ನವದೆಹಲಿ: ಜಗತ್ತಿನಲ್ಲಿ ನಾನಾ ಕಾರಣಗಳಿಂದಾಗಿ ವರ್ಷಕ್ಕೆ ಅಸಂಖ್ಯಾತ ಸಾವುಗಳು ಸಂಭವಿಸುತ್ತಿರುತ್ತವೆ. ಆ ಪೈಕಿ ಆಹಾರದಿಂದಲೂ ಸಂಭವಿಸುತ್ತಿರುವ ಸಾವುಗಳೂ ಇವೆ. ಹೌದು.. ಅಸುರಕ್ಷಿತ ಆಹಾರಗಳಿಂದಲೂ ಬಹಳಷ್ಟು ಸಾವು ಸಂಭವಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ.
ಅಸುರಕ್ಷಿತ ಆಹಾರದಿಂದ ಜಗತ್ತಿನಾದ್ಯಂತ ಪ್ರತಿ ವರ್ಷ 60 ಕೋಟಿ ಜನರು ಅಸ್ವಸ್ಥರಾಗುತ್ತಾರೆ. ಮಾತ್ರವಲ್ಲದೆ, ಸುಮಾರು 4.2 ಲಕ್ಷ ಜನರು ಸಾವಿಗೀಡಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾ ಕಾರ್ಯದರ್ಶಿ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಸೆಪ್ಟೆಂಬರ್ 19ರಿಂದ ನಡೆಯುತ್ತಿರುವ ಎರಡನೇ ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆಗೆ ಕಳುಹಿಸಿರುವ ವಿಡಿಯೋ ಸಂದೇಶದಲ್ಲಿ ಅವರು ಈ ಮಾಹಿತಿ ತಿಳಿಸಿದ್ದಾರೆ. ಅಸುರಕ್ಷಿತ ಆಹಾರಗಳ ವಿರುದ್ಧ ಹೋರಾಡುವಲ್ಲಿ ಆಹಾರ ನಿಯಮಗಳ ನಿರ್ಣಾಯಕ ಪಾತ್ರವನ್ನು ಕೂಡ ಅವರು ಪ್ರತಿಪಾದಿಸಿದ್ದಾರೆ.
ಹವಾಮಾನ ಬದಲಾವಣೆ, ಜನಸಂಖ್ಯೆ ಬೆಳವಣಿಗೆ, ಹೊಸ ತಂತ್ರಜ್ಞಾನಗಳು, ಜಾಗತೀಕರಣ ಮತ್ತು ಕೈಗಾರಿಕೀಕರಣ ಮುಂತಾದವುಗಳಿಂದಾಗಿ ನಮ್ಮ ಆಹಾರ ವ್ಯವಸ್ಥೆಗಳು ಎದುರಿಸುತ್ತಿರುವ ಸವಾಲುಗಳು ಹೆಚ್ಚುತ್ತಿವೆ ಎಂಬುದಾಗಿಯೂ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಪ್ರಲ್ಹಾದ ಜೋಶಿ ಮುಂತಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಇದೂ ಓದಿ: ಒಂದು ಕಪ್ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!
ಇದೂ ಓದಿ: ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ಇಳಿಸಲು ನೂರಾರು ಆಹಾರೋದ್ಯಮಿಗಳ ಮನವಿ
ಇದೂ ಓದಿ: ಹೋಟೆಲ್ ಮಾಲೀಕರ ಕುರಿತ ವಿಡಿಯೋ ವೈರಲ್, ಮಾಜಿ ಐಪಿಎಸ್ ಅಧಿಕಾರಿಯಿಂದ ಕ್ಷಮೆ ಯಾಚನೆ