ಒಳಗೇನಿದೆ!?

ಈಗ ಕರಾವಳಿ-ಮಲೆನಾಡು ಸೇರಿ ರಾಜ್ಯದ ಹಲವೆಡೆ ಸಿಗಲಿದೆ ʼಹುಲಿʼ; ಕರ್ನಾಟಕದ್ದೇ ಆದ ʼಜಾಗರಿ ರಮ್‌ʼ ಮಾರುಕಟ್ಟೆ ವಿಸ್ತರಣೆ

ಬೆಂಗಳೂರು: ಇದೀಗ ಕರಾವಳಿ-ಮಲೆನಾಡು ಸೇರಿ ರಾಜ್ಯದ ಹಲವೆಡೆ ʼಹುಲಿʼ ಸಿಗಲಿದೆ. ಅರ್ಥಾತ್‌, ರಾಜ್ಯದ್ದೇ ಆದ ʼಹುಲಿʼ ಬ್ರ್ಯಾಂಡ್‌ನ ‌ʼಜಾಗರಿ ರಮ್‌ʼ (ಬೆಲ್ಲದ ರಮ್) ಈಗ ಮಾರುಕಟ್ಟೆ ವಿಸ್ತರಣೆ ಮಾಡಿಕೊಂಡಿದ್ದು, ರಾಜ್ಯದ ಹಲವೆಡೆ ಸಿಗಲಿದೆ.

ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಿದ್ದ ʼಹುಲಿʼ, ಈ ವರೆಗೆ ಮೈಸೂರು-ಬೆಂಗಳೂರಿನಲ್ಲಿ ಲಭ್ಯವಿತ್ತು. ಆದರೆ ಈಗ ಇದರ ಮಾರಾಟ ವ್ಯಾಪ್ತಿ ವಿಸ್ತಾರವಾಗಿದ್ದು, ಮೈಸೂರು ಸುತ್ತಮುತ್ತ ಮಾತ್ರವಲ್ಲದೆ, ಕರಾವಳಿ-ಮಲೆನಾಡು-ಕೊಡಗು ಭಾಗಕ್ಕೂ ವ್ಯಾಪಿಸಿದೆ. ಈ ಕುರಿತು ʼಹುಲಿ ಸ್ಪಿರಿಟ್ಸ್‌ ಪ್ರೈವೇಟ್‌ ಲಿಮಿಟೆಡ್ʼ ಕಂಪನಿಯ ಅರುಣ ಅರಸ್‌ ಮಾಹಿತಿ ನೀಡಿದ್ದಾರೆ.

ಈಗ ಮಣಿಪಾಲ, ಉಡುಪಿ, ಮಂಗಳೂರು, ಪುತ್ತೂರು, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ರಾಮನಗರ ಹಾಗೂ ಬೆಂಗಳೂರಿಗೆ ವಿತರಿಸುವ ಎಲ್ಲ ಡಿಪೋಗಳಲ್ಲಿ ʼಹುಲಿʼ ಲಭಿಸಲಿದೆ.
| ಅರುಣ ಅರಸ್‌, ʼಹುಲಿ ಸ್ಪಿರಿಟ್ಸ್‌ ಪ್ರೈವೇಟ್‌ ಲಿಮಿಟೆಡ್ʼ ಕಂಪನಿ ಮುಖ್ಯಸ್ಥರು.

ಮೈಸೂರಿನಲ್ಲೇ ಸ್ಥಾಪಿಸಲಾಗಿರುವ ʼಹುಲಿ ಸ್ಪಿರಿಟ್ಸ್‌ ಪ್ರೈವೇಟ್‌ ಲಿಮಿಟೆಡ್‌ʼ ಕಂಪನಿ ಈ ಬೆಲ್ಲದ ರಮ್‌ ಉತ್ಪಾದಿಸುತ್ತಿದೆ. ʼಹುಲಿʼ ಎಂಬ ಬ್ರ್ಯಾಂಡ್‌ ನೇಮ್‌ನ ಈ ಜಾಗರಿ ರಮ್‌ ದಸರೆ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಿತ್ತು. ʼಹುಲಿʼ ರಮ್‌ನ ಮೊದಲ ಬ್ಯಾಚ್‌ನ ಎರಡು ಸಾವಿರ ಬಾಟಲಿಗಳು ಅಂದು ಮೈಸೂರು ಹಾಗೂ ಬೆಂಗಳೂರಿನ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದ್ದವು. 750 ಎಂ.ಎಲ್.‌ ಬಾಟಲಿಯಲ್ಲಿ ಲಭ್ಯ ಇರುವ ಈ ʼಹುಲಿʼ ಜಾಗರಿ ರಮ್‌ನ ಸದ್ಯದ ಬೆಲೆ 2,400 ರೂಪಾಯಿ ಆಗಿದೆ.

ಇದೂ ಓದಿ: ಇದು ಅಬಕಾರಿ ಇತಿಹಾಸದಲ್ಲೇ ದಾಖಲೆ!: ಮದ್ಯ ಖರೀದಿಗೆ ಸಾಲವೇ ಮಧ್ಯವರ್ತಿ; ಒಂದೇ ದಿನದಲ್ಲಿ ಮಾರಾಟವಾದ ಮದ್ಯವೆಷ್ಟು ಗೊತ್ತೇ?

ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ‌ ನೇತೃತ್ವ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ