ಒಳಗೇನಿದೆ!?

ಹೋಟೆಲ್‌ ಮಾಲೀಕರ ಬಳಿ 25 ಲಕ್ಷ ರೂಪಾಯಿ ಲಂಚ ಕೇಳಿ ಸಿಕ್ಕಿಬಿದ್ದ ಸಿಬ್ಬಂದಿ!

ಮುಂಬೈ: ಹೋಟೆಲ್‌ ಮಾಲೀಕರೊಬ್ಬರ ಬಳಿ ಬರೋಬ್ಬರಿ 25 ಲಕ್ಷ ರೂಪಾಯಿ ಲಂಚ ಕೇಳಿದ ಸಿಬ್ಬಂದಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಲಂಚ ಪಡೆದ ಆರೋಪದ ಮೇಲೆ ಆತನನ್ನು ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ.

ನ್ಯಾಯಾಲಯವೊಂದರ ಸಿಬ್ಬಂದಿ ಆಗಿರುವ ವಿಶಾಲ್‌ ಚಂದ್ರಕಾಂತ್‌ ಸಾವಂತ್‌ ಎಂಬಾತ ಬಂಧಿತ ಆರೋಪಿ. ಆತನನ್ನು ಮುಂಬೈನ ಎಲ್‌.ಟಿ.ಮಾರ್ಗ್‌ ಪ್ರದೇಶದ ಹೋಟೆಲೊಂದರಲ್ಲಿ ಸೋಮವಾರ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ನ್ಯಾಯಾಲಯವೊಂದರಲ್ಲಿ ಟ್ರಾನ್ಸ್‌ಲೇಟರ್‌-ಇಂಟರ್‌ಪ್ರಿಟರ್‌ ಆಗಿ ಕೆಲಸ ಮಾಡುತ್ತಿದ್ದ ವಿಶಾಲ್‌, ಹೋಟೆಲ್‌ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿ ಬಾಕಿ ಇರುವ ಪ್ರಕರಣದ ಇತ್ಯರ್ಥಕ್ಕೆ ನೆರವಾಗಲು ಹೋಟೆಲ್‌ ಮಾಲೀಕರ ಬಳಿ 25 ಲಕ್ಷ ರೂ. ಲಂಚ ಕೇಳಿದ್ದಾನೆ ಎಂಬ ಆರೋಪಿಸಲಾಗಿದೆ.

ಇದೂ ಓದಿ: ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ: ಸಚಿವರ ಭರವಸೆ

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ