ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೋಟೆಲಿಗರ ಸಂಘಟಿತ ಶಕ್ತಿ ಆಗಿರುವ ʼಬೃಹತ್ ಬೆಂಗಳೂರು ಹೋಟೆಲುಗಳ ಸಂಘʼ (ಬಿಬಿಎಚ್‌ಎ) ಬದಲಾಗಿದೆ. ಅರ್ಥಾತ್, ಸಂಘದ ಹೆಸರಲ್ಲಿ ಬದಲಾವಣೆ ಆಗಿದೆ.
ಹೆಸರನ್ನು ಸ್ವಲ್ಪ ಚಿಕ್ಕದಾಗಿಸುವ ಜೊತೆಗೆ ಸಂಘದ ವ್ಯಾಪ್ತಿ ವಿಶಾಲವಾಗಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳು ಈ ಬದಲಾವಣೆ ಮಾಡಿದ್ದಾರೆ. ಹೀಗಾಗಿ ಇದುವರೆಗೆ ʼಬೃಹತ್ ಬೆಂಗಳೂರು ಹೋಟೆಲುಗಳ ಸಂಘʼ ಎಂಬುದಾಗಿದ್ದ ಇದು ಇನ್ನುಮುಂದೆ ʼಬೆಂಗಳೂರು ಹೋಟೆಲುಗಳ ಸಂಘʼ ಆಗಿರಲಿದೆ.
ಸಂಘದ ಸಭೆಯಲ್ಲಿ ಅಧಿಕೃತವಾಗಿ ಇಂಥದ್ದೊಂದು ಬದಲಾವಣೆ ಮಾಡಲಾಗಿದ್ದು, ಸಂಘದ ಬೈಲಾದಲ್ಲೂ ಬದಲಾವಣೆಯನ್ನು ಅಳವಡಿಸಲಾಗಿದೆ. ಹೀಗಾಗಿ ಈ ಸಂಘ ಇನ್ನು ʼಬೆಂಗಳೂರು ಹೋಟೆಲುಗಳ ಸಂಘ (ರಿ.)ʼ ಆಗಿರಲಿದೆ.
ಈ ಸಂಘಕ್ಕೆ ಇತ್ತೀಚೆಗಷ್ಟೇ ನೂತನ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಆಗಿದ್ದು, ನಿಕಟಪೂರ್ವ ಅಧ್ಯಕ್ಷ ಪಿ.ಸಿ.ರಾವ್ ಅವರು ಗೌರವಾಧ್ಯಕ್ಷರಾಗಿ ಆಯ್ಕೆ ಆಗಿದ್ದು, ಎಚ್.ಎಸ್. ಸುಬ್ರಹ್ಯಣ್ಯ ಹೊಳ್ಳ ಅವರು ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಬೆಂಗಳೂರು ಬೃಹತ್ ಬೆಂಗಳೂರು ಆಗಿದೆ, ಮುಂದೆ ಗ್ರೇಟರ್ ಬೆಂಗಳೂರು ಆಗುತ್ತದೆ. ಹೀಗಾಗಿ ಸಂಘದ ಹೆಸರಿನಲ್ಲಿ ಸ್ಥಿರತೆ ಇರಲಿ ಎಂದು ಈ ಬದಲಾವಣೆ ಮಾಡಿದ್ದೇವೆ.
| ಪಿ.ಸಿ.ರಾವ್, ಗೌರವಾಧ್ಯಕ್ಷ, ಬೆಂಗಳೂರು ಹೋಟೆಲುಗಳ ಸಂಘ (ರಿ.)
ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಇದೂ ಓದಿ: ಹೋಟೆಲ್ ಓನರ್ ಪಾದಕ್ಕೆರಗಿ ಆಶೀರ್ವಾದ ಪಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್
ಇದೂ ಓದಿ: ಹೋಟೆಲ್ ಉದ್ಯಮಕ್ಕಿದೆ ನಮ್ಮ ಸಂಪೂರ್ಣ ಬೆಂಬಲ: ಕನ್ನಡಪ್ರಭ- ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ