ಒಳಗೇನಿದೆ!?

ಹೋಟೆಲ್‌ ಕಾರ್ಮಿಕರಲ್ಲಿದೆ ಹೆಚ್ಚಿನ ಕನ್ನಡಾಭಿಮಾನ: ಕೆಎಸ್‌ಎಚ್‌ಎ ಅಧ್ಯಕ್ಷ ಜಿ.ಕೆ. ಶೆಟ್ಟಿ

ಬೆಂಗಳೂರಿನಲ್ಲಿ ಮುಳಿಯ ಜುವೆಲ್ಸ್ ಅವರು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ನೃತ್ಯ ಸ್ಪರ್ಧೆಯನ್ನು ಕರ್ನಾಟಕ ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಉದ್ಘಾಟಿಸಿದರು. ಮಿಸೆಸ್‌ ಯೂನಿವರ್ಸ್‌ ಸತ್ಯವತಿ ಬಸವರಾಜು, ಮಾರ್ಕೆಟಿಂಗ್‌ ಕನ್ಸಲ್ಟೆಂಟ್‌ ವೇಣುಶರ್ಮಾ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು: ಪ್ರತಿಯೊಬ್ಬರಲ್ಲೂ ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಓದುವ ಹವ್ಯಾಸವನ್ನು ರೂಢಿಸುವ ಜೊತೆಗೆ ಭಾಷೆಯ ವಿಷಯದಲ್ಲಿ ಮಕ್ಕಳನ್ನು ಹುರಿದುಂಬಿಸುವಂಥ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ ಎಂದ ಕರ್ನಾಟಕ ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರು, ಹೋಟೆಲ್‌ ಕಾರ್ಮಿಕರಲ್ಲಿ ಕನ್ನಡಾಭಿಮಾನವನ್ನು ಹೆಚ್ಚಾಗಿ ಕಾಣಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಪ್ರತಿಷ್ಠಿತ ಮುಳಿಯ ಜುವೆಲ್ಸ್‌ ಅವರು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಕರ್ನಾಟಕದ ವಿವಿಧ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಧ್ಯಾ ಜಯರಾಮ್‌ ಅವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮಿಸೆಸ್‌ ಯೂನಿವರ್ಸ್‌ ಸತ್ಯವತಿ ಬಸವರಾಜು ಶುಭ ಹಾರೈಸಿದರು. ಮುಳಿಯ ಜುವೆಲ್ಸ್‌ ಮಾರ್ಕೆಟಿಂಗ್‌ ಕನ್ಸಲ್ಟೆಂಟ್‌ ವೇಣುಶರ್ಮಾ ಅಧ್ಯಕ್ಷತೆ ವಹಿಸಿದ್ದರು.

ಮುಳಿಯದ ವಿಶೇಷ ವಿನ್ಯಾಸದ ಆಭರಣಗಳು ಮನಸೂರೆಗೊಳಿಸುವಂತಿವೆ. ಚಿನ್ನಾಭರಣದ ಜೊತೆಗೆ ಸಾಮಾಜಿಕ ಕಾಳಜಿಯನ್ನೂ ಹೊಂದಿರುವುದು ಮುಳಿಯ ಜುವೆಲ್ಸ್‌ನ ವಿಶೇಷ ಎಂದು ವೇಣುಶರ್ಮಾ ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಚಿತ್ರನಟ ಸ್ಮೈಲ್‌ ಶಿವು, ಕಾಸಿಯಾ ಗೌರವ ಕಾರ್ಯದರ್ಶಿ ಸುರೇಶ್‌ ಎನ್‌. ಸಾಗರ್‌ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಮುಳಿಯ ಪ್ರಬಂಧಕರಾದ ಎನ್‌. ಸುಬ್ರಹ್ಮಣ್ಯ ಭಟ್‌, ಸಂಜೀವ, ಶ್ಯಾಮ್‌, ಸತೀಶ್‌ ಮುಂತಾದವರು ಉಪಸ್ಥಿತರಿದ್ದರು.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘಕ್ಕೆ ಮೂರೇ ತಿಂಗಳಲ್ಲಿ 30ಕ್ಕೂ ಹೆಚ್ಚು ಹೋಟೆಲ್‌ಗಳ ಸೇರ್ಪಡೆ

ಇದೂ ಓದಿ: ಸರ್ಕಾರ ಅಂದುಕೊಂಡಿದ್ದಕ್ಕಿಂತಲೂ ದೊಡ್ಡದಿದೆ ಹೋಟೆಲ್‌ ಕ್ಷೇತ್ರದ ಗಾತ್ರ-ಸಾಮರ್ಥ್ಯ: ಪ್ರದೀಪ್‌ ಶೆಟ್ಟಿ

ಇದೂ ಓದಿ: ಇನ್ನು ಊರು-ಕೇರಿ, ಗಲ್ಲಿಗಳಲ್ಲೂ ಬೊಂಬಾಟ್‌ ಭೋಜನ; ಜೊತೆಗೆ ಹಳೇ/ಜನಪ್ರಿಯ ಹೋಟೆಲ್‌ಗಳ ದರ್ಶನ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ