ಒಳಗೇನಿದೆ!?

ಪಿಎಫ್‌ ವಿಚಾರವಾಗಿ ಇಪಿಎಫ್‌ಒನಿಂದ ಮಹತ್ವದ ಸಲಹೆ: ಮೂರನೇ ವ್ಯಕ್ತಿಗಳ ಬಗ್ಗೆ ಹೀಗಂದಿದ್ಯಾಕೆ?

ನವದೆಹಲಿ: ಭವಿಷ್ಯ ನಿಧಿ(ಪಿಎಫ್‌) ಸಂಬಂಧಿಸಿದ ಕಾರ್ಯಗಳಲ್ಲಿ ಮೂರನೇ ವ್ಯಕ್ತಿಗಳ ಸಹಾಯ ಪಡೆಯುವುದು ಅಪಾಯಕಾರಿ ಎಂದು ತನ್ನ ಸದಸ್ಯರಿಗೆ ಎಚ್ಚರಿಸಿರುವ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ), ಪ್ರಮುಖ ಮಾಹಿತಿ ಸೋರಿಕೆ ಆಗದಂತೆ ನೋಡಿಕೊಳ್ಳುವ ಸಲುವಾಗಿ ಸಂಸ್ಥೆಯ ಆನ್​ಲೈನ್​ ಪೋರ್ಟಲ್​ ಸದಸ್ಯರೇ ಸ್ವತಃ ಬಳಸುವಂತೆ ಸಲಹೆ ನೀಡಿದೆ.

ಹಲವಾರು ಸೈಬರ್​ ಕೆಫೆ ಆಪರೇಟರ್​ಗಳು ಮತ್ತು ಫಿನ್​ಟೆಕ್​ ಕಂಪನಿಗಳು ಇಪಿಎಫ್​ಒ ಸದಸ್ಯರಿಂದ ಉಚಿತ ಸೇವೆಗಳಿಗೂ ದೊಡ್ಡ ಮೊತ್ತ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಬಹಳಷ್ಟು ಸಂದರ್ಭಗಳಲ್ಲಿ, ಈ ಆಪರೇಟರ್​ಗಳು ಇಪಿಎಫ್​ಒದ ಆನ್​ಲೈನ್​ ದೂರು ನಿವಾರಣೆ ಪೋರ್ಟಲ್​ ಬಳಸುತ್ತಾರೆ. ಇದನ್ನು ಸದಸ್ಯರೇ ಖುದ್ದಾಗಿ ಬಳಸಬಹುದು. ಬೇರೆಯವರ ಮೇಲೆ ಅವಲಂಬಿತರಾದರೆ ಸದಸ್ಯರ ಆರ್ಥಿಕ ಮಾಹಿತಿ ಸೋರಿಕೆ ಆಗುತ್ತದೆ. ಈ ಮೂರನೇ ವ್ಯಕ್ತಿಗಳು ಅಥವಾ ಕಂಪನಿಗಳು ಇಪಿಎಫ್​ಒದ ಅಧಿಕೃತ ಪ್ರತಿನಿಧಿಗಳಲ್ಲ ಎಂದು ಇಪಿಎಫ್‌ಒ ತಿಳಿಸಿದೆ.

ಸದಸ್ಯರ ದೂರುಗಳನ್ನು ಇಪಿಎಫ್​ಒ ತನ್ನ ಪೋರ್ಟಲ್​ಗಳಲ್ಲಿ ನೋಂದಾಯಿಸಿಕೊಂಡು ಕಾಲಮಿತಿಯೊಳಗೆ ಪರಿಹರಿಸುತ್ತದೆ. 2024-25ರಲ್ಲಿ 17 ಲಕ್ಷಕ್ಕೂ ಹೆಚ್ಚು ದೂರುಗಳು ಬಂದಿದ್ದು ಆ ಪೈಕಿ ಶೇ. 98ರಷ್ಟು ದೂರುಗಳನ್ನು ಬಗೆಹರಿಸಲಾಗಿದೆ. ಉಮಂಗ್​ ಆ್ಯಪ್​ನಲ್ಲಿ ಮತ್ತು ಇಪಿಎಫ್​ಒದ ಪೋರ್ಟಲ್​ಗಳಲ್ಲಿ ಎಲ್ಲ ಸೇವೆಗಳೂ ಸಂಪೂರ್ಣ ಉಚಿತವಾಗಿದ್ದು, ಏಜೆಂಟ್​ಗಳಿಗೆ ಅಥವಾ ಸೈಬರ್​ ಕೆಫೆಗಳಿಗೆ ಶುಲ್ಕ ತೆರುವ ಅವಶ್ಯಕತೆ ಇಲ್ಲ ಎಂದೂ ಅದು ಸ್ಪಷ್ಟಪಡಿಸಿದೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಬೇಕರಿ-ಕಾಂಡಿಮೆಂಟ್ಸ್, ಬೀಡಾ ಅಂಗಡಿ ಮಾಲೀಕರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ