ಒಳಗೇನಿದೆ!?

ಈ ಎರಡು ದಿನ ಬೀಡಿ-ಸಿಗರೇಟು ಸಿಗೋದು ಕಷ್ಟ; ಸಣ್ಣ ಉದ್ದಿಮೆದಾರರಿಂದ ರಾಜ್ಯಾದ್ಯಂತ ಬಂದ್!

ಎರಡು ದಿನಗಳ ಬಂದ್‌ ಕುರಿತು ಪೂರ್ವಭಾವಿ ಸಭೆಯಲ್ಲಿ ಸೇರಿದ್ದ ಸಣ್ಣ ಉದ್ದಿಮೆದಾರರು.

ಬೆಂಗಳೂರು: ‌ಸಣ್ಣ ಉದ್ದಿಮೆದಾರರು ಸದ್ಯದಲ್ಲೇ ರಾಜ್ಯಾದ್ಯಂತ ಎರಡು ದಿನಗಳ ಕಾಲ ಬಂದ್‌ ನಡೆಸಲು ನಿರ್ಧರಿಸಿದ್ದು, ಆ ಎರಡು ದಿನಗಳಲ್ಲಿ ಬೀಡಿ-ಸಿಗರೇಟ್‌ ಮಾತ್ರವಲ್ಲದೆ ಇತರ ಕೆಲವು ಉತ್ಪನ್ನಗಳು ಸಿಗುವುದು ಕಷ್ಟ ಎನಿಸುವಂಥ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.

ಬೇಕರಿ-ಕಾಂಡಿಮೆಂಟ್ಸ್‌ ಮತ್ತು ಬೀಡಿ-ಸಿಗರೇಟು ವ್ಯಾಪಾರಸ್ಥರು ಸದ್ಯ ಎದುರಿಸುತ್ತಿರುವ ತೆರಿಗೆ ಸಂಕಷ್ಟದ ನಿವಾರಣೆಯ ಯತ್ನವಾಗಿ ಸಣ್ಣ ಉದ್ದಿಮೆದಾರರು ಇಂಥದ್ದೊಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯು ವಾರ್ಷಿಕ 40 ಲಕ್ಷ ರೂಪಾಯಿ ವಹಿವಾಟು ನಡೆಸಿರುವ ಸಣ್ಣ ಉದ್ದಿಮೆದಾರರಿಗೆ ಏಕಾಏಕಿ ನೋಟಿಸ್ ಜಾರಿಗೊಳಿಸಿದ ಕ್ರಮವನ್ನು ವಿರೋಧಿಸಿ ಜು.23 ಮತ್ತು ಜುಲೈ 24ರಂದು ರಾಜ್ಯಾದ್ಯಂತ 2 ದಿನ ಬಂದ್ ಆಚರಿಸಲು ನಿರ್ಧರಿಸಿವೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ತೆರಿಗೆ ಕಟ್ಟುವಂತೆ ಏಕಾಏಕಿ ನೋಟಿಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯ ಕಾರ್ಮಿಕ ಪರಿಷತ್ತು ಎರಡು ದಿನಗಳ ಬಂದ್‌ ನಡೆಸಲು ನಿರ್ಧರಿಸಿದ್ದು, ಜುಲೈ 23-24ರಂದು ಬೇಕರಿ-ಕಾಂಡಿಮೆಂಟ್ಸ್‌ ಹಾಗೂ ಬೀಡಿ-ಸಿಗರೇಟ್‌ ಮಾರಾಟಗಾರರು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ವ್ಯಕ್ತಪಡಿಸಲಿರುವ ಹಿನ್ನೆಲೆಯಲ್ಲಿ ಅವೆರಡು ದಿನ ಹಲವೆಡೆ ಹಾಲು-ಕಾಫಿ-ಟೀ, ಬೇಕರಿ ಉತ್ಪನ್ನ ಮತ್ತು ಬೀಡಿ-ಸಿಗರೇಟುಗಳು ಮಾರಾಟ ಇರುವುದಿಲ್ಲ ಎಂದು ರವಿ ಶೆಟ್ಟಿ ತಿಳಿಸಿದ್ದಾರೆ.

ಎರಡು ದಿನಗಳ ಬಂದ್‌ ಕುರಿತು ಪೂರ್ವಭಾವಿ ಸಭೆಯಲ್ಲಿ ಸೇರಿದ್ದ ಸಣ್ಣ ಉದ್ದಿಮೆದಾರರು.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಯಾವುದೇ ಮುನ್ಸೂಚನೆ ನೀಡದೆ ನೋಟಿಸ್‌ ನೀಡಿರುವುದು ಸರಿಯಲ್ಲ. ಕೆಲವು ಅಂಗಡಿ ಎರಡರಿಂದ ಹತ್ತು ಲಕ್ಷ ರೂ. ಬೆಲೆ ಬಾಳುತ್ತದೆ. ಆದರೆ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸುವಂತೆ ಸೂಚಿಸಿದ್ದು ಸರಿಯಲ್ಲ. ಹೀಗಾಗಿ ಸರ್ಕಾರದ ನಡೆ ವಿರುದ್ಧ ಇಡೀ ರಾಜ್ಯದಲ್ಲಿ ಜು.23 ಮತ್ತು 24ರಂದು ದೊಡ್ಡಮಟ್ಟದ ಹೋರಾಟ ನಡೆಸುತ್ತೇವೆ. ನಂತರ ಜುಲೈ 25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ಎರಡು ದಿನಗಳ ಬಂದ್‌ ಕುರಿತು ಪೂರ್ವಭಾವಿ ಸಭೆಯಲ್ಲಿ ಸೇರಿದ್ದ ಸಣ್ಣ ಉದ್ದಿಮೆದಾರರು.

ಜಿ.ಎಸ್.ಟಿ. ಮಂಡಳಿ ಅಧ್ಯಕ್ಷರೂ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ನೋಟಿಸ್ ಹಿಂಪಡೆಯಬೇಕು ಎಂದು ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ತಿಳಿಸಿದರು. ಕನ್ನಡ ಒಕ್ಕೂಟದ ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ, ಕನ್ನಡ ಭೂಷಣ, ತೆರಿಗೆ ಮಾಹಿತಿದಾರ ಸುಬ್ರಹ್ಮಣ್ಯ, ಗೋವಿಂದ ಬಾಬು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಇದೂ ಓದಿ: ಕರ್ನಾಟಕ ಹೋಟೆಲ್‌ ಕಾರ್ಮಿಕರ ಸಂಘದಿಂದ ಗುರುವಾರ ಬೃಹತ್‌ ಸಮಾರಂಭ; ಇಲ್ಲಿದೆ ಸಂಪೂರ್ಣ ವಿವರ

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ