ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಹಬ್ಬದೂಟ ಸವಿಯಬೇಕೆಂದರೆ ಅಥವಾ ನೆಂಟರಿಷ್ಟರಿಗೆ ಹಬ್ಬದೂಟ ಹಾಕಿಸಬೇಕೆಂದರೂ ಚಿಂತೆಯೇ ಬೇಡ.
ತಯಾರಿಯ ತಲೆನೋವು, ಬಡಿಸುವ ಗಡಿಬಿಡಿಯೂ ಇರದೆ ನಿರಾಳವಾಗಿ ಹಬ್ಬದೂಟ ಸವಿಯಲೆಂದೇ ಮಲ್ಲೇಶ್ವರದಲ್ಲಿ ಇರುವ ʼಹಳ್ಳಿಮನೆʼಯವರು ವಿಶೇಷ ಅವಕಾಶ ಕಲ್ಪಿಸಿದ್ದಾರೆ.
ಸುಮಾರು ಎರಡು ಡಜನ್‌ಗಳಷ್ಟು ವೆರೈಟಿಯ ತಿನಿಸುಗಳನ್ನು ಒಳಗೊಂಡ ಈ ಹಬ್ಬದೂಟ ಗಣೇಶ ಚೌತಿಯಂದು ಎರಡೂ ಹೊತ್ತು ʼಹಳ್ಳಿಮನೆʼಯಲ್ಲಿ ಲಭ್ಯ ಇರಲಿದೆ.
ಹಬ್ಬದೂಟದ ಭಕ್ಷ್ಯಗಳು
ಅವಲಕ್ಕಿ ಪಂಚಕಜ್ಜಾಯ, ಹಯಗ್ರೀವ, ಉಪ್ಪು-ಉಪ್ಪಿನಕಾಯಿ, ಕಡಲೆಕಾಳು ಉಸಲಿ, ಸ್ಪ್ರೌಟ್ಸ್ ಕೋಸಂಬರಿ, ಕ್ಯಾಬೇಜ್ ಕಡಲೆಬೇಳೆ ಪಲ್ಯ, ತೊಂಡೆಕಾಯಿ ಗೋಡಂಬಿ ಪಲ್ಯ, ಕೊಟ್ಟೆ ಕಡುಬು, ಅಲಸಂಡೆ ಕಾಳು ಗಸಿ, ಚಿತ್ರಾನ್ನ, ಶಾವಿಗೆ ಪುಳಿಯೋಗರೆ, ಕರ್ಜಿ ಕಾಯಿ, ಸ್ಟೀಮ್ಡ್ ಮೋದಕ, ಪೈನಾಪಲ್ ಗೊಜ್ಜು, ಹಪ್ಪಳ-ಸಂಡಿಗೆ, ಅನ್ನ-ರಸಂ-ತುಪ್ಪ, ಮಂಗಳೂರು ಸೌತೆಕಾಯಿ ಸಾಂಬಾರು, ಮಜ್ಜಿಗೆ ಹುಳಿ, ಅಂಬೊಡೆ/ಚಕ್ಕುಲಿ, ಕಾಯಿ ಹೋಳಿಗೆ, ರವೆ ಲಾಡು, ಮೊಸರು, ಭಾವನಾ ಶುಂಠಿ, ಬಾಳೆಹಣ್ಣು, ನೀರಿನ ಬಾಟಲಿ.
ಹಬ್ಬದೂಟದ ಸಮಯ
ಸೆಪ್ಟೆಂಬರ್ 7ರ ಶನಿವಾರ ಮಧ್ಯಾಹ್ನ 12ರಿಂದ 3.30 ಹಾಗೂ ರಾತ್ರಿ 7ರಿಂದ 9.30ರ ವರೆಗೆ ಹಬ್ಬದೂಟ ಲಭ್ಯವಿರುತ್ತದೆ. ಒಂದು ಊಟಕ್ಕೆ 400 ರೂ. ಬೆಲೆ ನಿಗದಿ ಮಾಡಲಾಗಿದ್ದು, ಮಕ್ಕಳಿಗೆ 250 ರೂಪಾಯಿಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ 9880833199 ಸಂಪರ್ಕಿಸಬಹುದು.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಇದೂ ಓದಿ: ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ: ಸಚಿವರ ಭರವಸೆ