ನವದೆಹಲಿ: ಉದ್ಯೋಗದಾತರು ಹಾಗೂ ಉದ್ಯೋಗಿಗಳ ವಲಯದಲ್ಲಿ ಹಲವಾರು ಪರಿಷ್ಕರಣೆ-ಸುಧಾರಣೆಗಳಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಇನ್ನೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಪರಿಣಾಮವಾಗಿ ಉದ್ಯೋಗಿಗಳ ವಲಯದಲ್ಲಿ ಸಂತಸ ಮೂಡುವಂತಾಗಿದೆ.
ಈ ಹೊಸ ಸುಧಾರಣೆ ಉದ್ಯೋಗಿಗಳ ಭವಿಷ್ಯ ನಿಧಿ(ಪ್ರಾವಿಡೆಂಟ್ ಫಂಡ್)ಗೆ ಸಂಬಂಧಿಸಿದ್ದಾಗಿದೆ. ಉದ್ಯೋಗಿಗಳು ಪ್ರಸ್ತುತ ತಮ್ಮ ಭವಿಷ್ಯ ನಿಧಿ (ಪಿಎಫ್) ಖಾತೆಯಿಂದ ಹಣ ಸಂಪೂರ್ಣವಾಗಿ ಹಿಂಪಡೆಯಲು ನಿವೃತ್ತಿ ಆಗುವವರೆಗೆ ಕಾಯಬೇಕಾಗಿತ್ತು ಅಥವಾ ಉದ್ಯೋಗ ಕಳೆದುಕೊಂಡು ಕನಿಷ್ಠ ಮೂರು ತಿಂಗಳ ಕಾಲ ನಿರುದ್ಯೋಗಿ ಆಗಿರಬೇಕಿತ್ತು. ಆದರೆ ಇನ್ನು ಕಠಿಣ ಷರತ್ತುಗಳನ್ನು ಹೊಸ ನಿಯಮಗಳ ಮೂಲಕ ಸಡಿಲಗೊಳಿಸಲಾಗುತ್ತದೆ.
ಇದೂ ಓದಿ: ಜಿಎಸ್ಟಿ ಬಳಿಕ ಈಗ ಎಂಆರ್ಪಿ ಕಡೆಗೂ ಸರ್ಕಾರದ ಗಮನ; ಮುಂದೇನಾಗಬಹುದು?
ಅಂದರೆ ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿಯಿಂದ ಇನ್ಮುಂದೆ ಪ್ರತಿ 10 ವರ್ಷಗಳಿಗೊಮ್ಮೆ ದೊಡ್ಡ ಮೊತ್ತವನ್ನು ಅಥವಾ ಸಂಪೂರ್ಣ ಹಣವನ್ನು ಹಿಂಪಡೆಯಲು ಅವಕಾಶ ಸಿಗಲಿದೆ. ಮೊದಲ ಹಂತದಲ್ಲಿ ಪಿಎಫ್ ಖಾತೆಯ ಬ್ಯಾಲೆನ್ಸ್ನ ಶೇ. 60ರಷ್ಟನ್ನು ಹಿಂಪಡೆಯಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ.
ಇದೂ ಓದಿ: ಯುಪಿಐ ವಹಿವಾಟು ನಿಲ್ಲಿಸಿದರೆ ಜಿಎಸ್ಟಿಯಿಂದ ಬಚಾವಾಗಬಹುದೇ?; ವರ್ತಕರಿಗಿನ್ನು ಉಳಿದ ದಾರಿ?
ಈ ಪ್ರಸ್ತಾವನೆ ಇನ್ನೂ ಅಂತಿಮ ರೂಪ ಪಡೆಯುವ ಹಂತದಲ್ಲಿದ್ದು, ಶೀಘ್ರದಲ್ಲೇ ಸರ್ಕಾರ ಈ ಬಗ್ಗೆ ಸ್ಪಷ್ಟ ಘೋಷಣೆ ಮಾಡುವ ಸಾಧ್ಯತೆ ಇದೆ. ಇದು ನಿಯಮವಾಗಿ ಜಾರಿಗೆ ಬಂದರೆ ಇದರಿಂದ ಇಪಿಎಫ್ಒದ 7.4 ಕೋಟಿ ಸದಸ್ಯರಿಗೆ ತುರ್ತು ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಹಾಯವಾಗಲಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಹೋಟೆಲ್ಗಳಲ್ಲಿ ನೀವು ಸೇವಿಸುವ ಪನೀರ್ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?



