ಒಳಗೇನಿದೆ!?

ಹೋಟೆಲುಗಳಲ್ಲಿ ತಿನಿಸುಗಳ ಪ್ರದರ್ಶನ ಬೇಡ; ಬೆಂಗಳೂರು ಹೋಟೆಲುಗಳ ಸಂಘದ ಸಲಹೆ

ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಮಾನ್ಯವಾಗಿ ಯಾವುದಾದರೂ ಹೋಟೆಲಿಗೆ ಹೋದಾಗ ಸಿದ್ಧಪಡಿಸಿದ ಆಹಾರವನ್ನು ಅಲ್ಲಿನ ಕ್ಯಾಷ್‌ ಟೇಬಲ್‌ ಬಳಿ ಪ್ರದರ್ಶನಕ್ಕೆ ಇಟ್ಟಿರುವುದು ಕಂಡುಬರುತ್ತದೆ. ಆದರೆ ಇಂಥದ್ದೊಂದು ಪದ್ಧತಿಯನ್ನು ಮುಂದುವರಿಸುವುದು ಸೂಕ್ತವಲ್ಲ ಎಂದು ಬೆಂಗಳೂರು ಹೋಟೆಲುಗಳ ಸಂಘ ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ಪದ್ಧತಿಯನ್ನು ಸ್ಥಗಿತಗೊಳಿಸುವಂತೆಯೂ ಸಲಹೆ ನೀಡಿದೆ.

ನಗರದ ಹೋಟೆಲ್- ರೆಸ್ಟೋರೆಂಟ್ ಹಾಗೂ ಮಾಲ್‌ಗಳಲ್ಲಿ ಗ್ರಾಹಕರನ್ನು ಸೆಳೆಯಲು ಅಥವಾ ಲಭ್ಯ ತಿನಿಸುಗಳ ಕುರಿತು ಗ್ರಾಹಕರಿಗೆ ತಿಳಿಸಲು ಸಿದ್ಧಪಡಿಸಿದ ಖಾದ್ಯಗಳನ್ನು ಪ್ರದರ್ಶನಕ್ಕಿಡುವ ಪದ್ಧತಿಯನ್ನು ಕೈಬಿಡಲು ಬೆಂಗಳೂರು ಹೋಟೆಲ್‌ಗಳ ಸಂಘ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಸಲಹೆ ಹೊರಹೊಮ್ಮಿದೆ.

ಇಡ್ಲಿ, ವಡೆ, ದೋಸೆ, ಬನ್ಸ್, ಪಲಾವ್, ಪರೋಟ ಮುಂತಾದ ತಿನಿಸುಗಳನ್ನು ತಟ್ಟೆಯಲ್ಲಿಟ್ಟು ಪಾರದರ್ಶಕ ಪ್ಲಾಸ್ಟಿಕ್‌ನಿಂದ ಮುಚ್ಚಿಟ್ಟು ಗ್ರಾಹಕರಿಗೆ ಕಾಣುವಂತೆ ಇಡುತ್ತಿರುವುದು ನಗರದ ಹಲವಾರು ಹೋಟೆಲ್‌ಗಳಲ್ಲಿ ನಿತ್ಯದ ಕ್ರಮವಾಗಿದೆ. ಆದರೆ ಇದರ ಬದಲು ಡಿಜಿಟಲ್‌ ಇಲ್ಲವೇ ಸಾಮಾನ್ಯ ಫಲಕದಲ್ಲಿ ಚಿತ್ರಗಳನ್ನು ಬಿತ್ತರಿಸಬೇಕು ಎಂದು ಬಿಎಚ್‌ಎ ಸಲಹೆ ನೀಡಿದೆ.

ಸಿದ್ಧಪಡಿಸಿದ ಆಹಾರ ತಟ್ಟೆಯಲ್ಲಿಟ್ಟು ಪ್ರದರ್ಶಿಸುವ  ಪದ್ಧತಿಯಿಂದ ಆಹಾರ ವ್ಯರ್ಥ ಆಗುತ್ತಿದೆ. ಅಲ್ಲದೆ ಈ ಪ್ರದರ್ಶನದಿಂದ ಹೆಚ್ಚುವ ಏಕಬಳಕೆ ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಈ ಬಗ್ಗೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು, ಗಣ್ಯರು, ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದು, ಈ ಪದ್ಧತಿ ನಿಲ್ಲಿಸುವಂತೆ ಹೇಳುತ್ತಿದ್ದಾರೆ. ಹೀಗಾಗಿ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಈ ಪದ್ದತಿಯನ್ನು ಬಿಡಬೇಕು ಸದಸ್ಯರಿಗೆ ಸಂಘವು ಪತ್ರಮುಖೇನ ಕೋರಿಕೊಂಡಿದೆ.

ಇದೂ ಓದಿ: ಬೇಕರಿ-ಕಾಂಡಿಮೆಂಟ್ಸ್, ಬೀಡಾ ಅಂಗಡಿ ಮಾಲೀಕರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಪಿಎಫ್‌ ಹಣ ಹಿಂಪಡೆಯುವುದು ಈಗ ಮತ್ತಷ್ಟು ಸುಲಭ; ಕ್ಲೇಮ್‌ ಇತ್ಯರ್ಥ ಸರಾಗ..

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ