ಒಳಗೇನಿದೆ!?

ಹಲಸಿನ ಹಣ್ಣಿನ ತಿನಿಸುಗಳಿಂದಲೇ ಆರಂಭ ʼಬ್ರಾಹ್ಮಿನ್ಸ್‌ ಪರಂಪರೆ ಭೋಜನʼ

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ʼಬ್ರಾಹ್ಮಿನ್ಸ್‌ ಪರಂಪರೆ ಭೋಜನʼ ಎಂಬ ನೂತನ ಹೋಟೆಲ್‌ ಜುಲೈ 13ರಂದು ಸಂಜೆ 6.30ಕ್ಕೆ ಉದ್ಘಾಟನೆ ಆಗಲಿದೆ. ಉದ್ಘಾಟನೆ ಪ್ರಯುಕ್ತ ಹಲಸಿನ ಹಣ್ಣಿನ ತಿನಿಸುಗಳ ಮೇಳವನ್ನೂ ಹಮ್ಮಿಕೊಳ್ಳಲಾಗಿದೆ.

ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ದಿವ್ಯ ಹಸ್ತದಿಂದ ಉದ್ಘಾಟನೆ ಆಗಲಿರುವ ಈ ಸಮಾರಂಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್‌, ರಾಜರಾಜೇಶ್ವರಿನಗರ ಶಾಸಕ ಮುನಿರತ್ನ, ಚಿತ್ರನಟ ಹಾಗೂ ಮಾಜಿ ಸಂಸದರೂ ಆಗಿರುವ ಶಶಿಕುಮಾರ್‌ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗಿ ಆಗಲಿದ್ದಾರೆ.

ಉದ್ಘಾಟನೆ ಸಂಭ್ರಮದ ಹಿನ್ನೆಲೆಯಲ್ಲಿ ಜುಲೈ 13 ಮತ್ತು 14ರಂದು ಸಂಜೆ 5.30ರಿಂದ 9.30ರ ತನಕ ಹಲಸಿನ ಹಣ್ಣಿನ ತಿನಿಸುಗಳ ಮೇಳ ಆಯೋಜಿಸಲಾಗಿದೆ. ಹಲಸಿನ ಹಣ್ಣಿನ ಕಡಬು, ಪಾಯಸ, ಒತ್ತು ಶಾವಿಗೆ, ಹಲ್ವಾ, ದೋಸೆ, ಕೇಸರಿಬಾತ್‌, ಮುಳಕ ಮುಂತಾದವುಗಳು ಈ ಸಮಯದಲ್ಲಿ ಲಭ್ಯ ಇರಲಿವೆ.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ: ರಜತಗಿರಿ ಪ್ಯಾಲೇಸ್‌ನಲ್ಲಿ ಹಲಸಿನ ಖಾದ್ಯ ಮೇಳ; ದಿನವಿಡೀ ಹಲಸಿನ ಹಣ್ಣಿನ ವಿಶೇಷ

ಇದೂ ಓದಿ: ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ