ಬೆಂಗಳೂರು: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರನ್ನು ಮಂಗಳವಾರ ಭೇಟಿಯಾದ ಉದ್ಯೋಗದಾತರ ನಿಯೋಗವು, ಕಾರ್ಮಿಕ ವಲಯದಲ್ಲಿನ ಸವಾಲು-ಸಮಸ್ಯೆಗಳ ಕುರಿತು ಗಹನವಾದ ಮಾತುಕತೆ ನಡೆಸಿದೆ.
ಎಫ್ಕೆಸಿಸಿಐ ಅಧ್ಯಕ್ಷ ಎಂ ಜಿ ಬಾಲಕೃಷ್ಣ, ಕಾರ್ಮಿಕ ಸಮಿತಿ ಅಧ್ಯಕ್ಷ ಪಿ.ಸಿ.ರಾವ್, ಕೃಷಿ ಆಹಾರ ಪ್ರದರ್ಶನ ಸಮಿತಿ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ, ಸಂಘ ಸಮನ್ವಯ ಸಮಿತಿ ಅಧ್ಯಕ್ಷರಾದ ಡಾ. ಬಾಲಾಜಿ ರಾವ್, ನಿರ್ದೇಶಕರಾದ ವೀರೇಂದ್ರ ಕಾಮತ್ ಮತ್ತು ಎಫ್ಕೆಸಿಸಿಐ ಸಂಘ ಸಮನ್ವಯ ಸಮಿತಿ ಸಹ-ಅಧ್ಯಕ್ಷೆ ರೂಪಾ ರಾಣಿ ಅವರನ್ನು ಒಳಗೊಂಡ ನಿಯೋಗವು ಈ ಮಾತುಕತೆಯನ್ನು ನಡೆಸಿತು. ಪ್ರಸ್ತಾಪಿಸಿದ ವಿಷಯಗಳ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಜೊತೆ ಚರ್ಚಿಸುವುದಾಗಿ ಕಾರ್ಮಿಕ ಕಾರ್ಯದರ್ಶಿ ಅವರು ಭರವಸೆ ನೀಡಿದರು.

ಇದೂ ಓದಿ: ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದಿಂದ ಗುರುವಾರ ಬೃಹತ್ ಸಮಾರಂಭ; ಇಲ್ಲಿದೆ ಸಂಪೂರ್ಣ ವಿವರ
ಸಭೆಯಲ್ಲಿ ಚರ್ಚಿಸಿದ ಪ್ರಮುಖ ಅಂಶಗಳು
- ಕಾರ್ಮಿಕ ಇಲಾಖೆಯು 80 ನಿಗದಿತ ಉದ್ಯೋಗಗಳಲ್ಲಿ ಕನಿಷ್ಠ ವೇತನವನ್ನು ಭಾರಿ ಹೆಚ್ಚಳದ ಮೂಲಕ ಪರಿಷ್ಕರಿಸಲು ಪ್ರಸ್ತಾಪಿಸಿ ಬಿಡುಗಡೆ ಮಾಡಿರುವ ಕರಡು ಅಧಿಸೂಚನೆ.
- ಕನಿಷ್ಠ ವೇತನದಲ್ಲಿ ಪ್ರಸ್ತಾಪಿಸಲಾದ ಕಡಿದಾದ ಹೆಚ್ಚಳವು ಒಟ್ಟಾರೆಯಾಗಿ ವ್ಯವಹಾರಕ್ಕೆ ಮತ್ತು ಉದ್ಯೋಗದಾತರಿಗೆ ನೀಡುತ್ತಿರುವ ಹಾನಿಕಾರಕ ಹೊಡೆತ.
- ಕನಿಷ್ಠ ವೇತನ ಕಾಯ್ದೆ ಪ್ರಕಾರ ಸರ್ಕಾರವು ಪ್ರತಿ ನಿದಿತ ಉದ್ಯೋಗಕ್ಕೆ ಸಂಬಂಧಿಸಿದಂತೆ ಕನಿಷ್ಠ ವೇತನದ ವಿಭಿನ್ನ ದರಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸುವ ಅಥವಾ ಪರಿಷ್ಕರಿಸುವ ಅಗತ್ಯ.
- ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾದ ದರಗಳು ಹಿಂದಿನ ಅಧಿಸೂಚನೆಗಿಂತ ಶೇ.40ರಿಂದ 60 ಹೆಚ್ಚಾಗಿದ್ದು, ಇದು ದೇಶದಲ್ಲೇ ಅತ್ಯಧಿಕ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ನಿಯೋಗ ಮಾಡಿಕೊಂಡ ಮನವಿ
- ಕೆಲಸದ ಸಮಯವನ್ನು 9 ರಿಂದ 10 ಗಂಟೆಗಳವರೆಗೆ ಪರಿಷ್ಕರಿಸುವುದನ್ನು ದಯವಿಟ್ಟು ಜಾರಿಗೆ ತನ್ನಿ, ಇದು ಉದ್ಯೋಗಿಗಳಿಗೂ ಪ್ರಯೋಜನಕಾರಿ ಆಗುತ್ತದೆ.
- ಹತ್ತು ಉದ್ಯೋಗಿಗಳವರೆಗಿನ ಸಣ್ಣ ಸಂಸ್ಥೆಗಳಿಗೆ ಎಲ್ಲ ನೋಂದಣಿ ಮತ್ತು ಅನುಸರಣೆ ತೆಗೆದುಹಾಕಿ.
- ಒಪ್ಪಂದ ಪರವಾನಗಿ ನಮೂನೆ 6ರ ಆನ್ಲೈನ್ ನವೀಕರಣ.
- ಕಾರ್ಖಾನೆ ಆವರಣದಲ್ಲಿ ಅಪಘಾತಗಳು ಸಂಭವಿಸಿದಲ್ಲಿ ವಿಚಾರಣೆ ನಡೆಸಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಕಾರ್ಖಾನೆ ನಿರೀಕ್ಷಕರಿಗೆ ಮಾತ್ರ ಎಲ್ಲ ಹಕ್ಕುಗಳಿವೆ. ಆದರೆ ದುರದೃಷ್ಟವಶಾತ್ ಪೊಲೀಸ್ ಇಲಾಖೆಯೂ ಒಳಗೊಳ್ಳುತ್ತದೆ. ಇದು ಉದ್ಯೋಗಿಗಳಿಗೆ ಅನನುಕೂಲಕರ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ



