ಬೆಂಗಳೂರು: ಬಸವನಗುಡಿಯಲ್ಲಿ ಈಗ ಹೊಸ ‘ಮೇಳ’, ಹೊಸ ‘ಸಂಪ್ರದಾಯ’ವಷ್ಟೇ ಅಲ್ಲ, ‘ಆತಿಥ್ಯ’ವೂ ಹೊಸದಾಗಿ ಮರಳಿದೆ. ಅರ್ಥಾತ್, ಗಾಂಧಿಬಜಾರಿನಲ್ಲಿನ 1986ರ ಕಾಲದ ಹಳೆಯ ಹೋಟೆಲ್ ‘ಆತಿಥ್ಯ’ ನವೀಕರಣಗೊಂಡು ಸುಸಜ್ಜಿತವಾಗಿ ಪುನರಾರಂಭವಾಗಿದೆ.
ಕಳೆದ ಜನವರಿಯಲ್ಲಿ ಮರು ಆರಂಭಗೊಂಡಿರುವ ಈ ‘ಆತಿಥ್ಯ‘ ಹೋಟೆಲ್‌ನಲ್ಲಿ ದರ್ಶಿನಿ, ರೆಸ್ಟೋರೆಂಟ್, ಲಾಡ್ಜಿಂಗ್ ಎಲ್ಲವೂ ಇದೆ. ದರ್ಶಿನಿಗೆ ‘ಮೇಳ’, ರೆಸ್ಟೋರೆಂಟ್‌ಗೆ ‘ಸಂಪ್ರದಾಯ’ ಎಂದು ಹೆಸರಿಡಲಾಗಿದ್ದು, ‘ಸ್ವಾದ’ ಎನ್ನುವ ಫೈನ್‌ಡೈನ್ ಸಹ ಇದೆ. ‘ಪ್ರಥಮ’ ಎನ್ನುವ ಪ್ರೈವೇಟ್ ಡೈನಿಂಗ್ ಕೂಡ ಇದೆ.
ಇಲ್ಲಿನ ವಾತಾವರಣ ಕೂಡ ವಿಶೇಷವಾಗಿದ್ದು, ಗ್ರಾಹಕರಿಗೆ ಆರಂಭದಲ್ಲಿ ಕೈತೊಳೆಯಲು ಸುವಾಸಿತ ಜಲ ನೀಡಿ, ಮೊದಲನೆಯದಾಗಿ ಸೇವನೆಗೆ ಸುಗಂಧೋದಕ ನೀಡುವುದು ಆಕರ್ಷಣೀಯವಾಗಿದೆ.
ಉದ್ಘಾಟನಾ ಸಮಾರಂಭಕ್ಕೆ ಬಸವನಗುಡಿ ಶಾಸಕರಾದ ರವಿಸುಬ್ರಹ್ಮಣ್ಯ, ‘ವಿದ್ಯಾರ್ಥಿ ಭವನ’ದ ಮಾಲೀಕರಾದ ಅರುಣ್ ಅಡಿಗ, ‘ಪಾಕಶಾಲ’ ಮಾಲೀಕರಾದ ವಾಸುದೇವ ಅಡಿಗ, ‘ಸಂಗೀತ ಮೊಬೈಲ್ಸ್’ ಮಾಲೀಕರಾದ ಸುಭಾಶ್ಚಂದ್ರ ಮುಂತಾದವರು ಆಗಮಿಸಿ ಶುಭ ಹಾರೈಸಿದ್ದಾರೆ.
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್
ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ ನೇತೃತ್ವ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ



