ಒಳಗೇನಿದೆ!?

‌ಇಂಡಿಯಾ ಟ್ರಾವೆಲ್‌ ಅವಾರ್ಡ್ಸ್‌ನಲ್ಲಿ ಪ್ರಶಸ್ತಿಗೆ ಪಾತ್ರವಾದ ಎಸ್‌ಐಎಚ್‌ಆರ್‌ಎ

ಮುಂಬೈ: ದಕ್ಷಿಣ ಭಾರತ ಹೋಟೆಲುಗಳು ಮತ್ತು ರೆಸ್ಟೋರೆಂಟುಗಳ ಸಂಘ (ಸೌತ್‌ ಇಂಡಿಯಾ ಹೋಟೆಲ್ಸ್‌ & ರೆಸ್ಟೋರೆಂಟ್ಸ್‌ ಅಸೋಸಿಯೇಷನ್‌ –ಎಸ್‌ಐಎಚ್‌ಆರ್‌ಎ) ‘ಇಂಡಿಯಾ ಟ್ರಾವೆಲ್‌ ಅವಾರ್ಡ್ಸ್‌’ಗೆ ಪಾತ್ರವಾಗಿದೆ.

ಮುಂಬೈನ ಸೋಫಿಟೆಲ್‌ ಬಿಕೆಸಿಯಲ್ಲಿ ಬುಧವಾರ ನಡೆದ ವರ್ಣರಂಜಿತ ‘ಇಂಡಿಯಾ ಟ್ರಾವೆಲ್‌ ಅವಾರ್ಡ್ಸ್‌’ ಸಮಾರಂಭದಲ್ಲಿ ಎಸ್‌ಐಎಚ್‌ಆರ್‌ಎ ʼಅತಿ ಭರವಸೆಯ ಪ್ರಾದೇಶಿಕ ಸಂಘʼ (ಮೋಸ್ಟ್‌ ಪ್ರಾಮಿಸಿಂಗ್‌ ರೀಜನಲ್‌ ಅಸೋಸಿಯೇಷನ್‌) ಪ್ರಶಸ್ತಿಗೆ ಭಾಜನವಾಗಿದೆ.

ಮುಂಬೈನ ಬ್ರಿಟಿಷ್‌ ಹೈ ಕಮಿಷನ್‌ನ ಫೈನಾನ್ಸಿಯಲ್‌ ಸರ್ವಿಸಸ್‌ ಮುಖ್ಯಸ್ಥ ಡೇವಿಡ್‌ ಮ್ಯಾಥ್ಯೂಸ್‌ ಅವರು ವೆಸ್ಟರ್ನ್‌ ಪಾಶ್ಚಾತ್ಯ ಭಾಗದ ಪ್ರಾದೇಶಿಕ ನಿರ್ದೇಶಕರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ ಎಂದು ಎಸ್‌ಐಎಚ್‌ಆರ್‌ಎ ಅಧ್ಯಕ್ಷ ಕೆ. ಶ್ಯಾಮರಾಜು ತಿಳಿಸಿದ್ದಾರೆ.‌

ಈ ಮನ್ನಣೆಯು ಸಂಘದ ಬಗ್ಗೆ ನಿಮ್ಮ ಅಚಲ ಬೆಂಬಲ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಯನ್ನು ನಮ್ಮ ಎಲ್ಲ ಸದಸ್ಯರಿಗೆ ಅರ್ಪಿಸುತ್ತೇವೆ. ನಮ್ಮ ಪ್ರಯಾಣದ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು ಎಂದೂ ಶ್ಯಾಮರಾಜು ಅವರು ಸಂತಸ ಹಂಚಿಕೊಂಡಿದ್ದಾರೆ.

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಕೆಎಸ್‌ಎಚ್‌ಎ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರಿಗೆ ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ಸನ್ಮಾನ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ