ಬೆಂಗಳೂರು: ದ ಫೆಡರೇಷನ್ ಆಫ್ ಹೋಟೆಲ್ & ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್ಎಚ್ಆರ್ಎಐ)ದ 55ನೇ ವಾರ್ಷಿಕ ಸಮಾವೇಶವನ್ನು ರಾಜಧಾನಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
“ಫ್ಯೂಚರ್ ಸ್ಕೇಪ್-2047” ಎಂಬ ಹೆಸರಿನಲ್ಲಿ ಆಯೋಜಿಸಲಾಗಿರುವ ಈ ಸಮಾವೇಶವು ಸೆಪ್ಟೆಂಬರ್ 18ರಿಂದ ಸೆಪ್ಟೆಂಬರ್ 20ರ ವರೆಗೆ ಒಟ್ಟು ಮೂರು ದಿನಗಳ ಕಾಲ ʼಹೋಟೆಲ್ ಕಾನ್ರಾಡ್ʼನಲ್ಲಿ ನಡೆಯಲಿದೆ.
ದೇಶ ಸ್ವಾತಂತ್ರ್ಯ ಗಳಿಸಿ ಈಗಾಗಲೇ 75 ವರ್ಷಗಳಾಗಿದ್ದು, 2047ಕ್ಕೆ ನೂರು ವರ್ಷಗಳನ್ನು ಪೂರೈಸಲಿದೆ. ಹೀಗಾಗಿ ಈ ನಡುವಿನ 25 ವರ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ʼಅಮೃತಕಾಲʼ ಎಂದು ಕರೆದಿದ್ದು, ಕೇಂದ್ರ ಸರ್ಕಾರವು ಈ ಅವಧಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ.
ಇದೂ ಓದಿ: 50 ವರ್ಷಗಳಲ್ಲಿ ಪ್ರಥಮ ಬಾರಿಗೆ ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನ; ಎಫ್ಎಚ್ಆರ್ಎಐಗೆ ಕೆ. ಶ್ಯಾಮರಾಜು ಆಯ್ಕೆ
ಅದೇ ರೀತಿ ಎಫ್ಎಚ್ಆರ್ಐ ಕೂಡ ಮುಂದಿನ 25 ವರ್ಷಗಳಲ್ಲಿ ಭಾರತದ ಆತಿಥ್ಯ ಕ್ಷೇತ್ರ ಹೇಗಿರಬೇಕು ಎನ್ನುವ ಕುರಿತು ಒಂದಷ್ಟು ಕಲ್ಪನೆಗಳನ್ನು ಇರಿಸಿಕೊಂಡಿದ್ದು, “ಫ್ಯೂಚರ್ ಸ್ಕೇಪ್-2047” ಎಂಬ ಹೆಸರಿನಲ್ಲಿ ಈ ಸಮಾವೇಶವನ್ನು ಆಯೋಜಿಸಿದೆ. ಅಲ್ಲದೆ, ʼಹೊಸ ಭಾರತಕ್ಕಾಗಿ ಆತಿಥ್ಯವನ್ನು ಮರು ವ್ಯಾಖ್ಯಾನಿಸುವುದುʼ ಎಂಬ ವಿಷಯವನ್ನು ಕೇಂದ್ರೀಕರಿಸಿ ಈ ಸಮಾವೇಶ ನಡೆಸಲಿದೆ.
ಇದೂ ಓದಿ: ಸರ್ಕಾರ ಅಂದುಕೊಂಡಿದ್ದಕ್ಕಿಂತಲೂ ದೊಡ್ಡದಿದೆ ಹೋಟೆಲ್ ಕ್ಷೇತ್ರದ ಗಾತ್ರ-ಸಾಮರ್ಥ್ಯ: ಪ್ರದೀಪ್ ಶೆಟ್ಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.18ರಂದು ಈ ಸಮಾವೇಶವನ್ನು ಉದ್ಘಾಟಿಸಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ನಾಗರಿಕ ವಿಮಾನಯಾನ ಸಚಿವ ಕೆ.ರಾಮ್ಮೋಹನ್ ನಾಯ್ಡು ಹಾಗೂ ವಿವಿಧ ಕೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಎಫ್ಎಚ್ಆರ್ಎಐನ ಸದಸ್ಯರು ಹಾಗೂ ಸದಸ್ಯರಲ್ಲದ ಸಂಬಂಧಿತರೂ ಈ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ಈ ಲಿಂಕ್ ಮೂಲಕ ತಮ್ಮ ಹೆಸರು ವಿವರ ತುಂಬಿ ನೋಂದಣಿ ಮಾಡಿಕೊಳ್ಳಬಹುದು.
ಬೆಂಗಳೂರಿನ ಕಾನ್ರಾಡ್ ಹೋಟೆಲ್ ಮುಖ್ಯ ಸಮಾವೇಶದ ಸ್ಥಳವಾಗಿದ್ದು, ಪ್ರತಿನಿಧಿಗಳ ವಾಸ್ತವ್ಯಕ್ಕಾಗಿ ಬೆಂಗಳೂರಿನ ತಾಜ್ ಎಂ.ಜಿ.ರಸ್ತೆ, ರಾಡಿಸನ್ ಬೆಂಗಳೂರು ಸಿಟಿ ಸೆಂಟರ್, ದಿ ಪಾರ್ಕ್ ಹೋಟೆಲ್, ದಿ ಚಾನ್ಸರಿ, ದಿ ಚಾನ್ಸರಿ ಪೆವಿಲಿಯನ್, ರಾಯಲ್ ಆರ್ಕಿಡ್ ಸೆಂಟ್ರಲ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇದೂ ಓದಿ: ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಭಾರತದಿಂದ ಒಂದು ವರ್ಷದಲ್ಲಿ ವಿದೇಶಗಳಿಗೆ ರಫ್ತಾದ ಚಹಾ ಪ್ರಮಾಣ ಎಷ್ಟು ಗೊತ್ತೇ?; ಇಲ್ಲಿದೆ ವಿವರ…



