ನವದೆಹಲಿ: ಭಾರತ ಚಹಾ-ಕಾಫಿಗೆ ಹೆಸರಾಗಿರುವುದು, ಇವೆರಡೂ ದೈನಂದಿನ ಅನಿವಾರ್ಯ ಪೇಯ ಎಂಬಂತಾಗಿರುವುದು ಗೊತ್ತಿರುವಂಥ ವಿಚಾರವೇ. ಹೊಸ ಸಂಗತಿ ಏನೆಂದರೆ ಭಾರತದಿಂದ ವಿದೇಶಕ್ಕೆ ರಫ್ತಾಗುತ್ತಿರುವ ಚಹಾ ಪ್ರಮಾಣ ಹೆಚ್ಚಾಗಿರುವುದು.
ಭಾರತದ ಚಹಾ ರಫ್ತು ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ 2024-25ರ ಆರ್ಥಿಕ ವರ್ಷದಲ್ಲಿ ಶೇ. 2.85ರಷ್ಟು ಏರಿಕೆ ಕಂಡಿದೆ. ದೇಶದಿಂದಾದ ಚಹಾ ರಫ್ತು 250.73 ದಶಲಕ್ಷ ಕೆಜಿಯಿಂದ 257.88 ದಶಲಕ್ಷ ಕೆಜಿಗೆ ಏರಿದೆ.
ಇದೂ ಓದಿ: ಜಗತ್ತಿನಲ್ಲೇ ಅತ್ಯಧಿಕ ಚಹಾ ಸೇವನೆ ಇರುವ ದೇಶ ಭಾರತ!
ಉತ್ತರ ಭಾರತದಿಂದ 2024-25ರಲ್ಲಿ ಆದ ರಫ್ತು 149.05 ದಶಲಕ್ಷ ಕೆ.ಜಿ.ಯಿಂದ 161.20 ದಶಲಕ್ಷ ಕೆ.ಜಿ.ಗೆ ತಲುಪಿದ್ದು, ಶೇ. 8.15ರಷ್ಟು ಏರಿಕೆಯಾಗಿದೆ. ದಕ್ಷಿಣ ಭಾರತದಿಂದಾದ ರಫ್ತು 101.68 ದಶಲಕ್ಷ ಕೆ.ಜಿ.ಯಿಂದ 96.68 ದಶಲಕ್ಷ ಕೆ.ಜಿ.ಗೆ ಇಳಿದಿದ್ದು, ಶೇ. 4.92ರಷ್ಟು ಕಡಿಮೆಯಾಗಿದೆ.
ಇದೂ ಓದಿ: ಮಸಾಲಾ ಟೀಯಿಂದ ಕಡುಕಪ್ಪು ಚಹಾದವರೆಗೆ; ಜೀವನವಿಧಾನ..
ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ ಚಹಾ ರಫ್ತು 256.17 ದಶಲಕ್ಷ ಕೆ.ಜಿ. ತಲುಪಿದ್ದು, ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 10.57ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಉತ್ತರ ಭಾರತದಿಂದ 155.49 ದಶಲಕ್ಷ ಕೆ.ಜಿ. ಮತ್ತು ದಕ್ಷಿಣ ಭಾರತದಿಂದ 100.68 ದಶಲಕ್ಷ ಕೆ.ಜಿ. ರಫ್ತಾಗಿದೆ. ಇದು ಕ್ರಮವಾಗಿ ಶೇ. 10.28 ಮತ್ತು ಶೇ. 11.02ರಷ್ಟು ಏರಿಕೆ ಕಂಡಿದೆ ಎಂದು ಚಹಾ ಮಂಡಳಿ ತಿಳಿಸಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಬೆಂಗಳೂರಿನ ಟೀ ಸ್ಟಾಲ್ ಮಾಲೀಕರ ಪತ್ನಿ ಖಾತೆಗೆ ಜಮಾ ಆಯ್ತು 999 ಕೋಟಿ ರೂಪಾಯಿ!; ಪತಿಗೀಗ ಭಾರಿ ಫಜೀತಿ
ಇದೂ ಓದಿ: ಸರ್ಕಾರ ಅಂದುಕೊಂಡಿದ್ದಕ್ಕಿಂತಲೂ ದೊಡ್ಡದಿದೆ ಹೋಟೆಲ್ ಕ್ಷೇತ್ರದ ಗಾತ್ರ-ಸಾಮರ್ಥ್ಯ: ಪ್ರದೀಪ್ ಶೆಟ್ಟಿ



