ಬೆಂಗಳೂರು: ರಾಜಧಾನಿ ಬೆಂಗಳೂರಿನ ಅತ್ಯಂತ ಹಳೆಯ ಹೋಟೆಲುಗಳಲ್ಲಿ ಒಂದಾಗಿರುವ ‘ಬ್ರಾಹ್ಮಣರ ಕಾಫಿ ಬಾರ್’ ಅರವತ್ತನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹೋಟೆಲುಗಳ ಸಂಘ ʼಬ್ರಾಹ್ಮಣರ ಕಾಫಿ ಬಾರ್ʼಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿದೆ.
ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಎನ್.ವೀರೇಂದ್ರ ಕಾಮತ್ ಅವರು ʼಬ್ರಾಹ್ಮಣರ ಕಾಫಿ ಬಾರ್ʼನ ಮಾಲೀಕರಾದ ಕೆ. ರಾಧಾಕೃಷ್ಣ ಅಡಿಗರನ್ನು ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿ, ಇನ್ನಷ್ಟು ಯಶಸ್ಸು ತಮ್ಮದಾಗಲಿ ಎಂದು ಶುಭ ಹಾರೈಸಿದ್ದಾರೆ.
ಜನಪ್ರಿಯ ʼಪಾಕಶಾಲʼ ಹೋಟೆಲುಗಳ ಸರಣಿ ಹೊಂದಿರುವ ಕೆ.ಎನ್. ವಾಸುದೇವ ಅಡಿಗ ಅವರ ತಂದೆ, ಕೆ.ಎನ್. ನಾಗೇಶ್ವರ ಅಡಿಗ ಹಾಗೂ ತಾಯಿ ಕೆ.ಎನ್. ಸರಸ್ವತಿ ಅವರು 1965ರಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಶಂಕರಪುರದಲ್ಲಿ ʼಬ್ರಾಹ್ಮಣರ ಕಾಫಿ ಬಾರ್ʼ ಸ್ಥಾಪಿಸಿದ್ದರು. ಅಂದಿನಿಂದಲೂ ರುಚಿ ಹಾಗೂ ಗುಣಮಟ್ಟಕ್ಕೆ ಒತ್ತು ಕೊಟ್ಟಿರುವ ಈ ಹೋಟೆಲ್ ಇದೀಗ ಅರವತ್ತನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಇಲ್ಲಿ ಈಗಲೂ ಜನಸಂದಣಿ ಕಂಡುಬರುತ್ತಿದ್ದು, ಹೋಟೆಲ್ ಕ್ಷೇತ್ರದಲ್ಲಿ ಇದು ತನ್ನದೇ ಆದ ಛಾಪನ್ನು ಮೂಡಿಸಿದೆ.
ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ ನೇತೃತ್ವ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್