ಒಳಗೇನಿದೆ!?

‘ಇಂಡಿಯಾ ಸ್ವೀಟ್‌ ಹೌಸ್‌’ನಿಂದ ಭರ್ಜರಿ ಆಫರ್; ತ್ವರೆ ಮಾಡಿ, ಮೂರು ದಿನಗಳು ಮಾತ್ರ…

ಬೆಂಗಳೂರು: ʼಇಂಡಿಯಾ ಸ್ವೀಟ್‌ ಹೌಸ್‌ʼ ಬೆಂಗಳೂರಿನ ಕನಕಪುರ ಮುಖ್ಯ ರಸ್ತೆಯಲ್ಲಿ ತನ್ನ ನೂತನ ಶಾಖೆಯ ಉದ್ಘಾಟನೆ ಸಲುವಾಗಿ ಭರ್ಜರಿ ಕೊಡುಗೆಗಳನ್ನು ನೀಡಲಿದೆ.

ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳಿಗೆ ಹೆಸರಾದ ʼಇಂಡಿಯಾ ಸ್ವೀಟ್ ಹೌಸ್ʼ ಕನಕಪುರ ಮುಖ್ಯ ರಸ್ತೆಯಲ್ಲಿ ವಾಜರಹಳ್ಳಿ ಮೆಟ್ರೋ ನಿಲ್ದಾಣ ಸಮೀಪದ ಡಿ-ಮಾರ್ಟ್‌ ಬಳಿ ತನ್ನ ಹೊಸ ಶಾಖೆ ಉದ್ಘಾಟಿಸಲು ಸಜ್ಜಾಗಿದೆ.

ನಾಳೆ ಅಂದರೆ ಏ. 4ರ ಶುಕ್ರವಾರ ಈ ಹೊಸ ಶಾಖೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಸಂಭ್ರಮದ ಸಂದರ್ಭದಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ.

ಈ ವಿಶೇಷ ಕೊಡುಗೆಗಳು ಉದ್ಘಾಟನೆಯ ದಿನದಿಂದ ಮೂರು ದಿನಗಳು ಅಂದರೆ ಏ.6ರ ವರೆಗೆ ಮಾತ್ರ ಇರಲಿವೆ. ಈ ಅವಧಿಯಲ್ಲಿ ಗ್ರಾಹಕರು ಒಂದು ಕೆ.ಜಿ. ಸಿಹಿತಿಂಡಿ ಖರೀದಿಸಿದರೆ, ಒಂದು ಕೆ.ಜಿ. ಸಿಹಿತಿಂಡಿ ಉಚಿತವಾಗಿ ಸಿಗಲಿದೆ. ಸ್ವೀಟ್‌ ಮಾತ್ರವಲ್ಲದೆ ಖಾರಕ್ಕೂ ಈ ಕೊಡುಗೆ ಅನ್ವಯಿಸಲಿದೆ. ಅದೇ ರೀತಿ ಒಂದು ಚಾಟ್‌ಗೆ ಇನ್ನೊಂದು ಚಾಟ್‌ ಕೂಡ ಉಚಿತವಾಗಿ ಲಭಿಸಲಿದೆ.  

ʼಇಂಡಿಯಾ ಸ್ವೀಟ್ ಹೌಸ್ʼ ಸಿಹಿತಿಂಡಿಗಳಿಗೆ ಹೆಸರುವಾಸಿ ಆಗಿದ್ದು, ಈ ಹೊಸ ಶಾಖೆ ಮೂಲಕ ಮತ್ತಷ್ಟು ಜನರಿಗೆ ರುಚಿಕರ ಮತ್ತು ಆರೋಗ್ಯಕರ ಸಿಹಿತಿನಿಸುಗಳನ್ನು ಒದಗಿಸುವ ಗುರಿ ಹೊಂದಿದೆ. ಸಾರ್ವಜನಿಕರು ಉದ್ಘಾಟನೆಯ ಸಂಭ್ರಮದಲ್ಲಿ ಭಾಗವಹಿಸಿ, ಈ ವಿಶೇಷ ಆಫರ್‌ನ ಪ್ರಯೋಜನ ಪಡೆಯಬಹುದು.

ಇದೂ ಓದಿ: ಈಗ ಕರಾವಳಿ-ಮಲೆನಾಡು ಸೇರಿ ರಾಜ್ಯದ ಹಲವೆಡೆ ಸಿಗಲಿದೆ ʼಹುಲಿʼ; ಕರ್ನಾಟಕದ್ದೇ ಆದ ʼಜಾಗರಿ ರಮ್‌ʼ ಮಾರುಕಟ್ಟೆ ವಿಸ್ತರಣೆ

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬಿಎಚ್‌ಎ ಫುಡ್‌ ಅವಾರ್ಡ್ಸ್-2025‌ ಪ್ರದಾನ; ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ವಿವರ..

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ