊಳ್ಳುವಂತೆ (ಪರ್‌ಪೆಚ್ಯುವಲ್) ಮಾಡಬೇಕು. ದಿನದ 24 ಗಂಟೆಗಳ ಕಾಲವೂ ತೆರೆದಿಡಲು ಅಗತ್ಯ ಇರುವವರಿಗೆ ಅನುಮತಿ ಕೊಡಬೇಕು.
  • ಪಬ್ ಮತ್ತು ಬಾರ್ & ರೆಸ್ಟೋರೆಂಟ್‌ಗಳನ್ನು ತೆರೆದಿಡಲು ಪ್ರಸ್ತುತ ನೀಡಿರುವ ಅವಧಿಯನ್ನು ಒಂದು ಗಂಟೆಗಳ ಕಾಲ ವಿಸ್ತರಿಸಬೇಕು.
  • ಅಬಕಾರಿ ಇಲಾಖೆಯ ಬಹಳಷ್ಟು ಅವೈಜ್ಞಾನಿಕ ಹಾಗೂ ಹಿಂದಿನ ಕಾನೂನುಗಳನ್ನು ಸಬಲೀಕರಣ ಮಾಡಬೇಕು.
  • ನಮ್ಮ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಕನಿಷ್ಠ ಆರು ತಿಂಗಳಿಗೊಮ್ಮೆ ನಿಮ್ಮ ಸಮ್ಮುಖದಲ್ಲಿ ವಿಚಾರ ವಿನಿಮಯ ಮಾಡಬೇಕು.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ: ಕರಾವಳಿಯಲ್ಲಿ ಉತ್ತಮ ಪಂಚತಾರಾ ಹೋಟೆಲ್‌ಗಳಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಇದೂ ಓದಿ: ಹೋಟೆಲಿಗರ ಪ್ರಮುಖ ಬೇಡಿಕೆ ಸಂಬಂಧ ವಿತ್ತ ಸಚಿವರ ಪ್ರತಿಕ್ರಿಯೆ ಇದು…

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ