ಲೇಹ್: ವಿಮಾನ ಸಂಚಾರದಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ತೊಂದರೆಗೆ ಸಿಲುಕಿರುವ ಪ್ರವಾಸಿಗರಿಗೆ ನೆರವಾಗಲು ಸ್ಥಳೀಯ ಹೋಟೆಲ್ ಹಾಗೂ ವಸತಿ ಗೃಹಗಳ ಮಾಲೀಕರು ಉಚಿತ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದ್ದಾರೆ. ʼಆಪರೇಷನ್ ಸಿಂಧೂರʼ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿನ ವಿಮಾನಗಳ ಹಾರಾಟ ರದ್ದುಗೊಂಡಿದ್ದರಿಂದ ಸಂಚಾರದಲ್ಲಿ ತೀವ್ರ ವ್ಯತ್ಯಯವಾದ ಕಾರಣ ಈ ಕ್ರಮಕೈಗೊಳ್ಳಲಾಗಿದೆ.
ಲಡಾಖ್‌ನಲ್ಲಿ ವಿಮಾನ ಸಂಚಾರದಲ್ಲಿ ಉಂಟಾಗಿರುವ ಅಡಚಣೆಯಿಂದಾಗಿ ಆಲ್ ಲಡಾಖ್ ಹೊಟೇಲ್ ಆ್ಯಂಡ್ ಗೆಸ್ಟ್ ಹೌಸ್ ಅಸೋಸಿಯೇಷನ್ (ALHGHA) ಪ್ರವಾಸಿಗರಿಗೆ ಸಹಾಯ ಮಾಡಲು ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಸಂಘದ ಅಧ್ಯಕ್ಷ ರಿಗ್ಮಿನ್ ವಾಂಗ್ಮೊ ಲಾಚಿಕ್ ತಿಳಿಸಿದ್ದಾರೆ.
ಪ್ರಸ್ತುತ ಹಾರಾಟ ರದ್ದಾದ ವಿಮಾನಗಳಿಂದಾಗಿ ಲಡಾಖ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರವಾಸಿಗರಿಗೆ ಈಗ ವಾಸಿಸುತ್ತಿರುವ ಹೊಟೇಲ್‌ಗಳಲ್ಲಿ ಉಚಿತ ವಸತಿ ಒದಗಿಸಲು ಬುಧವಾರ ನಡೆದ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಕ್ರಮವು ಲಡಾಖ್‌ನ ಪ್ರವಾಸೋದ್ಯಮ ಕ್ಷೇತ್ರದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಪ್ರವಾಸಿಗರ ಸವಾಲುಗಳನ್ನು ಜವಾಬ್ದಾರಿಯುತವಾಗಿ ಎದುರಿಸುವ ಗುರಿಯನ್ನು ಹೊಂದಿದೆ. ಎಲ್ಲ ಸದಸ್ಯ ಹೋಟೆಲ್ ಹಾಗೂ ವಸತಿ ಗೃಹಗಳ ಮಾಲೀಕರು ಇದನ್ನು ಜಾರಿಗೊಳಿಸುವಂತೆ ಸಂಘವು ಮನವಿ ಮಾಡಿಕೊಂಡಿದೆ.
ಇದೂ ಓದಿ: ಹೋಟೆಲ್‌ಗಳಲ್ಲಿ ನೀವು ಸೇವಿಸುವ ಪನೀರ್ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ