ನವದೆಹಲಿ: ಈಗಾಗಲೇ ಹಲವು ಅಡ್ಡಿ-ಅಡಚಣೆಗಳನ್ನು ಎದುರಿಸುತ್ತ ಸಂಕಷ್ಟದಲ್ಲಿರುವ ಹೋಟೆಲ್, ಸ್ವೀಟ್ಸ್ಟಾಲ್, ಬೇಕರಿ-ಕಾಂಡಿಮೆಂಟ್ಸ್ ಮಾಲೀಕರಿಗೆ ಇದೀಗ ಇನ್ನೊಂದು ಸಂಕಷ್ಟ ಎದುರಾಗಿದೆ. ಅದರಲ್ಲೂ ಸಮೋಸಾ-ಜಿಲೇಬಿ ಮೂಲಕ ಅಂಥದ್ದೊಂದು ಆತಂಕ ಉಂಟಾಗಿದೆ. ಕೇಂದ್ರ ಸರ್ಕಾರವೇ ಕ್ರಮಕೈಗೊಂಡಿರುವುದರಿಂದ ಪರಿಸ್ಥಿತಿ ಗಂಭೀರವಾಗಿ ಪರಿಣಮಿಸಿದೆ.
ಹೌದು.. ಕೇಂದ್ರ ಆರೋಗ್ಯ ಸಚಿವಾಲಯವು ಅನಾರೋಗ್ಯಕರ ತಿಂಡಿ-ತಿನಿಸುಗಳ ಕುರಿತು ಜನಜಾಗೃತಿ ಮೂಡಿಸಲು ಈ ಹೊಸ ಕ್ರಮಕ್ಕೆ ಮುಂದಾಗಿದೆ. ವಿಶೇಷವೆಂದರೆ, ಸಮೋಸಾ-ಜಿಲೇಬಿಗಳ ಹಿನ್ನೆಲೆಯಲ್ಲಿ ಇದು ಜಾರಿಗೆ ಬರುತ್ತಿದೆ. ಅರ್ಥಾತ್, ಸಮೋಸಾ ಮತ್ತು ಜಿಲೇಬಿಯಂಥ ಆಹಾರ ಪದಾರ್ಥಗಳ ಬಗ್ಗೆಯೂ ಸಿಗರೇಟ್ ಮತ್ತು ತಂಬಾಕು ಪದಾರ್ಥಗಳ ಪ್ಯಾಕ್ ಮೇಲೆ ಇರುವಂಥ ಎಚ್ಚರಿಕೆ ಸಂದೇಶಗಳನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ನಾಗುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್- ನಾಗುರ) ಈ ಪ್ರಕ್ರಿಯೆ ಆರಂಭಿಸಲಿದೆ. ಪಕೋಡಾ, ವಡಾ ಪಾವ್ ಮತ್ತು ಚಾಯ್ ಬಿಸ್ಕತ್ನಂಥ ಜನಪ್ರಿಯ ಸ್ಟ್ಯಾಕ್ಗಳಿಗೆ ಕೂಡ ಈ ಎಚ್ಚರಿಕೆ ಅನ್ವಯವಾಗಲಿದೆ. ಈ ಆಹಾರಗಳಲ್ಲಿ ಎಣ್ಣೆ, ಸಕ್ಕರೆ ಮತ್ತು ಅಪರ್ಯಾಪ್ತ ಕೊಬ್ಬುಗಳ (ಟ್ರಾನ್ಸ್ ಫ್ಯಾಟ್) ಮಟ್ಟ ಅಧಿಕವಾಗಿರುವುದನ್ನು ಈ ಸಂದೇಶಗಳು ಎತ್ತಿ ತೋರಿಸಲಿವೆ. ಪೌಷ್ಟಿಕ ಆಹಾರಗಳಲ್ಲಿನ ಈ ಕೊಬ್ಬುಗಳು ಜೀವನಶೈಲಿಗೆ ಸಂಬಂಧಿಸಿದ ವ್ಯಾಧಿಗಳಿಗೆ ಕಾರಣವಾಗುತ್ತವೆ. ಮಹಾರಾಷ್ಟ್ರದ ನಾಗುರದಲ್ಲಿರುವ ಏಮ್ಸ್ನಲ್ಲಿ ಪ್ರಾಯೋಗಿಕವಾಗಿ ಈ ಅಭಿಯಾನ ಆರಂಭವಾಗಲಿದೆ.
ಇದೂ ಓದಿ: ದೇವಸ್ಥಾನ ನಿರ್ಮಾಣದಿಂದ ಇಲ್ಲಿ ಶೇ.20 ಹೆಚ್ಚಾಯ್ತು ಹೋಟೆಲೋದ್ಯಮದ ವಹಿವಾಟು!
ಭಾರತ ಕೊಬ್ಬಿಗೆ ಸಂಬಂಧಿಸಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳು ಹೆಚ್ಚುತ್ತಿರುವುದರಿಂದ ಅದರ ನಿಯಂತ್ರಣಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ. ಎಣ್ಣೆಯಲ್ಲಿ ಕರಿದ ಮತ್ತು ಸಕ್ಕರೆಯುಕ್ತ ಆಹಾರಗಳನ್ನು ಪದೇಪದೇ ಸೇವಿಸುವುದು ಈ ಸಮಸ್ಯೆಗಳಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಫಲಕಗಳ ಮೂಲಕ ಎಚ್ಚರಿಕೆ ಸಂದೇಶ
ಈ ತಿಂಡಿ-ತಿನಿಸುಗಳು ಸಾಮಾನ್ಯವಾಗಿ ಬಿಡಿಯಾಗಿ ಮಾರಾಟವಾಗುವುದರಿಂದ ಅವುಗಳ ಕುರಿತು ಎಚ್ಚರಿಕೆ ಸಂದೇಶ ಪ್ರಕಟಿಸಲು ಸರ್ಕಾರ ಬೇರೆಯದೇ ವಿಧಾನ ಅನುಸರಿಸಲಿದೆ. ಕೆಫೆಟೇರಿಯಾ ಮತ್ತು ಆಹಾರ ಸೇವನೆಯ ಸಾರ್ವಜನಿಕ ಸ್ಥಳಗಳ ಫುಡ್ ಸ್ಟಾಲ್, ಕೌಂಟರ್ಗಳ ಬಳಿ ಪ್ರಕಾಶಮಾನವಾದ, ಸುಲಭವಾಗಿ ಓದಬಹುದಾದ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ನಾಗ್ಪುರದ ಏಮ್ಸ್ ಕ್ಯಾಂಪಸ್ನಲ್ಲಿ ಈಗಾಗಲೇ ಇಂಥ ಫಲಕಗಳನ್ನು ಅಳವಡಿಸಲಾಗುತ್ತಿದೆ.
ಇದೂ ಓದಿ: ಹೋಟೆಲ್ಗಳಲ್ಲಿ ನೀವು ಸೇವಿಸುವ ಪನೀರ್ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?
ಅಧಿಕೃತ ಸೂಚನೆ ಜಾರಿ
ಬೊಜ್ಜುಯುಕ್ತ ಆಹಾರಗಳಿಗೆ ಸಂಬಂಧಿಸಿ ಎಚ್ಚರಿಕೆ ಫಲಕ ಅಳವಡಿಸುವುದು ಒಂದು ದೊಡ್ಡ ನಿರ್ಧಾರವಾಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ದೇಶಾದ್ಯಂತ ಎಲ್ಲ ಸರ್ಕಾರಿ ಕ್ಯಾಂಟೀನ್ಗಳು ಮತ್ತು ರೆಸ್ಟೋರೆಂಟ್ಗಳ ಗೋಡೆಗಳ ಮೇಲೆ ಇಂಥ ಬೋರ್ಡ್ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು ಭಾರತ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ತೈಲ ಮತ್ತು ಸಕ್ಕರೆ ಕುರಿತ ಫಲಕಗಳನ್ನು ಪ್ರದರ್ಶಿಸುವಂತೆ ಎಲ್ಲ ಕೇಂದ್ರೀಯ ಸಂಸ್ಥೆಗಳಿಗೆ ಆಹಾರ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಆದೇಶಿಸಿದೆ. ಪ್ರತಿದಿನ ತಿನ್ನುವ ಬೆಳಗಿನ ಉಪಾಹಾರದಲ್ಲಿ ಎಷ್ಟು ಸಕ್ಕರೆ ಮತ್ತು ಎಣ್ಣೆ ಅಂಶ ಅಡಗಿದೆ ಎನ್ನುವುದನ್ನು ಈ ವರ್ಣಮಯ ಪೋಸ್ಟರ್ಗಳಲ್ಲಿ ವಿವರಿಸಲಾಗುತ್ತದೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?



