ಬೆಂಗಳೂರು: ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (ಬಿಬಿಎಚ್‌ಎ)ದ ವತಿಯಿಂದ ನಿಯಮಿತವಾಗಿ ಎಫ್‌ಎಸ್‌ಎಸ್‌ಎಐ ಫಾಸ್ಟ್ಯಾಕ್ ಟ್ರೇನಿಂಗ್ ಕೊಡಿಸಲಾಗುತ್ತಿದ್ದು, ಆ ಪ್ರಯುಕ್ತ ಮತ್ತೊಂದು ತರಬೇತಿ ಜೂನ್ 16ರ ಸೋಮವಾರ ನಡೆಯಿತು.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಹಾರ ಉದ್ಯಮದಲ್ಲಿ ಇರುವವರಿಗೆ ʼಫುಡ್ ಸೇಫ್ಟಿ ಟ್ರೇನಿಂಗ್ & ಸರ್ಟಿಫಿಕೇಷನ್ʼ (FoSTaC) ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಿಬಿಎಚ್‌ಎ ತನ್ನ ಸದಸ್ಯ ಹೋಟೆಲ್‌ಗಳ ಸಿಬ್ಬಂದಿಗೆ ನಿಯಮಿತವಾಗಿ ಈ ತರಬೇತಿ ಒದಗಿಸುತ್ತಿದೆ.
ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷರಾದ ಡಾ.ಮುರಳೀಧರ್ ಅವರು ಸ್ಥಳಾವಕಾಶ ಕಲ್ಪಿಸಿಕೊಟ್ಟಿದ್ದು, ಕೆ.ಜಿ.ರಸ್ತೆಯಲ್ಲಿನ ಎಫ್‌ಕೆಸಿಸಿಐ ಟ್ಯಾಲಿ ಹಾಲ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು ಎಂದು ಬಿಎಚ್‌ಎ ಗೌರವಾಧ್ಯಕ್ಷ ಪಿ.ಸಿ.ರಾವ್ ಅವರು ತಿಳಿಸಿದ್ದಾರೆ.

ಕೇಂದ್ರ ಎಫ್‌ಎಸ್‌ಎಸ್‌ಎಐ ಹಾಗೂ ಪರೀಕ್ಷಣ್ ತರಬೇತಿ ಕೇಂದ್ರದ ಸಹಯೋಗದಲ್ಲಿ ನಡೆದ ಈ ತರಬೇತಿ ಸೋಮವಾರ ಎರಡು ಬ್ಯಾಚ್‌ಗಳಲ್ಲಿ ನಡೆದಿದ್ದು, ಬೆಳಗ್ಗಿನ ಬ್ಯಾಚ್‌ನಲ್ಲಿ ಸುಮಾರು 85 ಜನ ಸೇರಿ ಒಟ್ಟು 143 ಮಂದಿ ಭಾಗವಹಿಸಿದ್ದರು. ತರಬೇತಿ ಪಡೆದವರಲ್ಲಿ ವಿವಿಧ ಹೋಟೆಲುಗಳ ಮಾಲೀಕರು, ಮ್ಯಾನೇಜರ್, ಸೂಪರ್‌ವೈಸರ್ ಹಾಗೂ ಇತರ ಕಾರ್ಮಿಕರಿದ್ದರು ಎಂದು ಅವರು ತಿಳಿಸಿದ್ದಾರೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಆಹಾರೋದ್ಯಮ ಸ್ಥಗಿತಗೊಳಿಸಿದರೆ ಮುಕ್ತಾಯ ವರದಿ ಸಲ್ಲಿಕೆ ಕಡ್ಡಾಯ!; ಎಫ್‌ಎಸ್‌ಎಸ್‌ಎಐ ನಿಯಮ
ಇದೂ ಓದಿ: ಬೆಂಗಳೂರಿಗೂ ಬಂತು ತಂಬುಳಿ: ʼತಂಬುಳಿ ಮನೆʼಗೆ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ಟರ ಮೆಚ್ಚುಗೆ



