ಬೆಂಗಳೂರು: ಫೆ.14, ಪ್ರೇಮಿಗಳ ದಿನ.. ಆ ದಿನಕ್ಕೆಂದೇ ವಿವಿಧ ಕ್ಷೇತ್ರಗಳವರು ಪ್ರೇಮಿಗಳಿಗೆಂದೇ ವಿಶೇಷ ಕೊಡುಗೆ, ವಿಶೇಷ ವ್ಯವಸ್ಥೆಗಳ ಏರ್ಪಾಡು ಮಾಡಿರುತ್ತಾರೆ. ಇದು ಅಂಥದ್ದೇ ಒಂದು ವಿಶೇಷದ ಕುರಿತ ಮಾಹಿತಿ.
ಪ್ರೇಮಿಗಳ ದಿನಾಚರಣೆ ಪ್ರಯುಕ್ತ ‘ಸಿಂಧೂರ ಗಾರ್ಡೇನಿಯಾ‘ ಹೋಟೆಲ್‌ನವರು ವಿಶೇಷವಾದ ‘ಕ್ಯಾಂಡಲ್‌ಲೈಟ್ ಡಿನ್ನರ್’ ಆಯೋಜಿಸಿದ್ದಾರೆ. ಹಲಸು ಮೇಳ, ಸಿಗಡಿ ಮೇಳ, ಮೀನು ಮೇಳ ಎಂದು ಆಯಾ ಕಾಲಕ್ಕೆ ತಕ್ಕಂತೆ ವಿಶೇಷ ಖಾದ್ಯ-ಭೋಜನಗಳನ್ನು ಏರ್ಪಡಿಸುವ ‘ಸಿಂಧೂರ ಗಾರ್ಡೇನಿಯಾ’ ಪ್ರೇಮಿಗಳ ದಿನಾಚರಣೆಯಂದೂ ಅಂಥದ್ದೇ ವಿಶೇಷ ಊಟೋಪಚಾರದ ವ್ಯವಸ್ಥೆ ಹಮ್ಮಿಕೊಂಡಿದೆ.
‘ಸಿಂಧೂರ ಗಾರ್ಡೇನಿಯಾ’ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಶಾಖೆಗಳನ್ನು ಹೊಂದಿದ್ದರೂ ಕತ್ತರಿಗುಪ್ಪೆಯ ಹೋಟೆಲ್‌ನಲ್ಲಿ ಮಾತ್ರ ಈ ‘ಕ್ಯಾಂಡಲ್‌ಲೈಟ್ ಡಿನ್ನರ್’ ಹಮ್ಮಿಕೊಂಡಿದೆ. ಫೆ.14ರ ಈ ʼಕ್ಯಾಂಡಲ್‌ಲೈಟ್ ಡಿನ್ನರ್ʼ ಸವಿಯಲು ಬಯಸುವವರು ಹೆಚ್ಚಿನ ಮಾಹಿತಿಗೆ ಹಾಗೂ ಬುಕಿಂಗ್‌ಗಾಗಿ 9606988881 ಸಂಪರ್ಕಿಸಬಹುದು.

ಇದೂ ಓದಿ: ಕುಂಭಮೇಳ: ಕನ್ನಡಿಗ ಯಾತ್ರಿಕರ ಮೆಚ್ಚುಗೆ ಗಳಿಸುತ್ತಿರುವ ಅಯೋಧ್ಯೆಯ ಉಡುಪಿ ಹೋಟೆಲ್
ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ ನೇತೃತ್ವ
ಇದೂ ಓದಿ: ‘ಬ್ರಾಹ್ಮಣರ ಕಾಫಿ ಬಾರ್’@60; ಬೆಂಗಳೂರು ಹೋಟೆಲುಗಳ ಸಂಘದಿಂದ ಅಭಿನಂದನೆ