ಬೆಂಗಳೂರು: ದಕ್ಷಿಣ ಭಾರತದ ಬೃಹತ್ ಎಲ್‌ಪಿಜಿ ಸಾಗಣೆ ಮಾಲೀಕರ ಸಂಘವು ಹೊಸ ಟೆಂಡರ್ ನಿಯಮಗಳ ವಿರುದ್ಧ ಮಾರ್ಚ್ 27ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪುದುಚೇರಿಯ 5,500ಕ್ಕೂ ಹೆಚ್ಚು ಟ್ಯಾಂಕರ್‌ಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿವೆ.
ಎರಡು ಆ್ಯಕ್ಸಲ್ ಟ್ರಕ್‌ಗಳ ನಿಷೇಧ, ಮೂರು ಆ್ಯಕ್ಸಲ್ ಟ್ರಕ್‌ಗಳ ಕಡ್ಡಾಯ, ಪರ್ಯಾಯ ಚಾಲಕ ಅಥವಾ ಸಹಾಯಕ ಇಲ್ಲದಿದ್ದರೆ 20,000 ರೂ. ದಂಡ ಮತ್ತು ಸಣ್ಣ ಅಪಘಾತಗಳಲ್ಲಿ ಭಾಗಿಯಾದ ಟ್ರಕ್‌ಗಳಿಗೆ ಮೂರು ವರ್ಷ ಟೆಂಡರ್ ನಿಷೇಧದಂತಹ ಹೊಸ ನಿಯಮಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗಿದೆ.
ಈ ಮುಷ್ಕರ ಮಾರ್ಚ್ 27ರ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿದ್ದು, ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ತೈಲ ಕಂಪನಿಗಳೊಂದಿಗಿನ ಮಾತುಕತೆ ವಿಫಲವಾದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಸುಂದರರಾಜನ್ ತಿಳಿಸಿದ್ದಾರೆ.
ಸದ್ಯ ದಾಸ್ತಾನಿದೆ, ಪೂರೈಕೆ ನಿಲ್ಲಲ್ಲ
ಎಲ್‌ಪಿಜಿ ಸಾಗಣೆದಾರ ಮಾಲೀಕರ ಸಂಘವು ನಡೆಸುತ್ತಿರುವ ಮುಷ್ಕರದ ಹೊರತಾಗಿಯೂ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ತೈಲ ಮಾರಾಟ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್ ತಿಳಿಸಿವೆ.
ತೈಲ ಮಾರಾಟ ಕಂಪನಿಗಳ ಬಾಟ್ಲಿಂಗ್ ಸ್ಥಾವರಗಳಲ್ಲಿ ಬೃಹತ್ ಪ್ರಮಾಣದ ಎಲ್‌ಪಿಜಿ ದಾಸ್ತಾನಿದೆ. ಎಲ್‌ಪಿಜಿ ವಿತರಕರು ಎಂದಿನಂತೆ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ, ಮುಷ್ಕರನಿರತ ಸಾಗಣೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳುವುದಾಗಿ ಈ ಸಂಸ್ಥೆಗಳು ತಿಳಿಸಿವೆ.
ಇದೂ ಓದಿ: ಹೋಟೆಲ್- ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಚಾರ್ಜ್ ಕಡ್ಡಾಯವಲ್ಲ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು
ಇದೂ ಓದಿ: ಬಿಎಚ್‌ಎ ಫುಡ್ ಅವಾರ್ಡ್ಸ್-2025 ಪ್ರದಾನ; ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ವಿವರ..
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?