ಒಳಗೇನಿದೆ!?

ರಜತಗಿರಿ ಪ್ಯಾಲೇಸ್‌ನಲ್ಲಿ ಹಲಸಿನ ಖಾದ್ಯ ಮೇಳ; ದಿನವಿಡೀ ಹಲಸಿನ ಹಣ್ಣಿನ ವಿಶೇಷ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ತರಹೇವಾರಿ ಆಹಾರ ಮೇಳಗಳು ಆಯೋಜನೆ ಆಗುವ ಮೂಲಕ ಗಮನ ಸೆಳೆಯುತ್ತಿರುತ್ತವೆ. ಇದೀಗ ಬೆಂಗಳೂರಿನ ʼರಜತಗಿರಿ ಪ್ಯಾಲೇಸ್‌ʼ ಹೋಟೆಲ್‌ನಲ್ಲಿ ʼಹಲಸಿನ ಖಾದ್ಯ ಮೇಳʼ ಹಮ್ಮಿಕೊಂಡಿದ್ದಾರೆ.

ಬೆಂಗಳೂರಿನ ಕನಕಪುರ ರಸ್ತೆಯ 100 ಅಡಿ ತುರಹಳ್ಳಿ ಫಾರೆಸ್ಟ್‌ ರಸ್ತೆಯಲ್ಲಿನ ತಲಘಟ್ಟಪುರ ಮೆಟ್ರೋ ನಿಲ್ದಾಣ ಬಳಿ ಇರುವ ʼರಜತಗಿರಿ ಪ್ಯಾಲೇಸ್ʼನಲ್ಲಿ ಜುಲೈ 11ರಿಂದ 14ರ ವರೆಗೆ ಈ ʼಹಲಸಿನ ಖಾದ್ಯ ಮೇಳʼ ನಡೆಯಲಿದೆ.

ಹಲಸಿನ ಹಣ್ಣಿನ ಕೋಸಂಬರಿ, ಉಪ್ಪಿನ ಕಾಯಿ, ಉಪ್ಪು, ಹಲಸಿನ ಹಪ್ಪಳ, ಹಲಸಿನ ಕಾಯಿ ಪಲ್ಯ (ಕಡ್ಗಿ ತಾಳ್ಳ್)‌, ಹಲಸಿನ ಕಬಾಬ್‌, ದೀವಿ ಹಲಸಿನ ರವಾ ಫ್ರೈ, ಹಲಸಿನ ಹಣ್ಣಿನ ಮುದ್ದುಳಿ, ಹಲಸಿನ ಇಡ್ಲಿ, ಕೊಟ್ಟೆ ಬಿರಿಯಾನಿ, ಹಲಸಿನ ಹಣ್ಣಿನ ಚಂಪಾಕಲಿ, ಹಲಸಿನ ಹಣ್ಣಿನ ಹಾಲ್ಬಾಯಿ, ಹಲಸಿನ ಹಣ್ಣಿನ ಪಾಯಸ, ಅನ್ನ, ದೀವಿ ಹಲಸಿನ ಸಾರು, ಉಡುಪಿ ರಸಂ, ಮೊಸರು, ಹಲಸಿನ ಹಣ್ಣಿನ ಐಸ್‌ ಕ್ರೀಮ್‌ ಒಳಗೊಂಡ ಬಾಳೆ ಎಲೆಯ ಊಟ ಈ ನಾಲ್ಕು ದಿನಗಳಲ್ಲಿ ಮಧ್ಯಾಹ್ನ 12ರಿಂದ 3.30ರ ವರೆಗೆ ಲಭ್ಯ ಇರುತ್ತದೆ. ಬಾಳೆ ಎಲೆಯ ಊಟದ ಫ್ಯಾಮಿಲಿ ಪ್ಯಾಕ್‌ ಪಾರ್ಸೆಲ್‌ಗೂ ಸಿಗುತ್ತದೆ.

ಇಷ್ಟೇ ಅಲ್ಲದೆ ಹಲಸಿನ ಹಣ್ಣಿನ ಇಡ್ಲಿ, ದೋಸೆ, ಮುಳಕ, ಚಿಲ್ಲಿ, 65, ಕಬಾಬ್‌, ಹಾಲ್ಬಾಯಿ, ಹೋಳಿಗೆ, ಪಾಯಸ, ಚಂಪಾಕಲಿ ಮುಂತಾದ ಹಲಸಿನ ಹಣ್ಣಿನ ಖಾದ್ಯಗಳು ದಿನವಿಡೀ ಸಿಗಲಿವೆ.

ಬುಕಿಂಗ್‌ಗಾಗಿ ಸಂಪರ್ಕಿಸಬೇಕಾದ ಸಂಖ್ಯೆ
99000 04703

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ: ಅರಮನೆ ಮೈದಾನದಲ್ಲೇ ಕುಂದಾಪ್ರ ಕನ್ನಡ ಹಬ್ಬ; ಆಯೋಜನೆ ಸಾಧ್ಯವಾಗಿದ್ದು ಹೇಗೆ?

ಇದೂ ಓದಿ: ಉದ್ಯಮಿ ಪ್ರಕಾಶ್‌ ಶೆಟ್ಟಿ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ