ಬೆಂಗಳೂರು: ಕಲಾವಿದರಂದರೇನೇ ಹಾಗೆ, ಏನೂ ಸಿಕ್ಕರೂ ಅದರಲ್ಲಿ ತಮ್ಮ ಕೈಚಳಕ ತೋರಿಬಿಡುತ್ತಾರೆ. ಅಂಥದ್ದೇ ಒಂದು ಕೈಚಳಕವನ್ನು ಬಿಸಿ ದೋಸೆ ಹೆಂಚಿನ ಮೇಲೆ ಕಲಾವಿದರೊಬ್ಬರು ಪ್ರಯೋಗಿಸಿದ್ದಾರೆ. ಮಾತ್ರವಲ್ಲ, ಆ ಮೂಲಕ ಸುಶ್ರಾವ್ಯ ನಾದ ಹೊರಹೊಮ್ಮಿಸಿ ರಂಜಿಸಿದ್ದಾರೆ.
ಅಂದಹಾಗೆ, ಆ ಕಲಾವಿದ ಬೇರಾರೂ ಅಲ್ಲ, ಖ್ಯಾತ ಡ್ರಮ್ಮರ್ ಶಿವಮಣಿ. ಅಂಥದ್ದೊಂದು ಪ್ರಯೋಗ ನಡೆದಿದ್ದು ಬೇರೆಲ್ಲೂ ಅಲ್ಲ, ಬೆಂಗಳೂರಿನ ಗಾಂಧಿಬಜಾರಿನ ಹೆಸರುವಾಸಿ ಹೋಟೆಲ್ ʼವಿದ್ಯಾರ್ಥಿ ಭವನʼದಲ್ಲಿ.
ಹೌದು.. ಮೊನ್ನೆಮೊನ್ನೆಯಷ್ಟೇ ʼವಿದ್ಯಾರ್ಥಿ ಭವನʼ ಹೋಟೆಲ್ಗೆ ಭೇಟಿ ನೀಡಿದ್ದ ಡ್ರಮ್ಮರ್ ಶಿವಮಣಿ, ದೋಸೆ ಹೆಂಚಿನ ಮೇಲೆ ಎರಡು ಟೀ ಕಪ್ಗಳಿಂದ ನಾದ ಹೊರಹೊಮ್ಮಿಸಿದ್ದಾರೆ. ಆ ಕೆಲವು ಕ್ಷಣಗಳ ಮಟ್ಟಿಗೆ ದೋಸೆ ಹೆಂಚೇ ಅವರ ಡ್ರಮ್ ಆಗಿತ್ತು.
ಅಡುಗೆ ಕೋಣೆಯನ್ನೇ ವೇದಿಕೆ ಆಗಿಸಿಕೊಂಡು, ಬಿಸಿ ದೋಸೆ ಹೆಂಚನ್ನೇ ಡ್ರಮ್ ಆಗಿಸಿಕೊಂಡು, ಟೀ ಕಪ್ಗಳಿಂದ ಅವರು ನಾದ ಹೊರಹೊಮ್ಮಿಸಿದ ವಿಡಿಯೋ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘಕ್ಕೆ ಮೂರೇ ತಿಂಗಳಲ್ಲಿ 30ಕ್ಕೂ ಹೆಚ್ಚು ಹೋಟೆಲ್ಗಳ ಸೇರ್ಪಡೆ
ಇದೂ ಓದಿ: ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…
ಇದೂ ಓದಿ: ಹೋಟೆಲ್ಗಳಿಗೆ ಉದ್ಯಮ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ: ಸಚಿವರ ಭರವಸೆ