ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೋಟೆಲುಗಳಲ್ಲಿ ಕಾಫಿ ಬೆಲೆ ಸದ್ಯದಲ್ಲೇ ಏರಿಕೆ ಆಗಲಿದೆ. ಈ ಕುರಿತು ಬೆಂಗಳೂರು ಹೋಟೆಲುಗಳ ಸಂಘದವರೇ ಮಾಹಿತಿ ನೀಡಿದ್ದಾರೆ.
ಕಾಫಿ ಪುಡಿ ಬೆಲೆ ಫೆಬ್ರವರಿ ತಿಂಗಳಾಂತ್ಯಕ್ಕೆ ಒಂದು ಕೆ.ಜಿ.ಗೆ 100 ಏರಿಕೆ ಆಗಲಿದೆ. ಮಾರ್ಚ್‌ನಲ್ಲೂ ಒಂದು ಕೆ.ಜಿ. 100 ಏರಿಕೆ ಆಗಲಿದೆ. ಈ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಹಾಗೂ ಕಾಫಿ ಮಂಡಳಿ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಹೋಟೆಲುಗಳಲ್ಲಿನ ಕಾಫಿ ಬೆಲೆ ಏರಿಕೆಯೂ ಅನಿವಾರ್ಯ ಆಗಲಿದೆ.
ಬೆಂಗಳೂರು ನಗರದಲ್ಲಿ ಅತ್ಯುತ್ತಮ ಫಿಲ್ಟರ್ ಕಾಫಿ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿರುವುದು ಹೆಮ್ಮೆಯ ವಿಷಯ. ಇತ್ತೀಚಿಗೆ ಕಾಫಿ ಪುಡಿ ಬೆಲೆ ದಿನೇದಿನೇ ಗಗನಕ್ಕೆ ಏರುತ್ತಿದೆ. ಇದರ ಜೊತೆಗೆ ಹಾಲಿನ ಬೆಲೆ ಕೂಡ ಏರಿಕೆ ಆಗುವ ಸಂಭವವಿದೆ. ಹೀಗಾಗಿ ಕಾಫಿ ಬೆಲೆಯನ್ನು ಕನಿಷ್ಠ ಶೇ.10ರಿಂದ15ರಷ್ಟು ಏರಿಸುವುದು ಅನಿವಾರ್ಯ ಆಗಬಹುದು ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಅವರು ತಿಳಿಸಿದ್ದಾರೆ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ ನೇತೃತ್ವ
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್