ಒಳಗೇನಿದೆ!?

ಕೆಎಸ್‌ಎಚ್‌ಎ: ಆ. 31ರಂದು ಜಿಲ್ಲಾವಾರು ಸಂಘಟನೆಗಳ ಸಮ್ಮಿಲನ; ಹೋಟೆಲ್‌ ಉದ್ಯಮದ ಸಾಧಕರಿಗೆ ಸನ್ಮಾನ

ಬೆಂಗಳೂರು: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘವು ಇದೇ ಆಗಸ್ಟ್‌ 31ರಂದು ಜಿಲ್ಲಾವಾರು ಸಂಘಟನೆಗಳ ಸಮ್ಮಿಲನ ಸಮಾರಂಭವನ್ನು ಅರಮನೆ ಮೈದಾನದ ಗೇಟ್‌ ನಂ. 9ರಲ್ಲಿನ ʼಅನಂತ್ಯʼದಲ್ಲಿ ಹಮ್ಮಿಕೊಂಡಿದೆ.

ಇದೇ ಶನಿವಾರ ಸಂಜೆ 6ರಿಂದ ನಡೆಯುವ ಈ ಸಮಾರಂಭದಲ್ಲಿ ಹೋಟೆಲ್‌ ಉದ್ಯಮದ ಸಾಧಕರಿಗೆ ಸನ್ಮಾನವೂ ನೆರವೇರಲಿದೆ. ಜೊತೆಗೆ ಸಂಘದ 2024-26ರ ಮಾರ್ಗಸೂಚಿ ಕೂಡ ಇದೇ ವೇಳೆ ಬಿಡುಗಡೆ ಆಗಲಿದೆ.

ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಈ ಸಮಾರಂಭವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್, ಕಾಪು ಶಾಸಕ ಸುರೇಶ್‌ ಶೆಟ್ಟಿ ಅವರು ಉಪಸ್ಥಿತರಿರಲಿದ್ದಾರೆ. ಎಂಆರ್‌ಜಿ ಗ್ರೂಪ್‌ ಛೇರ್ಮನ್‌ ಡಾ.ಕೆ. ಪ್ರಕಾಶ್‌ ಶೆಟ್ಟಿ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಮರ್ಪಣೆ ಆಗಲಿದೆ.

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಮಾಜಿ ಅಧ್ಯಕ್ಷ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಚಂದ್ರಶೇಖರ ಹೆಬ್ಬಾರ್‌, ಕರ್ನಾಟಕದಲ್ಲಿ ಆಂಧ್ರಶೈಲಿ ಊಟದ ಪಿತಾಮಹ ಆರ್‌.ಆರ್. ರಮಣ ರೆಡ್ಡಿ ಅವರನ್ನು ಈ ಸಮ್ಮಿಲನ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ ತಿಳಿಸಿದ್ದಾರೆ.

ಎಫ್‌ಕೆಸಿಸಿಐ ಅಧ್ಯಕ್ಷ ರಮೇಶಚಂದ್ರ ಲಹೋಟಿ, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್‌ ಎಸ್.‌ ಶೆಟ್ಟಿ, ಫೆಡರೇಷನ್‌ ಆಫ್‌ ಹೋಟೆಲ್‌ & ರೆಸ್ಟೋರೆಂಟ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಫ್‌ಎಚ್‌ಆರ್‌ಐಎ) ಅಧ್ಯಕ್ಷ ಪ್ರದೀಪ್‌ ಶೆಟ್ಟಿ, ಸೌತ್‌ ಇಂಡಿಯಾ ಹೋಟೆಲ್‌ & ರೆಸ್ಟೋರೆಂಟ್‌ ಅಸೋಸಿಯೇಷನ್‌ (ಎಸ್‌ಐಎಚ್‌ಆರ್‌ಎ) ಅಧ್ಯಕ್ಷ ಕೆ.ಶಾಮರಾಜು, ಬಿಸಿಐಸಿ ಅಧ್ಯಕ್ಷ ವಿನೀತ್‌ ವರ್ಮಾ, ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್‌ ಶೆಟ್ಟಿ, ಕೆಟಿಎಂ ಅಧ್ಯಕ್ಷ ಜೋಸ್‌ ಪ್ರದೀಪ್‌, ಆಂಧ್ರಪ್ರದೇಶ ಹೋಟೆಲ್‌ ಅಸೋಸಿಯೇಷನ್‌ ಅಧ್ಯಕ್ಷ ಆರ್‌.ವಿ. ಸ್ವಾಮಿ, ತಮಿಳುನಾಡು ಹೋಟೆಲ್‌ ಅಸೋಸಿಯೇಷನ್‌ ಅಧ್ಯಕ್ಷ ವೆಂಕಟಸುಬ್ಬು, ತೆಲಂಗಾಣ ಹೋಟೆಲ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್.ವೆಂಕಟ ರೆಡ್ಡಿ, ಪಾಂಡಿಚೇರಿ ಹೋಟೆಲ್‌ ಅಸೋಸಿಯೇಷನ್‌ ಅಧ್ಯಕ್ಷ ಕೆ.ಎ.ಭಾಸ್ಕರನ್‌, ಕೆಎಚ್‌ಆರ್‌ಎ ಅಧ್ಯಕ್ಷ ಜಿ.ಜಯಪಾಲ್‌ ವಿಶೇಷ  ಆಹ್ವಾನಿತರಾಗಿ ಈ ಸಮಾರಂಭಕ್ಕೆ ಆಗಮಿಸಲಿದ್ದಾರೆ.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಕೆಎಸ್‌ಎಚ್‌ಎ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಭಿನಂದನೆ

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ