ಬೆಂಗಳೂರು: ಸರ್ಕಾರದಿಂದ ಸುಂಕ ಸಂಕಟ ಎದುರಿಸುತ್ತಿರುವ ಆತಿಥ್ಯ ಕ್ಷೇತ್ರವು, ಮನವಿ ಬಳಿಕವೂ ಸಕಾರಾತ್ಮಕ ಸ್ಪಂದನೆ ಸಿಗದ್ದರಿಂದ ಇದೀಗ ಅನಿವಾರ್ಯವಾಗಿ ಪ್ರತಿಭಟನೆಗೆ ಮುಂದಾಗಿದೆ. ಅಲ್ಲದೆ, ರಾಜ್ಯಾದ್ಯಂತ ಬಾರ್ಗಳನ್ನು ಬಂದ್ ಮಾಡಲು ನಿರ್ಧರಿಸಿ, ಕರೆ ನೀಡಿದೆ.
ತೆರಿಗೆ ಹೊರೆಯ ವಿರುದ್ಧ ಪರ್ಮಿಟ್ ಕೊಠಡಿಗಳು ಮತ್ತು ಬಾರ್ಗಳನ್ನು ಜುಲೈ 14ರ ಸೋಮವಾರ ಮಹಾರಾಷ್ಟ್ರ ರಾಜ್ಯಾದ್ಯಂತ ಬಂದ್ ಮಾಡಲಾಗುವುದು ಎಂದು ಇಂಡಿಯನ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ (AHAR- ಆಹಾರ್) ತಿಳಿಸಿದೆ.
ನಮ್ಮ ಉದ್ಯಮದ ಮೇಲೆ ವಿಧಿಸಲಾದ ತೆರಿಗೆ ಹೆಚ್ಚಳವನ್ನು ಪ್ರತಿಭಟಿಸಲು ಮಹಾರಾಷ್ಟ್ರದಾದ್ಯಂತ ಎಲ್ಲ ಪರ್ಮಿಟ್ ಕೊಠಡಿಗಳು ಮತ್ತು ಬಾರ್ಗಳು ಸೋಮವಾರ ಸಂಪೂರ್ಣ ಬಂದ್ ಆಗಿರಲಿವೆ ಎಂದು ಆಹಾರ್ ತಿಳಿಸಿದೆ.
ಮದ್ಯದ ಮೇಲಿನ ವ್ಯಾಟ್ ದ್ವಿಗುಣಗೊಳಿಸಲಾಗಿದೆ, ಪರವಾನಗಿ ಶುಲ್ಕ ಶೇ.15 ಹೆಚ್ಚಿಸಲಾಗಿದೆ, ಅಬಕಾರಿ ಸುಂಕವನ್ನು ಶೇ.60 ಏರಿಸಲಾಗಿದೆ. ಈ ಏರಿಕೆ ಅಸಂಖ್ಯಾತ ಸಣ್ಣ ಮತ್ತು ಮಧ್ಯಮ ಸಂಸ್ಥೆಗಳ ಉಳಿವಿಗೆ ಅಪಾಯ ಉಂಟು ಮಾಡುತ್ತವೆ, ಸಾವಿರಾರು ಉದ್ಯೋಗಗಳು ಮತ್ತು ಜೀವನೋಪಾಯಕ್ಕೆ ಆತಂಕ ಒಡ್ಡುವಂತಿವೆ. ಹೀಗಾಗಿ ನ್ಯಾಯಯುತ ನೀತಿಗಳನ್ನು ಒತ್ತಾಯಿಸಲು ಮತ್ತು ಆತಿಥ್ಯ ಕ್ಷೇತ್ರದ ಭವಿಷ್ಯವನ್ನು ರಕ್ಷಿಸಲು ಈ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಆಹಾರ್ ತಿಳಿಸಿದೆ.
Statewide Shutdown on July 14, 2025!
— AHAR – Indian Hotels and Restaurants Association (@AharAssociation) July 11, 2025
Maharashtra Permit Rooms and Bars to Go Bandh Against Unjust Tax Burden
The hospitality industry is raising its voice! On Monday, July 14, 2025, all permit rooms and bars across Maharashtra will observe a complete bandh to protest the unfair… pic.twitter.com/yyuSp8k2oO
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!



