ಒಳಗೇನಿದೆ!?

ವರ್ಷದ ಹಿಂದೆ ಇಬ್ಬರು ನೀಡಿದ್ದ ದೂರು, 15 ಹೋಟೆಲ್‌ಗಳಿಗೆ ಈಗ ಮುಚ್ಚಬೇಕಾದ ಪರಿಸ್ಥಿತಿ!

ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ

ಬೆಂಗಳೂರು: ಕಳೆದ ವರ್ಷ ಇಬ್ಬರು ದೂರಿನ ನೀಡಿದ್ದ ಹಿನ್ನೆಲೆಯಲ್ಲಿ 15 ಹೋಟೆಲ್‌ಗಳಿಗೆ ಮುಚ್ಚಬೇಕಾದಂಥ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಸಂಬಂಧಪಟ್ಟವರಿಗೆ ಸರ್ಕಾರ ಈಗಾಗಲೇ ನೋಟಿಸ್‌ ಜಾರಿ ಮಾಡಿದೆ.

ಉತ್ತರಪ್ರದೇಶದ ಘಾಜಿಯಾಬಾದ್‌ ನಿವಾಸಿಗಳಾದ ಪ್ರಸೂನ್‌ ಪಂತ್‌ ಮತ್ತು ಪ್ರದೀಪ್‌ ಧಲಿಯಾ ಎಂಬವರು ಈ ದೂರುಗಳನ್ನು ನೀಡಿದ್ದರು. ಹಲವಾರು ಮಾಲ್‌ಗಳು ಹಾಗೂ ಹೋಟೆಲ್‌ಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ನಿರಾಕ್ಷೇಪಣಾ ಪತ್ರ ಇಲ್ಲದೆ ನಡೆಯುತ್ತಿವೆ ಎಂದು ಆರೋಪಿಸಿ ಇವರು ದೂರು ನೀಡಿದ್ದರು.

ಈ ದೂರಿನ ಸಂಬಂಧ ಸ್ಥಿತಿಗತಿ ವರದಿ ನೀಡುವಂತೆ 2023ರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಹಸಿರು ಮಂಡಳಿ (ಎನ್‌ಜಿಟಿ) ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ(ಯುಪಿಪಿಸಿಬಿ)ಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು 146 ಘಟಕಗಳನ್ನು ತಪಾಸಣೆಗೆ ಒಳಪಡಿಸಿತ್ತು.

ಜಲ ( ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆಯ ನಿಬಂಧನೆಗಳ ಅನ್ವಯ ಕಾರ್ಯನಿರ್ವಹಿಸಲು 15 ರೆಸ್ಟೋರೆಂಟ್‌ಗಳು, ಬ್ಯಾಂಕ್ವೆಟ್‌ ಹಾಲ್‌ಗಳು ಮತ್ತು ಹೋಟೆಲ್‌ಗಳು ಅನುಮೋದನೆ ಹೊಂದಿರುವುದಿಲ್ಲ ಎಂದಿರುವ ಯುಪಿಪಿಸಿಬಿ, ಅವುಗಳನ್ನು ಮುಚ್ಚುವಂತೆ ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ ಈ ಘಟಕಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಘಾಜಿಯಾಬಾದ್‌ನ ಡಿಸ್ಟ್ರಿಕ್ಟ್‌ ಮ್ಯಾಜಿಸ್ಟ್ರೇಟ್‌ ಅವರಿಂದ ಈ ತಿಂಗಳಲ್ಲಿ ರಚಿತವಾದ ಜಂಟಿ ಸಮಿತಿಯು ಈ ಘಟಕಗಳ ಜನರೇಟರ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಆಗಸ್ಟ್‌ 25ರಂದು ಎನ್‌ಜಿಟಿಗೆ ಸಲ್ಲಿಸಲಾದ ಸ್ಥಿತಿಗತಿ ವರದಿಯಲ್ಲಿ ತಿಳಿಸಲಾಗಿದೆ.

ತಪಾಸಣೆಗೆ ಒಳಪಡಿಸಲಾದ 146 ಘಟಕಗಳ ಪೈಕಿ 51 ಘಟಕಗಳು ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ 1974, ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ 1981ರ ನಿಬಂಧನೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ 92 ಘಟಕಗಳು ಈ ಕಾಯ್ದೆಗಳ ನಿಬಂಧನೆಗಳಡಿ ಕಾರ್ಯನಿರ್ವಹಿಸಲು ಅನುಮೋದನೆ ಪಡೆದಿಲ್ಲ ಮತ್ತು ತಪಾಸಣೆಗೆ ಒಳಪಡಿಸಿದ 3 ಘಟಕಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ. 25 ಘಟಕಗಳಿಗೆ ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಸೆಕ್ಷನ್‌ 33ಎ ಅನ್ವಯ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ ಹಾಗೂ 15 ಘಟಕಗಳಿಗೆ ಮುಚ್ಚುವಂತೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ವರದಿಯಲ್ಲಿ ವಿವರಣೆ ನೀಡಲಾಗಿದೆ. –ಏಜೆನ್ಸೀಸ್

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ವಿದ್ಯುತ್‌ ಸಂಪರ್ಕ ನಾಳೆಯಿಂದಲೇ ಕಡಿತ; ಯಾರಿಗೆಲ್ಲ ಅನ್ವಯ? ಇಲ್ಲಿದೆ ವಿವರ…

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ