ಬೆಂಗಳೂರು: ಈಗಾಗಲೇ ಹಲವು ಬೆಲೆ ಏರಿಕೆಗಳ ಬರೆಯಿಂದ ತತ್ತರಿಸಿರುವ ಹೋಟೆಲಿಗರಿಗೆ ಸದ್ಯದಲ್ಲೇ ಇನ್ನೊಂದು ಬೆಲೆ ಏರಿಕೆ ಬರೆ ಬೀಳಲಿರುವುದು ನಿಚ್ಚಳವಾಗಿದೆ.
ಏಕೆಂದರೆ, ಹಾಲಿನ ದರವನ್ನು ಪ್ರತಿ ಲೀಟರ್ಗೆ ನಾಲ್ಕು ರೂಪಾಯಿಯಂತೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. ಪರಿಣಾಮವಾಗಿ, ಕಾಫಿ-ಟೀ ಬೆಲೆಯನ್ನು ಏರಿಸುವುದು ಹೋಟೆಲಿಗರಿಗೆ ಅನಿವಾರ್ಯ ಆಗುವ ಲಕ್ಷಣಗಳು ಗೋಚರಿಸಿವೆ.
ಇದೂ ಓದಿ: ಬಿಎಚ್‌ಎ ಫುಡ್ ಅವಾರ್ಡ್ಸ್-2025 ಪ್ರದಾನ; ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ವಿವರ..