ಪಣಜಿ: ಒಂದು ರಾಜ್ಯದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಳಿತ ಉಂಟಾಗುವುದು ಹಲವಾರು ಸಂಗತಿಗಳನ್ನು ಅವಲಂಬಿಸಿರುತ್ತದೆ. ಆದರೆ ಇಲ್ಲೊಂದು ಕಡೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಲು ಇಡ್ಲಿ-ಸಾಂಬಾರ್ ಕಾರಣ ಎಂಬ ಆರೋಪ ಹೊರಿಸಲಾಗಿದೆ. ಅದರಲ್ಲೂ ಜನಪ್ರತಿನಿಧಿಯೊಬ್ಬರು ಇಂಥದ್ದೊಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಹೀಗೊಂದು ಹೇಳಿಕೆಯನ್ನು ನೀಡಿರುವುದು ಗೋವಾದ ಬಿಜೆಪಿ ಶಾಸಕರಾದ ಮೈಕೆಲ್ ಲೋಬೋ. ಗೋವಾದ ಕಾಲಂಗುಟ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಗೋವಾದಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಲು ಇಡ್ಲಿ-ಸಾಂಬಾರ್, ವಡಾ ಪಾವ್ ಕಾರಣ ಎಂದು ಅವರು ಹೇಳಿದ್ದಾರೆ.
ಹೋಟೆಲ್ ಕನ್ನಡ.ಕಾಮ್‌ಗೆ ಜಾಹೀರಾತು ನೀಡಿ ಪ್ರೋತ್ಸಾಹಿಸಿ..
ಕರಾವಳಿ ರಾಜ್ಯವಾದ ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಆಗಲು ಸರ್ಕಾರವೊಂದೇ ಕಾರಣವಲ್ಲ. ಬರೀ ಸರ್ಕಾರವನ್ನು ದೂಷಿಸುವುದು ಸರಿಯಲ್ಲ, ಪ್ರವಾಸಿಗರ ಸಂಖ್ಯೆ ಇಳಿಕೆ ವಿಷಯದಲ್ಲಿ ಎಲ್ಲರೂ ಸಮಾನ ಪಾಲುದಾರರಾಗಿರುತ್ತಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಬಂದ ಕೆಲವರು ಇಲ್ಲಿನ ಹೋಟೆಲ್‌ನಲ್ಲಿ ಸ್ನ್ಯಾಕ್ಸ್‌ಗೆ ವಡಾ-ಪಾವ್ ನೀಡುತ್ತಿದ್ದಾರೆ. ಇನ್ನು ಕೆಲವರು ಇಡ್ಲಿ-ಸಾಂಬಾರ್ ನೀಡುತ್ತಿದ್ದಾರೆ. ಅದೇ ಕಾರಣಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಶಾಸಕ ಮೈಕೆಲ್ ಲೋಬೋ ಆರೋಪಿಸಿದ್ದಾರೆ. ಆದರೆ ಪ್ರವಾಸಿಗರ ಇಳಿಕೆಯಲ್ಲಿ ಇಡ್ಲಿ-ಸಾಂಬಾರ್ ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಎಂಬುದನ್ನು ಅವರು ವಿವರಿಸಿಲ್ಲ. -ಏಜೆನ್ಸೀಸ್
ಇದೂ ಓದಿ: ಹೋಟೆಲ್ ಕ್ಷೇತ್ರಕ್ಕಾಗಿ ʼಬಿಎಚ್‌ಎ ಫುಡ್ ಅವಾರ್ಡ್ಸ್-2025ʼ: ನಾಮನಿರ್ದೇಶನ ಸಲ್ಲಿಸಲು ಇಲ್ಲಿದೆ ವಿವರ, ಅವಕಾಶ..
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಸದಂತೆ ನಿಷೇಧ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್