ಒಳಗೇನಿದೆ!?

ಅರಮನೆ ಮೈದಾನದಲ್ಲಿ ನಡೆಯುವ ಕುಂದಾಪ್ರ ಕನ್ನಡ ಹಬ್ಬದಲ್ಲಿದೆ ಹೋಟೆಲಿಗರಿಗೆ ಈ ಸುವರ್ಣಾವಕಾಶ!

ಬೆಂಗಳೂರು: ʼಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)ʼ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಗಸ್ಟ್‌ 17-18ರಂದು ಆಯೋಜಿಸಿರುವ ʼಕುಂದಾಪ್ರ ಕನ್ನಡ ಹಬ್ಬʼದಲ್ಲಿ ಹೋಟೆಲಿಗರಿಗೆ ವಿಶೇಷವಾದ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಐದನೇ ಕುಂದಾಪ್ರ ಕನ್ನಡ ಹಬ್ಬ ಈ ಸಲ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಯಲಿದ್ದು, ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ.

ಈ ಕುಂದಾಪ್ರ ಕನ್ನಡ ಹಬ್ಬದಲ್ಲಿ ಹಲವು ವಿಶೇಷವಾದ ಕಾರ್ಯಕ್ರಮಗಳ ಜೊತೆಗೆ ʼಹೊಟ್ಟಿ ಕಂಡದ್ದ್‌ ನಾವೇ ಸೈʼ ಎನ್ನುವ ʼಕರಾವಳಿ ಖಾದ್ಯ ಮೇಳʼವೂ ಇರಲಿದೆ. ಇದಕ್ಕಾಗಿ ಕುಂದಾಪ್ರ ಕನ್ನಡ ಪ್ರತಿಷ್ಠಾನವು ಆಸಕ್ತ ಹೋಟೆಲ್‌ ಮಾಲೀಕರಿಗೆ ಆಹಾರಗಳ ಸ್ಟಾಲ್‌/ಹೋಟೆಲ್‌ ಇಡಲು ಅವಕಾಶ ಕಲ್ಪಿಸಿಕೊಡುತ್ತಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
  • ನಿತಿನ್‌ ಕಾಂಚನ್:‌ 9060202000
  • ಅಜಿತ್‌ ಶೆಟ್ಟಿ: 9916232028

ಇದೂ ಓದಿ: ಅರಮನೆ ಮೈದಾನದಲ್ಲೇ ಕುಂದಾಪ್ರ ಕನ್ನಡ ಹಬ್ಬ; ಆಯೋಜನೆ ಸಾಧ್ಯವಾಗಿದ್ದು ಹೇಗೆ?

ಇದೂ ಓದಿ: ಹೋಟೆಲ್‌ ಓನರ್‌ ಪಾದಕ್ಕೆರಗಿ ಆಶೀರ್ವಾದ ಪಡೆದ ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್

ಇದೂ ಓದಿ:ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ