ಬೆಂಗಳೂರು: ರಾಜಧಾನಿಯಲ್ಲಿನ ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್‌ಎ) ಹೋಟೆಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀಡುವ ʼಬಿಎಚ್‌ಎ ಆಹಾರ ಪ್ರಶಸ್ತಿ-೨೦೨೫ʼ (ಬಿಎಚ್‌ಎ ಫುಡ್ ಅವಾರ್ಡ್ಸ್-2025) ಪ್ರದಾನ ಕಾರ್ಯಕ್ರಮ ಇದೇ ಮಾ.25ರ ಮಂಗಳವಾರ ನಡೆಯಲಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಚಿತ್ರನಟ-ನಿರ್ದೇಶಕ ಉಪೇಂದ್ರ, ಚಿತ್ರನಟ ವಿಜಯ ರಾಘವೇಂದ್ರ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕೃಷ್ಣನ್ ಹರಿಹರ ಶರ್ಮಾ ಅವರು ಗಣ್ಯ ಅತಿಥಿಗಳಾಗಿ ಭಾಗವಹಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅಲ್ಲದೆ, ಫುಡ್ ಲವರ್ಸ್ ಟಿವಿ ಸಂಸ್ಥಾಪಕ ಕೃಪಾಲ್ ಅಮನ್ನ, ಬ್ಲಾಗರ್ ಧರ್ಮೇಂದ್ರ ಕುಮಾರ್, ಚಿತ್ರನಟ-ಸೆಲೆಬ್ರಿಟಿ ಶೆಫ್ ಸಿಹಿಕಹಿ ಚಂದ್ರು, ಬಿಎಚ್‌ಎ ಫುಡ್ ಅವಾರ್ಡ್ಸ್ ಚೀಫ್ ಜ್ಯೂರಿ ಪಿ.ಕೆ. ಮೋಹನ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಅರಮನೆ ಮೈದಾನದಲ್ಲಿನ ಗೇಟ್ ನಂ. 9ರ ಪ್ರಿನ್ಸೆಸ್ ಶ್ರೈನ್‌ನಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, 5 ಗಂಟೆಗೆ ಉದ್ಘಾಟನೆ ನಡೆಯಲಿದೆ. 5.15ರಿಂದ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಬೆಂಗಳೂರು ಹೋಟೆಲುಗಳ ಸಂಘ ತಿಳಿಸಿದೆ.
ಬೆಸ್ಟ್ ಕ್ಯೂಎಸ್‌ಆರ್, ಬೆಸ್ಟ್ ಫೈನ್ ಡೈನ್, ಬೆಸ್ಟ್ ಸೌಥ್ ಇಂಡಿಯನ್, ಬೆಸ್ಟ್ ನಾರ್ಥ್ ಇಂಡಿಯನ್, ಬೆಸ್ಟ್ ಕರಾವಳಿ (ಸೀ ಫುಡ್), ಬೆಸ್ಟ್ ಕರ್ನಾಟಕ, ಬೆಸ್ಟ್ ಆಂಧ್ರ ಸ್ಟೈಲ್, ಬೆಸ್ಟ್ ಬಿರಿಯಾನಿ, ಬೆಸ್ಟ್ ದೋಸೆ, ಬೆಸ್ಟ್ ಇಡ್ಲಿ, ಬೆಸ್ಟ್ ಕಾಫಿ, ಬೆಸ್ಟ್ ಬೇಕರಿ, ಬೆಸ್ಟ್ ಸ್ವೀಟ್ಸ್ & ಸವರೀಸ್, ಬೆಸ್ಟ್ ಹೋಟೆಲ್ (ಅಕಮಡೇಷನ್/ರೂಮ್), ಬೆಸ್ಟ್ ವಿಮೆನ್ ಹೋಟೆಲಿಯರ್, ಬೆಸ್ಟ್ ಎಮರ್ಜಿಂಗ್ ಹೋಟೆಲಿಯರ್/ಹೋಟೆಲ್, ಬೆಸ್ಟ್ ಹೆರಿಟೇಜ್/ಲೆಗಸಿ ಹೋಟೆಲ್ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ರಾಜ್ಯದಲ್ಲಿ ಉತ್ಪಾದನೆ-ಮಾರಾಟ ಆಗುವ ಎಲ್ಲ ಉತ್ಪನ್ನಗಳ ಮೇಲೆ ಇನ್ನು ಕನ್ನಡದಲ್ಲಿ ಹೆಸರು ಕಡ್ಡಾಯ; ಸರ್ಕಾರದ ಆದೇಶ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!