ಒಳಗೇನಿದೆ!?

ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕಳ್ಳನ ಗೆಸ್ಟ್‌ ಅಪಿಯರೆನ್ಸ್;‌ ಉಂಡೂ ಹೋದ, ಕದ್ಕೊಂಡೂ ಹೋದ..

ಸಾಂಕೇತಿಕ ಎಐ ಚಿತ್ರ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಅತಿಥಿಯ ಸೋಗಿನಲ್ಲಿ ಹಾಜರಾಗುವುದಲ್ಲದೆ, ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಇದೂ ಓದಿ: ಈ ಎರಡು ದಿನ ಬೀಡಿ-ಸಿಗರೇಟು ಸಿಗೋದು ಕಷ್ಟ; ಸಣ್ಣ ಉದ್ದಿಮೆದಾರರಿಂದ ರಾಜ್ಯಾದ್ಯಂತ ಬಂದ್!

ಆಂಧ್ರಪ್ರದೇಶದ ಚಿಂತಕಿಂದಿ ಶ್ರೀನಿವಾಸುಲು (57) ಬಂಧಿತ ಆರೋಪಿ. ಬೆಂಗಳೂರಿನ ʼಶಾಂಗ್ರಿಲಾʼ ಹೋಟೆಲ್‌ನಲ್ಲಿ ಜೂನ್‌ 23ರಂದು ನಡೆದಿದ್ದ ಖಾಸಗಿ ಕಂಪನಿಯ ವಾರ್ಷಿಕ ಸಭೆಗೆ ಹಾಜರಾಗಿದ್ದ ಈತ ಅತಿಥಿಯಂತೆ ಭಾಗಿಯಾಗಿದ್ದ.

ಇದೂ ಓದಿ: ರಜತಗಿರಿ ಪ್ಯಾಲೇಸ್‌ನಲ್ಲಿ ವಾರಪೂರ್ತಿ ಹಲಸಿನ ಖಾದ್ಯ ಮೇಳ; ಇಲ್ಲಿದೆ ಪೂರ್ತಿ ವಿವರ..

ಅಂದು ಈ ಸಭೆಗೆ ಹಾಜರಾಗಿದ್ದ ವಿದೇಶಿ ಅತಿಥಿಯೊಬ್ಬರ ಬ್ಯಾಗ್‌ನಲ್ಲಿದ್ದ ವಿದೇಶಿ ಹಣ ಕಳವಾಗಿತ್ತು. ಈ ಸಂಬಂಧ ಹೋಟೆಲ್‌ ಪ್ರತಿನಿಧಿ ಕೆ.ಸತ್ಯಪ್ರಕಾಶ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆಗಿಳಿದ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಚಿಂತಕಿಂದಿ ಶ್ರೀನಿವಾಸುಲು

ಇದೂ ಓದಿ:ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಆರೋಪಿಯು ಪ್ರತಿಷ್ಠಿತ ಹೋಟೆಲ್‌ಗಳಲ್ಲಿನ ಸಮಾವೇಶ, ಸಭೆ, ಸಮಾರಂಭಗಳಿಗೆ ಅತಿಥಿಗಳ ಸೋಗಿನಲ್ಲಿ ಹೋಗಿ ವಿದೇಶಿ ಕರೆನ್ಸಿ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ ಎಂಬುದು ತಿಳಿದುಬಂದಿದೆ.

ಇದೂ ಓದಿ: ಹೋಟೆಲ್‌ಗಳಲ್ಲಿ ನೀವು ಸೇವಿಸುವ ಪನೀರ್‌ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ