ಒಳಗೇನಿದೆ!?

ವಿತ್ತ ಸಚಿವೆ ಜೊತೆ ಹೋಟೆಲೋದ್ಯಮಿಗಳ ಸಂವಾದ; ಗಮನ ಸೆಳೆದ ಸಂಗತಿ ಇದು…

ಬೆಂಗಳೂರು: ಇತ್ತೀಚೆಗಷ್ಟೇ ಏಳನೇ ಬಾರಿಗೆ ಬಜೆಟ್‌ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ರವಿವಾರ ರಾಜಧಾನಿ ಬೆಂಗಳೂರಿನಲ್ಲಿ ಹೋಟೆಲೋದ್ಯಮಿಗಳು ಸಂವಾದ ನಡೆಸಿದರು.

ಬಿಜೆಪಿ ಕರ್ನಾಟಕ ಆರ್ಥಿಕ ಪ್ರಕೋಷ್ಠವು ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಈ ಸಂವಾದದಲ್ಲಿ ರಾಜ್ಯದ ಕೈಗಾರಿಕೆ, ಸಿನಿಮಾ ಸೇರಿ ವಿವಿಧ ಉದ್ಯಮ ಕ್ಷೇತ್ರಗಳ ಗಣ್ಯರು ಮಾತ್ರವಲ್ಲದೆ ಹೋಟೆಲ್‌ ಉದ್ಯಮಿಗಳೂ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹಣಕಾಸು ಸಚಿವರಿಗೆ ಅಹವಾಲು ಸಲ್ಲಿಸಿದರು.

ಹೋಟೆಲೋದ್ಯಮಿಗಳಾದ ಜಿ.ಕೆ. ಶೆಟ್ಟಿ, ಪಿ.ಸಿ. ರಾವ್, ರಾಧಾಕೃಷ್ಣ ಅಡಿಗ ಮುಂತಾದವರು ಸಮಾಲೋಚಿಸಿ, ಈ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಅಹವಾಲು ಸಲ್ಲಿಸಿದರು.

ವಿವಿಧ ಕ್ಷೇತ್ರಗಳ ಗಣ್ಯರ ಅಹವಾಲು ಆಲಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.

ಅದರಲ್ಲೂ ರಾಧಾಕೃಷ್ಣ ಅಡಿಗ ಅವರು ಹತ್ತು ರೂಪಾಯಿ ನಾಣ್ಯಗಳಿಗೆ ಸಂಬಂಧಿತ ಸಮಸ್ಯೆಯಿಂದ ಹೋಟೆಲ್‌ ಉದ್ಯಮದವರು ಎದುರಿಸುತ್ತಿರುವ ತೊಂದರೆ ಕುರಿತು ನಿರ್ಮಲಾ ಸೀತಾರಾಮನ್‌ ಅವರ ಗಮನ ಸೆಳೆದರು.‌

ವಿತ್ತ ಸಚಿವೆ ಜೊತೆಗಿನ ಸಂವಾದಕ್ಕೂ ಮುನ್ನ ಸಮಾಲೋಚನೆ ನಡೆಸಿದ ಹೋಟೆಲ್‌ ಉದ್ಯಮಿಗಳು.

ʼಬೆಂಗಳೂರು ಹೋಟೆಲುಗಳ ಸಂಘದ ಪರವಾಗಿ ಮಾತನಾಡುತ್ತಿದ್ದೇನೆ. ಕಳೆದ ವರ್ಷವೂ ನಾನು ಇದೇ ವಿಚಾರವಾಗಿ ನಿಮ್ಮ ಗಮನ ಸೆಳೆದಿದ್ದೆ. ಮೊದಲನೆಯದಾಗಿ ಬ್ಯಾಂಕ್‌ ನಮಗೆ ಚಿಲ್ಲರೆ ನೀಡುತ್ತಿಲ್ಲ. ಎರಡನೆಯದಾಗಿ ಹತ್ತು ರೂಪಾಯಿ ನಾಣ್ಯಗಳನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಯಾರೂ ಸ್ವೀಕರಿಸುತ್ತಿಲ್ಲ. ಅದಾಗ್ಯೂ ಬ್ಯಾಂಕ್‌ನವರು ಹತ್ತು ರೂಪಾಯಿ ನಾಣ್ಯಗಳನ್ನು ಹೋಟೆಲಿಗರಲ್ಲಿ ಡಂಪ್‌ ಮಾಡುತ್ತಿದ್ದಾರೆ. ಉದಾಹರಣೆಗೆ, ನಮಗೆ 1 ಲಕ್ಷ ರೂಪಾಯಿ ಚಿಲ್ಲರೆ ಬೇಕಿದ್ದರೆ, 40 ಸಾವಿರ ರೂಪಾಯಿಯಷ್ಟು ಹತ್ತು ರೂ. ನಾಣ್ಯಗಳನ್ನು ಕಡ್ಡಾಯವಾಗಿ ನೀಡುತ್ತಾರೆ. ಹೀಗಾಗಿ ನಮ್ಮಲ್ಲಿ ಯಥೇಚ್ಛವಾಗಿ 10 ರೂ. ನಾಣ್ಯಗಳಿದ್ದು, ಅದನ್ನು ಜನರು ಸ್ವೀಕರಿಸುತ್ತಿಲ್ಲ. ಪರಿಣಾಮವಾಗಿ ದಿನವೂ ತೊಂದರೆ ಅನುಭವಿಸುವಂತಾಗಿದೆ ಎಂದು ರಾಧಾಕೃಷ್ಣ ಅಡಿಗ ತಿಳಿಸಿದರು.

ಹಣಕಾಸು ಸಚಿವೆ ಜೊತೆಗಿನ ಸಂವಾದದಲ್ಲಿ ಭಾಗಿಯಾದ ವಿವಿಧ ಉದ್ಯಮಗಳ ಗಣ್ಯರು.

ಹಣಕಾಸು ಸಚಿವೆ ಜೊತೆಗಿನ ಸಂವಾದದಲ್ಲಿ ಭಾಗಿಯಾದ ವಿವಿಧ ಉದ್ಯಮಗಳ ಗಣ್ಯರು.

ಇದೂ ಓದಿ: ಬೆಳಗಾವಿಗೆ ಸುಸ್ವಾಗತ: ಐಟಿಸಿ ಹೋಟೆಲ್ಸ್‌ ಸಹಭಾಗಿತ್ವದಲ್ಲಿ ಐಷಾರಾಮಿ ʼವೆಲ್‌ಕಮ್‌ ಹೋಟೆಲ್‌ʼ

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಇದೂ ಓದಿ: ಅರಮನೆ ಮೈದಾನದಲ್ಲಿ ನಡೆಯುವ ಕುಂದಾಪ್ರ ಕನ್ನಡ ಹಬ್ಬದಲ್ಲಿದೆ ಹೋಟೆಲಿಗರಿಗೆ ಈ ಸುವರ್ಣಾವಕಾಶ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ