ಒಳಗೇನಿದೆ!?

ಎನ್‌ಆರ್‌ಎಐ-ಒಎನ್‌ಡಿಸಿ ಒಡನಾಟದಲ್ಲಿ ಒಡಕು ಮೂಡಿತಾ?; ಎರಡೂ ಕಡೆಯಿಂದ ಹೊರಹೊಮ್ಮಿತು ಸ್ಪಷ್ಟನೆ

ನವದೆಹಲಿ: ದೇಶಾದ್ಯಂತ ಆಹಾರ ವ್ಯವಹಾರಗಳ ಬೆಳವಣಿಗೆ ಮತ್ತು ಡಿಜಿಟಲ್ ಸಬಲೀಕರಣವನ್ನು ಬೆಂಬಲಿಸುವ ದೃಢವಾದ ಹಾಗೂ ಸಮಗ್ರ ಚೌಕಟ್ಟನ್ನು ರೂಪಿಸಲು ಎಂದಿಗಿಂತಲೂ ಹೆಚ್ಚು ಕಾರ್ಯತಂತ್ರವಾಗಿ ಒಟ್ಟಿಗೆ ಕೆಲಸ ಮಾಡಲಿರುವುದಾಗಿ ಭಾರತದ ರಾಷ್ಟ್ರೀಯ ರೆಸ್ಟೋರೆಂಟ್‌ಗಳ ಸಂಘ (ಎನ್‌ಆರ್‌ಎಐ) ಹಾಗೂ ಓಪನ್‌ ನೆಟ್‌ವರ್ಕ್‌ ಫಾರ್‌ ಡಿಜಿಟಲ್‌ ನೆಟ್‌ವರ್ಕ್‌ (ಒಎನ್‌ಡಿಸಿ) ತಿಳಿಸಿವೆ.

ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್(ಒಎನ್‌ಡಿಸಿ)ನಿಂದ ಎನ್‌ಆರ್‌ಎಐ ಹಿಂದೆ ಸರಿದಿದೆ ಎಂಬ ಹಿನ್ನೆಲೆಯಲ್ಲಿ ಈ ಎರಡೂ ಸಂಸ್ಥೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿ, ತಮ್ಮ ದೃಢವಾದ ಪಾಲುದಾರಿಕೆಯನ್ನು ಮರು ಪ್ರತಿಪಾದಿಸಿವೆ.

ಒಎನ್‌ಡಿಸಿ ಜೊತೆಗಿನ ನಮ್ಮ ಸಂಪರ್ಕವು ಉದ್ದೇಶಪೂರ್ವಕವಾಗಿದ್ದು, ಇನ್ನೂ ಚಲಾವಣೆಯಲ್ಲೇ ಇದೆ. ನಾವು ಪ್ರಸ್ತುತ ಕಾರ್ಯಸಾಧ್ಯ ಮತ್ತು ವಿಸ್ತರಿಸಬಹುದಾದ ಮಾದರಿಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಇದ್ದೇವೆ ಹಾಗೂ ಒಎನ್‌ಡಿಸಿಯ ಆಹಾರ ಮಂಡಳಿಯ ಮೂಲಕ ಚರ್ಚೆಗಳಲ್ಲಿ ತೊಡಗಿಕೊಂಡಿದ್ದೇವೆ. ಇದರಲ್ಲಿ ರೆಸ್ಟೋರೆಂಟ್ ಮಾಲೀಕರು, ನೆಟ್‌ವರ್ಕ್ ಭಾಗಿದಾರರು ಮತ್ತು ಎನ್‌ಆರ್‌ಎಐ ಸೇರಿದಂತೆ ಎಲ್ಲ ಪಾಲುದಾರರ ಭಾಗವಹಿಸುವಿಕೆ ಇದೆ ಎಂದು ಎನ್‌ಆರ್‌ಎಐ ಅಧ್ಯಕ್ಷ ಸಾಗರ್ ದಾರ್ಯಾನಿ ಹೇಳಿದ್ದಾರೆ.

ಒಎನ್‌ಡಿಸಿ ನೆಟ್‌ವರ್ಕ್‌ ಜೊತೆಗಿನ ಒಡನಾಟವು ಯಾವಾಗಲೂ ರೆಸ್ಟೋರೆಂಟ್‌ಗಳು ಸಮಾನ ಮತ್ತು ಪಾರದರ್ಶಕ ನಿಯಮಗಳಲ್ಲಿ ಡಿಜಿಟಲ್ ವಾಣಿಜ್ಯದಲ್ಲಿ ಭಾಗವಹಿಸಲು ಸಕ್ರಿಯಗೊಳಿಸುವ ದೊಡ್ಡ ದೃಷ್ಟಿಕೋನದಲ್ಲಿ ಬೇರೂರಿದೆ ಎಂದು ಸಾಗರ್‌ ಹೇಳಿದ್ದಾರೆ.

ನೆಟ್‌ವರ್ಕ್ ಪಕ್ವಗೊಂಡು ಅದರ ನಾಯಕತ್ವ ವಿಕಾಸಗೊಂಡಂತೆ, ಎನ್‌ಆರ್‌ಎಐ ತನ್ನ ಸದಸ್ಯರಿಗೆ ದೀರ್ಘಕಾಲೀನ ಮೌಲ್ಯ ಸೃಷ್ಟಿಯನ್ನು ಖಾತ್ರಿಪಡಿಸುವ ರೀತಿಯಲ್ಲಿ ತನ್ನ ಒಡನಾಟವನ್ನು ಸಂಘಟಿಸುತ್ತಿದೆ ಎಂದು ಅವರು ವಿವರಿಸಿದ್ದಾರೆ.

ನಾವು ಎನ್‌ಆರ್‌ಎಐ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಲ್ಲದೇ, ಲಕ್ಷಾಂತರ ರೆಸ್ಟೋರೆಂಟ್‌ಗಳು, ಆಹಾರ ಬ್ರ್ಯಾಂಡ್‌ಗಳು ತಮ್ಮದೇ ಆದ ನಿಯಮಗಳಲ್ಲಿ ಡಿಜಿಟಲ್ ವಾಣಿಜ್ಯದಲ್ಲಿ ಭಾಗವಹಿಸಲು ಸಬಲೀಕರಣಗೊಳಿಸುವ ಸಮಗ್ರ, ಪಾರದರ್ಶಕ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ ನೆಟ್‌ವರ್ಕ್ ನಿರ್ಮಿಸಲು ನಾವು ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆʼ ಎಂದು ಒಎನ್‌ಡಿಸಿಯ ಎಸ್‌ವಿಪಿ ಮರಿಚಿ ಮಾಥುರ್ ದನಿಗೂಡಿಸಿದ್ದಾರೆ.

ಈ ಪಾಲುದಾರಿಕೆ ಸಣ್ಣ ಸ್ಥಳೀಯ ಔಟ್‌ಲೆಟ್‌ಗಳಿಂದ ರಾಷ್ಟ್ರೀಯ ಬ್ರ್ಯಾಂಡ್‌ಗಳವರೆಗೆ ಎಲ್ಲ ಗಾತ್ರದ ಆಹಾರ ವ್ಯವಹಾರಗಳಿಗೆ ಪ್ರವೇಶ, ಗೋಚರತೆ ಮತ್ತು ಸಮಾನ ಬೆಳವಣಿಗೆಯನ್ನು ಉತ್ತೇಜಿಸಲು ನಿರ್ಣಾಯಕವಾಗಿದೆ. ನಾವು ಉದ್ಯಮದ ಪಾಲುದಾರರು ಮತ್ತು ಗ್ರಾಹಕರಿಗೆ ಲಾಭ ಒದಗಿಸುವ ನವೀನ ಮಾರ್ಗಗಳನ್ನು ಅನ್ವೇಷಿಸುತ್ತಿದ್ದೇವೆ ಎಂದು ಮಾಥುರ್‌ ತಿಳಿಸಿದ್ದಾರೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಹೋಟೆಲ್‌ಗಳಲ್ಲಿ ನೀವು ಸೇವಿಸುವ ಪನೀರ್‌ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?

ಇದೂ ಓದಿ:ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ‌ ನೇತೃತ್ವ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ