ಬೆಂಗಳೂರು: ರಾಜಧಾನಿಯಲ್ಲಿನ ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್‌ಎ) ಹೋಟೆಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀಡುವ ʼಬಿಎಚ್‌ಎ ಆಹಾರ ಪ್ರಶಸ್ತಿ-೨೦೨೫ʼ (ಬಿಎಚ್‌ಎ ಫುಡ್ ಅವಾರ್ಡ್ಸ್-2025) ಪ್ರದಾನ ಕಾರ್ಯಕ್ರಮ ಮಾ.25ರ ಮಂಗಳವಾರ ಅರಮನೆ ಮೈದಾನದಲ್ಲಿ ನಡೆಯಿತು.
ಅರಮನೆ ಮೈದಾನದಲ್ಲಿನ ಗೇಟ್ ನಂ. 9ರ ಪ್ರಿನ್ಸೆಸ್ ಶ್ರೈನ್‌ನಲ್ಲಿ ಮಂಗಳವಾರ ಸಂಜೆಯಿಂದ ನಡೆದ ಈ ಸಮಾರಂಭದಲ್ಲಿ ಹೋಟೆಲುಗಳ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಿತ್ರನಟ ವಿಜಯ ರಾಘವೇಂದ್ರ, ಕಾಂಗ್ರೆಸ್ ಮುಖಂಡ ಶಂಕರ್ ಗುಹಾ ದ್ವಾರಕನಾಥ್, ನಟ ಸಿಹಿಕಹಿ ಚಂದ್ರು, ಎಫ್‌ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ, ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, ಕರ್ನಾಟಕ ರಾಜ್ಯ ಹೋಟೆಲುಗಳ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ)ದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಎನ್. ವೀರೇಂದ್ರ ಕಾಮತ್, ಉಪಾಧ್ಯಕ್ಷರಾದ ಶಕೀರ್ ಹಕ್, ಎ. ಶಂಕರ್ ಕುಂದರ್, ಜಂಟಿ ಕಾರ್ಯದರ್ಶಿಗಳಾದ ಬಿ.ಎಂ. ಧನಂಜಯ, ಎ.ಎಲ್. ರಾಕೇಶ್, ಎಸ್.ಪಿ. ಕೃಷ್ಣರಾಜ್, ಶೇಖರ್ ನಾಯ್ಡು, ಕೋಶಾಧಿಕಾರಿ ಜಿ. ಸುಧಾಕರ ಶೆಟ್ಟಿ, ಬಿಎಚ್‌ಎ ಫುಡ್ ಅವಾರ್ಡ್ಸ್ ಸಮಿತಿ ಅಧ್ಯಕ್ಷ ಅರುಣ್ ಅಡಿಗ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಮುಂತಾದವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹೋಟೆಲ್‌ಗಳ ಮಾಲೀಕರು ಅನ್ನದಾತರು. ಗ್ರಾಹಕರಿಗೆ ಗುಣಮಟ್ಟದ ಆಹಾರ ಒದಗಿಸುತ್ತಿದ್ದಾರೆ. ಹೋಟೆಲ್ ಉದ್ಯಮ ಇನ್ನಷ್ಟು ಬೆಳೆಯುವಂತಾಗಬೇಕು.
| ವಿಜಯ ರಾಘವೇಂದ್ರ, ಚಿತ್ರನಟ.
ತಿನಿಸು ಕೊಡುವ ನಗರ ಬೆಂಗಳೂರು. ಆತಿಥ್ಯ ಕ್ಷೇತ್ರದಲ್ಲಿ ಹೋಟೆಲ್‌ಗಳು ವಿಶೇಷವಾಗಿ ಕಾರ್ಯನಿರ್ವಹಿಸುತ್ತಿವೆ. ಸಂಘಟನೆ ಬಲಗೊಳಿಸಲು ಸದಸ್ಯರು ಹೆಚ್ಚಾಗಬೇಕು. ಆಗ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸಲು ಬಲ ಸಿಗಲಿದೆ. ಕಳೆದ ವರ್ಷ ಸಿಲಿಕಾನ್ ಸಿಟಿಯಲ್ಲಿ 130 ಹೋಟೆಲ್‌ಗಳು ಆರಂಭವಾಗಿವೆ. ಈ ವರ್ಷ ಪ್ರತಿನಿತ್ಯ, 2 ದಿನಕ್ಕೆ ಒಂದು ಹೋಟೆಲ್ ಶುರುವಾಗಲಿ.
| ಪಿ.ಸಿ.ರಾವ್, ಗೌರವಾಧ್ಯಕ್ಷ, ಬೆಂಗಳೂರು ಹೋಟೆಲುಗಳ ಸಂಘ.
ನಮ್ಮ ಉದ್ಯಮದಲ್ಲಿ ಶುಚಿ-ರುಚಿ ಕಾಪಾಡಿಕೊಳ್ಳಲು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಹೊರಡಿಸಿರುವ ಸುತ್ತೋಲೆಗೆ ತಕ್ಕಂತೆ ಗುಣಮಟ್ಟ ಕಾಪಾಡಲು ಈ ಕಾರ್ಯಕ್ರಮ ಮಾಡಲಾಗಿದೆ. ಬೆಂಗಳೂರು ಆಹಾರ ಉದ್ಯಮವು ದೇಶದ ಅತ್ಯುತ್ತಮ ಉದ್ಯಮವಾಗಿದ್ದು, ಮುಂದಿನ ಬಾರಿ ಈ ಸಮಾರಂಭವನ್ನು ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುವುದು.
| ಜಿ.ಕೆ. ಶೆಟ್ಟಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಹೋಟೆಲುಗಳ ಮಾಲೀಕರ ಸಂಘ.

ಬಿಎಚ್‌ಎ ಆಹಾರ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಬೆಸ್ಟ್ ಕ್ಯೂಎಸ್‌ಆರ್: ದಿ ಮೀನಾಕ್ಷಿ ಕಾಫಿ ಬಾರ್, ರಾಜಾಜಿನಗರ.
- ಬೆಸ್ಟ್ ಫೈನ್ ಡೈನ್: ವೈಟ್ ಗಾರ್ಡನ್, ಕಲ್ಯಾಣನಗರ.
- ಬೆಸ್ಟ್ ಸೌಥ್ ಇಂಡಿಯನ್: ನಮ್ಮ ಅಡಿಗಾಸ್, ರಘುವನಹಳ್ಳಿ.
- ಬೆಸ್ಟ್ ನಾರ್ಥ್ ಇಂಡಿಯನ್: ತಂದೂರಿ ಥಾಲ್, ಇಂದಿರಾನಗರ.
- ಬೆಸ್ಟ್ ಕರಾವಳಿ (ಸೀ ಫುಡ್): ಆರ್ನಾ ಮಲ್ಟಿಕ್ಯುಸೈನ್ ರೆಸ್ಟೋರೆಂಟ್
- ಬೆಸ್ಟ್ ಕರ್ನಾಟಕ: ಹೋಟೆಲ್ ಆದಿತ್ಯ ನಾಟಿ ಶೈಲಿ, ಮಹಾಲಕ್ಷ್ಮೀಪುರ.
- ಬೆಸ್ಟ್ ಆಂಧ್ರ ಸ್ಟೈಲ್: ನಂದನ ಪ್ಯಾಲೇಸ್, ಯಲಹಂಕ.
- ಬೆಸ್ಟ್ ಬಿರಿಯಾನಿ: ಇಂಪೀರಿಯೋ ರೆಸ್ಟೋರೆಂಟ್, ಬ್ರೂಕ್‌ಫೀಲ್ಡ್.
- ಬೆಸ್ಟ್ ದೋಸೆ: ಚಿಕ್ಕಣ್ಣ ಟಿಫನ್ ರೂಂ, ಕಬ್ಬನ್‌ಪೇಟೆ.
- ಬೆಸ್ಟ್ ಇಡ್ಲಿ: ಬ್ರಾಹ್ಮಿನ್ಸ್ ಕಾಫಿ ಬಾರ್, ಶಂಕರಪುರ.
- ಬೆಸ್ಟ್ ಕಾಫಿ: ಮಾತಾಸ್ ಕಾಫಿ, ಜಯನಗರ.
- ಬೆಸ್ಟ್ ಬೇಕರಿ: ಷೆಫ್ ಬೇಕರ್ಸ್, ದೊಡ್ಡನೆಕ್ಕುಂದಿ.
- ಬೆಸ್ಟ್ ಕೆಫೆ: ಟಿಎಫ್‌ಜಿ ಕೆಫೆ, ಜೆ.ಪಿ.ನಗರ.
- ಬೆಸ್ಟ್ ಐಸ್‌ಕ್ರೀಮ್ಸ್: ಚರ್ನ್, ಆರ್‌ಎಂವಿ 2ನೇ ಹಂತ.
- ಬೆಸ್ಟ್ ಸ್ವೀಟ್ಸ್ & ಸವರೀಸ್: ಆನಂದ್ ಸ್ವೀಟ್ಸ್, ರಘುವನಹಳ್ಳಿ.
- ಬೆಸ್ಟ್ ವಿಮೆನ್ ಹೋಟೆಲಿಯರ್: ಪ್ರಿಯಾಂಕ ರುದ್ರಪ್ಪ, ಕೆಫೆ ಅಮುದಂ.
- ಬೆಸ್ಟ್ ಎಮರ್ಜಿಂಗ್ ಹೋಟೆಲಿಯರ್/ಹೋಟೆಲ್: ದಿ ರಾಮೇಶ್ವರಂ ಕೆಫೆ.
- ಬೆಸ್ಟ್ ಹೆರಿಟೇಜ್/ಲೆಗಸಿ ಹೋಟೆಲ್: ಹೋಟೆಲ್ ದ್ವಾರಕ, ಬಸವನಗುಡಿ.
- ಬೆಸ್ಟ್ ಹೋಟೆಲ್ (ಹಾಸ್ಪಿಟಾಲಿಟಿ & ರೂಮ್ಸ್): ಲಾ ಮಾರ್ವೆಲ್ಲ, ಜಯನಗರ.
- ಜ್ಯೂರಿ ರೆಕಮಂಡೆಡ್ ಬೆಸ್ಟ್ ಕಾಫಿ ಎಕ್ಸ್‌ಪೀರಿಯನ್ಸ್ ಸೆಂಟರ್: ಬೆಂಕಿ ಕಾಫಿ, ಜಯನಗರ.
- ಜ್ಯೂರಿ ರೆಕಮಂಡೆಡ್ ಡೈನಾಮಿಕ್ ವುಮನ್ ಹೋಟೆಲಿಯರ್: ಶ್ರುತಿ ಎಚ್.ಜಿ., ಆಲ್ಫಾ ಸೂಟ್ಸ್.
- ಲೈಫ್‌ಟೈಮ್ ಅಚೀವ್‌ಮೆಂಟ್: ನೀಲಾವರ ಸಂಜೀವ್ ರಾವ್, ಹಳ್ಳಿಮನೆ, ಮಲ್ಲೇಶ್ವರ.



ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ರಾಜ್ಯದಲ್ಲಿ ಉತ್ಪಾದನೆ-ಮಾರಾಟ ಆಗುವ ಎಲ್ಲ ಉತ್ಪನ್ನಗಳ ಮೇಲೆ ಇನ್ನು ಕನ್ನಡದಲ್ಲಿ ಹೆಸರು ಕಡ್ಡಾಯ; ಸರ್ಕಾರದ ಆದೇಶ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ