ಬೆಂಗಳೂರು: ಬೇಕರಿ-ಕಾಂಡಿಮೆಂಟ್ಸ್ ಹಾಗೂ ಇತರ ಸಣ್ಣ ವ್ಯಾಪಾರಸ್ಥರು ತೆರಿಗೆ ವಿಚಾರವಾಗಿ ಪ್ರಸ್ತುತ ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಶನಿವಾರ ಸಂಸದೆ ಶೋಭಾ ಕರಂದ್ಲಾಜೆ ಅವರ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಬೆಂಗಳೂರು ಬಂಟರ ಸಂಘದ ಸೇವಾದಳದ ಅಧ್ಯಕ್ಷ ಡಿ.ಬಿ. ಪ್ರತಾಪ್ ಶೆಟ್ಟಿ ನೇತೃತ್ವದಲ್ಲಿ ಸಂಸದರಿಗೆ ಈ ಮನವಿ ಸಲ್ಲಿಸಲಾಗಿದೆ. ಯುಪಿಐ ಪೇಮೆಂಟ್‌ಗಳಿಂದಾಗಿ ಜಿಎಸ್‌ಟಿ ವಿಚಾರವಾಗಿ ಉಂಟಾಗಿರುವ ಸಮಸ್ಯೆಗಳ ಕುರಿತು ಸಂಸದರಿಗೆ ಪ್ರತಾಪ್ ತಿಳಿಸಿದರು.

ʼಇದ್ದಕ್ಕಿದ್ದಂತೆ ಲಕ್ಷಾಂತರ ರೂಪಾಯಿಗಳ ತೆರಿಗೆ ಭರಿಸುವಂತೆ ಸಣ್ಣ ವ್ಯಾಪಾರಸ್ಥರಿಗೆ ನೋಟಿಸ್ ನೀಡಿರುವುದರಿಂದ ಅವರು ಕಂಗಾಲಾಗಿದ್ದಾರೆ. ಸಣ್ಣ ಅಂಗಡಿಯಿಂದ ಜೀವನೋಪಾಯ ನಡೆಸುವವರಿಗೆ ಇದರಿಂದಾಗಿ ಬರಸಿಡಿಲು ಬಡಿದಂತಾಗಿದೆ. ಈ ಸಂಬಂಧ ತಾವು ಮಧ್ಯಸ್ಥಿಕೆ ವಹಿಸಿದರೆ ಇದಕ್ಕೆ ಪರಿಹಾರ ಇಲ್ಲವೇ ತಾರ್ಕಿಕ ಅಂತ್ಯ ಸಿಗಲು ಸಾಧ್ಯʼ ಎಂದು ಕೋರಲಾಗಿದೆ.

ಈ ಬಗ್ಗೆ ಸಂಬಂಧಿತ ಇಲಾಖೆ ಹಾಗೂ ಉನ್ನತ ಅಧಿಕಾರಿ ವರ್ಗದ ಜೊತೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ನಡೆಸುವುದಾಗಿ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ ಎಂದು ಪ್ರತಾಪ್ ಶೆಟ್ಟಿ ತಿಳಿಸಿದ್ದಾರೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ನಾಡಿದ್ದು ರಾಜ್ಯಾದ್ಯಂತ ಬಾರ್‌ಗಳು ಬಂದ್; ಆತಿಥ್ಯ ಉದ್ಯಮ ಕ್ಷೇತ್ರದಿಂದ ಬೃಹತ್ ಪ್ರತಿಭಟನೆ
ಇದೂ ಓದಿ: ಹೋಟೆಲ್‌ಗಳಲ್ಲಿ ನೀವು ಸೇವಿಸುವ ಪನೀರ್ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?



