ನವದೆಹಲಿ: ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಆಹಾರ ಬಿಲ್‌ಗಳ ಮೇಲೆ ಸೇವಾ ಶುಲ್ಕ (ಸರ್ವಿಸ್ ಚಾರ್ಜ್) ಕಡ್ಡಾಯವಾಗಿ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರದಂದು ಮಹತ್ವದ ತೀರ್ಪು ನೀಡಿದೆ.
ಗ್ರಾಹಕರು ಸೇವಾ ಶುಲ್ಕ ಪಾವತಿಸುವುದು ಸಂಪೂರ್ಣ ಸ್ವಯಂಪ್ರೇರಿತವಾಗಿದ್ದು, ಇದನ್ನು ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ನವರು ಒತ್ತಾಯಿಸಲಾಗದು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ತೀರ್ಪು ಪ್ರಕಟಿಸಿದ್ದಾರೆ.
ಈ ತೀರ್ಪು, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಹೊರಡಿಸಿದ್ದ ಮಾರ್ಗಸೂಚಿಗಳನ್ನು ಸವಾಲು ಮಾಡಿ ಹೋಟೆಲಿಗರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಕಡ್ಡಾಯ ಸರ್ವಿಸ್ ಚಾರ್ಜ್ ವಿಧಿಸುವುದನ್ನು ಸಿಸಿಪಿಎ ಮಾರ್ಗಸೂಚಿಗಳು ನಿಷೇಧಿಸಿದ್ದವು.
ಈ ಆದೇಶವನ್ನು ಪ್ರಶ್ನಿಸಿ ರೆಸ್ಟೋರೆಂಟ್ ಸಂಘಟನೆಗಳು ನ್ಯಾಯಾಲಯವನ್ನು ಸಂಪರ್ಕಿಸಿದ್ದವು. ಆದರೆ, ನ್ಯಾಯಾಲಯವು ಗ್ರಾಹಕರ ಪರವಾಗಿ ತೀರ್ಮಾನ ಕೈಗೊಂಡಿದ್ದು, ಸರ್ವಿಸ್ ಚಾರ್ಜ್ ಪಾವತಿ ಗ್ರಾಹಕರ ಇಚ್ಛೆಗೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿದೆ.
ಈ ತೀರ್ಪು ಗ್ರಾಹಕರ ಹಕ್ಕುಗಳನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗಿದೆ. ಇದರಿಂದ ರೆಸ್ಟೋರೆಂಟ್‌ಗಳು ತಮ್ಮ ಬಿಲ್‌ಗಳಲ್ಲಿ ಸರ್ವಿಸ್ ಚಾರ್ಜ್ ಸೇರಿಸಿದರೂ, ಅದನ್ನು ಪಾವತಿಸುವ ಒತ್ತಡವನ್ನು ಗ್ರಾಹಕರ ಮೇಲೆ ಹೇರುವಂತಿಲ್ಲ ಎಂಬುದು ದೃಢವಾಗಿದೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ರಾಜ್ಯದಲ್ಲಿ ಉತ್ಪಾದನೆ-ಮಾರಾಟ ಆಗುವ ಎಲ್ಲ ಉತ್ಪನ್ನಗಳ ಮೇಲೆ ಇನ್ನು ಕನ್ನಡದಲ್ಲಿ ಹೆಸರು ಕಡ್ಡಾಯ; ಸರ್ಕಾರದ ಆದೇಶ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!