ಒಳಗೇನಿದೆ!?

ಉದಯೋನ್ಮುಖ ತಂತ್ರಜ್ಞಾನಕ್ಕಾಗಿ ಒಎನ್‌ಡಿಸಿಗೆ ಮುಂಬೈನಲ್ಲಿ ಸ್ವರ್ಣ ಪ್ರಶಸ್ತಿ ಪ್ರದಾನ

ನವದೆಹಲಿ: ಸರ್ಕಾರಿ ಸ್ವಾಮ್ಯದ ʼಓಪನ್‌ ನೆಟ್‌ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌ʼ (ಒಎನ್‌ಡಿಸಿ) ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ವರ್ಣ ಪ್ರಶಸ್ತಿಗೆ ಪಾತ್ರವಾಗಿದೆ.

ಇ-ಆಡಳಿತದ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ʼನಾಗರಿಕ ಕೇಂದ್ರಿತ ಸೇವೆಗಳ ಒದಗಿಸಲು ಉದಯೋನ್ಮುಖ ತಂತ್ರಜ್ಞಾನಗಳ ಅಳವಡಿಕೆʼ ವಿಭಾಗದಲ್ಲಿನ ಈ ಸ್ವರ್ಣ ಪ್ರಶಸ್ತಿಯನ್ನು ಇ-ಆಡಳಿತ ಕುರಿತು ಮುಂಬೈನಲ್ಲಿ ಸೆ.3ರ ಮಂಗಳವಾರ ನಡೆದ 27ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಡಿಪಿಐಐಟಿ ಜಂಟಿ ಕಾರ್ಯದರ್ಶಿ ಸಂಜೀವ್‌ ಮತ್ತಿತರರ ಅಧಿಕಾರಿಗಳು ಸ್ವೀಕರಿಸಿದರು. ಈ ಪ್ರಶಸ್ತಿಯು ದೇಶದಲ್ಲಿ ಡಿಜಿಟಲ್‌ ಗವರ್ನೆನ್ಸ್‌ ಕುರಿತ ಅತ್ಯಂತ ಪ್ರತಿಷ್ಠಿತ ಮತ್ತು ಸ್ಪರ್ಧಾತ್ಮಕ ಮಾನ್ಯತೆ ಎಂದು ಪರಿಗಣಿಸಲ್ಪಟ್ಟಿದೆ.

ಉದ್ಯಮ ಮತ್ತು ಆಂತರಿಕ ವಹಿವಾಟು ಪ್ರಚಾರ ಇಲಾಖೆ(ಡಿಪಿಐಐಟಿ)ಯ ಉಪಕ್ರಮ ಆಗಿರುವ ಒಎನ್‌ಡಿಸಿ, ಎಲ್ಲ ಇ-ಕಾಮರ್ಸ್‌ ರಿಟೇಲ್‌ನ ಉತ್ತೇಜನ ಗುರಿ ಹೊಂದಿರುವ ಮುಕ್ತ ವೇದಿಕೆ ಆಗಿದೆ.

ಕ್ಷೇತ್ರದಲ್ಲಿನ ದಿಗ್ಗಜರ ಪ್ರಾಬಲ್ಯದ ನಡುವೆಯೂ ಸಣ್ಣ ಚಿಲ್ಲರೆ ಮಾರಾಟಗಾರರು ಇ-ಕಾಮರ್ಸ್‌ ಮಾಧ್ಯಮದ ಮೂಲಕ ತಮ್ಮ ವ್ಯಾಪಾರ ವಿಸ್ತರಿಸಿಕೊಳ್ಳುವಲ್ಲಿ ಒಎನ್‌ಡಿಸಿ ಸಹಾಯ ಮಾಡುತ್ತದೆ.

ಈ ಜಾಲ ಇದೀಗ ತಿಂಗಳಿಗೆ 1.2 ಕೋಟಿ ಆರ್ಡರ್‌ಗಳನ್ನು ಸಕ್ರಿಯಗೊಳಿಸುತ್ತಿದ್ದು, ಆಹಾರ, ಫ್ಯಾಷನ್‌, ಎಲೆಕ್ಟ್ರಾನಿಕ್ ಸೇರಿ ಹಲವು ವರ್ಗಗಳಿಗೆ ವ್ಯಾಪಿಸಿದೆ. ಭಾರತದಲ್ಲಿ ಈಗಾಗಲೇ 6 ಲಕ್ಷಕ್ಕೂ ಅಧಿಕ ಮಾರಾಟಗಾರರು ಈ ವೇದಿಕೆಗೆ ಪ್ರವೇಶಿಸಿದ್ದಾರೆ.

ಇದೂ ಓದಿ: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಬೃಹತ್‌ ಉದ್ಯೋಗಾವಕಾಶ; ನಾಳೆಯೇ ಸಂದರ್ಶನ..

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ: ಸಚಿವರ ಭರವಸೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ