ಬೆಂಗಳೂರು: ದೇಶಾದ್ಯಂತ ನಡೆದ 78ನೇ ಸ್ವಾತಂತ್ರ್ಯೋತ್ಸವವನ್ನು ಹೋಟೆಲುಗಳ ಸಂಘಗಳವರೂ ಆಚರಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ಕೆಎಸ್‌ಎಚ್‌ಎ) ಮತ್ತು ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್‌ಎ) ಗುರುವಾರ ಸ್ವಾತಂತ್ರ್ಯ ದಿನ ಆಚರಿಸಿವೆ.
ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಕಚೇರಿಯಲ್ಲಿ ಬೆಳಗ್ಗೆ 8.30ಕ್ಕೆ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು.
ಧ್ವಜಾರೋಹಣದಲ್ಲಿ ಭಾಗಿಯಾದ ಅವರು ದೇಶವನ್ನು ಉಲ್ಲೇಖಿಸಿ ಮಾತನಾಡುತ್ತ, ಹೋಟೆಲಿಗರೂ ರಾಜಕೀಯಕ್ಕೆ ಬರಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಈ ಸಮಾರಂಭ ನೆರವೇರಿತು.
ಕೆಎಸ್‌ಎಚ್‌ಎ ಗೌರವಾಧ್ಯಕ್ಷ ಬಿ. ಚಂದ್ರಶೇಖರ ಹೆಬ್ಬಾರ್, ಅಧ್ಯಕ್ಷ ಜಿ.ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಎಂ.ವಿ. ರಾಘವೇಂದ್ರ ರಾವ್, ಉಪಾಧ್ಯಕ್ಷರಾದ ಮಧುಕರ ಎಂ. ಶೆಟ್ಟಿ, ಎಚ್.ಎನ್. ಉಮೇಶ್, ಮಹೇಶ್ ಎಂ. ಶೆಟ್ಟಿ, ಸತ್ಯನಾಥ್ ಶೆಟ್ಟಿ, ರವಿ ಶಾಸ್ತ್ರಿ, ಜಿ.ಎ. ದೀಪಾನಂದ, ಜಂಟಿ ಕಾರ್ಯದರ್ಶಿ ಎಚ್.ಎಸ್. ಪ್ರಭಾಕರ್, ಖಜಾಂಚಿ ಗುರುರಾಜ ಉಪಾಧ್ಯ ಉಪಸ್ಥಿತರಿದ್ದರು. ಅಲ್ಲದೆ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್ ಕೂಡ ಹಾಜರಿದ್ದರು.
ಇನ್ನೊಂದೆಡೆ ಬೆಂಗಳೂರು ಹೋಟೆಲುಗಳ ಸಂಘದವರು ಕೂಡ ಕೆ.ಆರ್. ರಸ್ತೆಯ ಶ್ರೇಷ್ಠ ಭೂಮಿಯಲ್ಲಿರುವ ತಮ್ಮ ಕಚೇರಿಯಲ್ಲಿ ಧ್ವಜಾರೋಹಣ ನಡೆಸಿ ಸ್ವಾತಂತ್ರ್ಯೋತ್ಸವ ದಿನಾಚರಣೆ ನೆರವೇರಿಸಿದರು.
ಬಿಎಚ್‌ಎ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್, ಉಪಾಧ್ಯಕ್ಷರಾದ ಶಂಕರ್ ಕುಂದರ್, ಶಕೀರ್ ಹಕ್, ಖಜಾಂಚಿ ಸುಧಾಕರ್ ಶೆಟ್ಟಿ, ಜಂಟಿ ಕಾರ್ಯದರ್ಶಿ ಬಿ.ಎಂ. ಧನಂಜಯ, ರಾಕೇಶ್ ಅಳ್ಸೆ, ಕೃಷ್ಣರಾಜ್, ಶೇಖರ್ ನಾಯ್ಡು ಮುಂತಾದವರು ಉಪಸ್ಥಿತರಿದ್ದರು.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!