ಬೆಂಗಳೂರು: ರಾಜಧಾನಿಯಲ್ಲಿನ ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್‌ಎ) ಹೋಟೆಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ʼಬಿಎಚ್‌ಎ ಆಹಾರ ಪ್ರಶಸ್ತಿ-೨೦೨೫ʼ (ಬಿಎಚ್‌ಎ ಫುಡ್ ಅವಾರ್ಡ್ಸ್-2025) ಕಾರ್ಯಕ್ರಮ ಆಯೋಜಿಸಿದ್ದು, ಆ ಕುರಿತ ನಾಮನಿರ್ದೇಶನ ಆರಂಭಗೊಂಡಿದೆ.
ಹೋಟೆಲ್ ಕ್ಷೇತ್ರಕ್ಕೆ ಸಂಬಂಧಿಸಿ ಆಯೋಜಿಸಲಾಗಿರುವ ಈ ಸಮಾರಂಭದಲ್ಲಿ ಹೋಟೆಲೋದ್ಯಮದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಬಿಎಚ್‌ಎ ಸದಸ್ಯತ್ವ ಇರುವ ಹೋಟೆಲ್‌ಗಳು ಹಾಗೂ ಹೋಟೆಲಿಗರು ಈ ಪ್ರಶಸ್ತಿಗೆ ಅರ್ಹ ಇರುತ್ತಾರೆ. ಪ್ರಶಸ್ತಿಗಾಗಿ ನಾಮನಿರ್ದೇಶನ ಆರಂಭಗೊಂಡಿದ್ದು, ನಾಮನಿರ್ದೇಶನ ಸಲ್ಲಿಸಲು ಫೆ.28 ಕೊನೆಯ ದಿನಾಂಕವಾಗಿದೆ. ಇನ್ನೂ ಬಿಎಚ್‌ಎ ಸದಸ್ಯರಾಗದೇ ಇರುವವರು ಸದಸ್ಯತ್ವ ಪಡೆದು ನಾಮನಿರ್ದೇಶನ ಸಲ್ಲಿಸಬಹುದು.

ನಿಮ್ಮ ಹೋಟೆಲ್ ಕನ್ನಡ.ಕಾಮ್‌ಗೆ ಜಾಹೀರಾತು ನೀಡಿ ಪ್ರೋತ್ಸಾಹಿಸಿ..
ಬೆಸ್ಟ್ ಕ್ಯೂಎಸ್‌ಆರ್, ಬೆಸ್ಟ್ ಫೈನ್ ಡೈನ್, ಬೆಸ್ಟ್ ಸೌಥ್ ಇಂಡಿಯನ್, ಬೆಸ್ಟ್ ನಾರ್ಥ್ ಇಂಡಿಯನ್, ಬೆಸ್ಟ್ ಕರಾವಳಿ (ಸೀ ಫುಡ್), ಬೆಸ್ಟ್ ಕರ್ನಾಟಕ, ಬೆಸ್ಟ್ ಆಂಧ್ರ ಸ್ಟೈಲ್, ಬೆಸ್ಟ್ ಬಿರಿಯಾನಿ, ಬೆಸ್ಟ್ ದೋಸೆ, ಬೆಸ್ಟ್ ಇಡ್ಲಿ, ಬೆಸ್ಟ್ ಕಾಫಿ, ಬೆಸ್ಟ್ ಬೇಕರಿ, ಬೆಸ್ಟ್ ಸ್ವೀಟ್ಸ್ & ಸವರೀಸ್, ಬೆಸ್ಟ್ ಹೋಟೆಲ್ (ಅಕಮಡೇಷನ್/ರೂಮ್), ಬೆಸ್ಟ್ ವಿಮೆನ್ ಹೋಟೆಲಿಯರ್, ಬೆಸ್ಟ್ ಎಮರ್ಜಿಂಗ್ ಹೋಟೆಲಿಯರ್/ಹೋಟೆಲ್, ಬೆಸ್ಟ್ ಹೆರಿಟೇಜ್/ಲೆಗಸಿ ಹೋಟೆಲ್ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9738762671 ಸಂಪರ್ಕಿಸಿ.
ಬಿಎಚ್‌ಎ ಅವಾರ್ಡ್ಸ್‌ಗೆ ನಾಮನಿರ್ದೇಶನ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
ʼಬಿಎಚ್‌ಎ ಫುಡ್ ಅವಾರ್ಡ್ಸ್ʼ ಪ್ರದಾನ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದ ʼಪ್ರಿನ್ಸೆಸ್ ಶ್ರೈನ್ʼನಲ್ಲಿ ಮಾ.25ರಂದು ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಅತಿಥಿ-ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.

ನಾಮನಿರ್ದೇಶನ ಪತ್ರದ ಪ್ರತಿ ಹೀಗಿದೆ..


ಇದೂ ಓದಿ: ತಿನಿಸುಪ್ರಿಯರೇ ಗಮನಿಸಿ..: ʼರಜತಗಿರಿ ಪ್ಯಾಲೇಸ್ʼನಲ್ಲಿ ನಡೆಯಲಿದೆ ʼಅವರೆ ತಿಂಡಿ ಮೇಳʼ
ಇದೂ ಓದಿ: ವಿದ್ಯಾರ್ಥಿ ಭವನದ ಎದುರು ʼಇಡ್ಲಿ-ಸಾಂಬಾರ್, ದೋಸೆ-ಚಟ್ನಿʼಯಲ್ಲೇ ಯೋಗರಾಜ್ ಭಟ್ಟರ ಸಂಗೀತ ಪಾಕ!
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್