ಒಳಗೇನಿದೆ!?

ಸಮೋಸಾ-ಜಿಲೇಬಿ ಅಪಾಯಕಾರಿನಾ?; ಫ್ಯಾಕ್ಟ್‌ ಚೆಕ್‌ ಪೋಸ್ಟ್‌ ಹೇಳಿದ್ದೇನು?

ನವದೆಹಲಿ: ಸಮೋಸಾ-ಜಿಲೇಬಿ ಮುಂತಾದ ಕೆಲವು ಆಹಾರಗಳು ಅಪಾಯಕಾರಿ, ಅವುಗಳ ಬಗ್ಗೆ ಎಚ್ಚರಿಕೆಯ ಸಂದೇಶ ಪ್ರಕಟಿಸುವ ಕ್ರಮಕ್ಕೆ ಸೂಚಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆಯೊಂದು ಹೊರಬಿದ್ದಿದೆ.

ಸಮೋಸಾ-ಜಿಲೇಬಿ ಮತ್ತು ಲಡ್ಡುಗಳಂತಹ ಭಾರತೀಯ ತಿಂಡಿಗಳು ಮತ್ತು ಸಿಹಿ ತಿನಿಸುಗಳ ಮೇಲೆ ಎಚ್ಚರಿಕೆಯ ಲೇಬಲ್​ ಅಂಟಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಯಾವುದೇ ಸೂಚನೆ ನೀಡಿಲ್ಲ ಎಂದು ಪ್ರೆಸ್​ ಇನ್‌ಫಾಮೇರ್ಷನ್​ ಬ್ಯೂರೋ (ಪಿಐಬಿ) ಸ್ಪಷ್ಟನೆ ನೀಡಿದೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಕೇಂದ್ರ ಸರ್ಕಾರ ಎಲ್ಲ ಆಹಾರ ಪದಾರ್ಥಗಳಲ್ಲಿರುವ ಕೊಬ್ಬು ಮತ್ತು ಹೆಚ್ಚುವರಿ ಸಕ್ಕರೆ ಕುರಿತು ಜನರಿಗೆ ಅರಿವು ಮೂಡಿಸಲು ಕೆಲಸದ ಸ್ಥಳಗಳಲ್ಲಿ ಆರೋಗ್ಯಕರ ಆಯ್ಕೆಗಳಿಗೆ ಸಲಹೆ ನೀಡಿದೆ. ಆರೋಗ್ಯಕರ ಜೀವನಕ್ಕಾಗಿ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವಂತೆ ಸಲಹೆ ನೀಡಲಾಗಿದೆಯೇ ಹೊರತು ಭಾರತದ ಆಹಾರ ಸಂಸತಿಯನ್ನು ಗುರಿಯಾಗಿಸಿ ಕ್ರಮಕೈಗೊಂಡಿಲ್ಲ ಎಂದು ಪಿಐಬಿ ತಿಳಿಸಿದೆ.

ಇದೂ ಓದಿ: ಕರ್ನಾಟಕ ಹೋಟೆಲ್‌ ಕಾರ್ಮಿಕರ ಸಂಘದಿಂದ ಗುರುವಾರ ಬೃಹತ್‌ ಸಮಾರಂಭ; ಇಲ್ಲಿದೆ ಸಂಪೂರ್ಣ ವಿವರ

ನಾಗರಪುದಲ್ಲಿರುವ ಏಮ್ಸ್​ ಆಸ್ಪತ್ರೆ ದೈನಂದಿನ ತಿಂಡಿಗಳಲ್ಲಿರುವ ಕೊಬ್ಬು ಮತ್ತು ಸಕ್ಕರೆ ಪ್ರಮಾಣವನ್ನು ವಿವರಿಸುವ ಪೋಸ್ಟರ್​ಗಳನ್ನು ಪ್ರದರ್ಶಿಸಬೇಕು, ಈ ಕುರಿತು ಸುತ್ತೋಲೆ ಸ್ವೀಕರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ನೀಡಲಾಗಿದೆ.

ಇದೂ ಓದಿ: ಹೋಟೆಲ್‌ಗಳಲ್ಲಿ ನೀವು ಸೇವಿಸುವ ಪನೀರ್‌ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?

ಇದೂ ಓದಿ:ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ